Headlines

ಈ ವಾರ ‘ಬಾಸ್’ ಹಾಗೂ ‘ಅಯೋಗ್ಯ 2’ ತೆರೆಗೆ; ಎದುರಿಸಬೇಕಿದೆ ದೊಡ್ಡ ಸ್ಪರ್ಧೆ – Kannada News | Sathish Ninasam Ayogya 2 and Controversial Movie BOSS Set for Friday Release

ಶುಕ್ರವಾರ ಬಂತೆಂದರೆ ಹೊಸ ಹೊಸ ಸಿನಿಮಾಗಳು ತೆರೆಗೆ ಬರುತ್ತಲೇ ಇರುತ್ತವೆ. ಈಗ ಮತ್ತೆ ಶುಕ್ರವಾರ ಸಮೀಪಿಸಿದೆ. ಈ ವಾರ ಎರಡು ಸಿನಿಮಾಗಳು ತೆರೆಗೆ ಬರುತ್ತಿವೆ. ಎರಡೂ ಭಿನ್ನ ಕಥಾ ಹಂದರ ಹೊಂದಿವೆ. ವಿವಾದದ ಮೂಲಕ ಸುದ್ದಿ ಆದ ‘ಬಾಸ್’ ಹಾಗೂ ನೀನಾಸಂ ಸತೀಶ್ ನಟನೆಯ ‘ಅಯೋಗ್ಯ 2’ (Ayogya 2 Movie) ಈ ವಾರ ರಿಲೀಸ್ ಆಗುತ್ತಿವೆ. ಅವುಗಳ ಬಗ್ಗೆ ಇಲ್ಲಿದೆ ಮಾಹಿತಿ.

‘ಅಯೋಗ್ಯ 2’

2018ರಲ್ಲಿ ಬಿಡುಗಡೆಯಾಗಿ ಸೂಪರ್‌ಹಿಟ್ ಆಗಿದ್ದ ‘ಅಯೋಗ್ಯ’ ಚಿತ್ರದ ಯಶಸ್ಸಿನ ನಂತರ, ನಟ ಸತೀಶ್ ನೀನಾಸಂ ಹಾಗೂ ನಟಿ ರಚಿತಾ ರಾಮ್ ಜೋಡಿ ಮತ್ತೆ ಒಂದಾಗಿ ನಟಿಸುತ್ತಿರುವ ಬಹುನಿರೀಕ್ಷಿತ ಸೀಕ್ವೆಲ್ ‘ಅಯೋಗ್ಯ 2’. ಎಸ್. ಮಹೇಶ್ ಕುಮಾರ್ ನಿರ್ದೇಶನ ಹಾಗೂ ಎಂ. ಮುನೇಗೌಡ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಗ್ರಾಮೀಣ ಹಿನ್ನೆಲೆಯ ಕಾಮಿಡಿ-ಡ್ರಾಮಾ ಚಿತ್ರದಲ್ಲಿ, ಗ್ರಾಮ ಪಂಚಾಯಿತಿ ಸದಸ್ಯನಾದ ನಂತರ ಸಿದ್ಧೇಗೌಡ (ಸತೀಶ್ ನೀನಾಸಂ) ಎದುರಿಸುವ ಹೊಸ ಸವಾಲುಗಳು ಮತ್ತು ರಾಜಕೀಯ ಹಾಸ್ಯ ಪ್ರಸಂಗಗಳನ್ನು ಹೇಳಲಾಗುತ್ತಿದೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದು, ರಚಿತಾ ರಾಮ್, ರವಿಶಂಕರ್, ಸಾಧು ಕೋಕಿಲ, ಶಿವರಾಜ್ ಕೆಆರ್​ ಪೇಟೆ ಹಾಗೂ ಗಿರೀಶ್ ಶಿವಣ್ಣ ಮುಖ್ಯ ಪಾತ್ರಗಳಲ್ಲಿದ್ದಾರೆ.

ಬಾಸ್ ಸಿನಿಮಾ

ವಿ ಲವ ನಿರ್ದೇಶನದಲ್ಲಿ ಹಾಗೂ ತನುಷ್ ಶಿವಣ್ಣ ನಾಯಕನಾಗಿ ನಟಿಸಿರುವ ‘ಬಾಸ್’ ಚಿತ್ರವು ಬಿಡುಗಡೆಗೂ ಮುನ್ನವೇ ತೀವ್ರ ವಿವಾದ ಮತ್ತು ಕಾನೂನು ಹೋರಾಟದ ಮೂಲಕ ಸುದ್ದಿಯಲ್ಲಿತ್ತು. ಈ ಸಿನಿಮಾದ ಕಥೆ ಹಾಗೂ ಟೀಸರ್, ನಟ ದರ್ಶನ್ ಆರೋಪಿ ಆಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಹೋಲುವಂತಿದೆ ಎಂಬ ಮಾತು ಕೇಳಿ ಬಂದಿದೆ. ಈ ಬಗ್ಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಚಿತ್ರದ ಬಿಡುಗಡೆಗೆ ತಡೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ, ಕೋರ್ಟ್ ದರ್ಶನ್ ಅವರ ಅರ್ಜಿಯನ್ನು ವಜಾಗೊಳಿಸಿ ಚಿತ್ರದ ಬಿಡುಗಡೆಗೆ ಹಸಿರು ನಿಶಾನೆ ತೋರಿತು. ಈ ವಾರ ಸಿನಿಮಾ ತೆರೆಗೆ ಬರುತ್ತಿದೆ.

ಇದನ್ನೂ ಓದಿ: ‘ಈ ಅಯೋಗ್ಯನ ಬಗ್ಗೆ ಬಿಟ್ಟುಬಿಡಿ’; ಸಿನಿಮಾ ಬಗ್ಗೆ ಕೇಳಿದ್ದಕ್ಕೆ ನೇರವಾಗಿ ಹೇಳಿದ ಅಭಿಷೇಕ್ ಅಂಬರೀಷ್

ಹೆಚ್ಚಿದ ಸ್ಪರ್ಧೆ

ಈಗ ರಿಲೀಸ್ ಆಗುತ್ತಿರುವ ಸಿನಿಮಾಗಳ ಜೊತೆಗೆ ಕನ್ನಡದ ‘ಕರಾವಳಿ’, ಹಾಲಿವುಡ್​​ನ ‘ಒಡೆಸ್ಸಿ’ ಹಾಗೂ ‘ಸ್ಪೈಡರ್ ಮ್ಯಾನ್​: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾಗಳು ಉತ್ತಮವಾಗಿ ಪ್ರದರ್ಶನ ಕಾಣುತ್ತವೆ. ಈ ಸಿನಿಮಾಗಳು ಜೋರಾಗಿ ಸ್ಪರ್ಧೆ ನೀಡಲಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *