ಜುಲೈ 12ರಿಂದ 18ರವರೆಗೆ ಮೂರನೇ ವಾರವಾಗಿದ್ದು ವಿವಾದ, ಹಿಂಜರಿಕೆ, ದಾಖಲೆ ಪರಿಶೀಲನೆ, ಉದ್ಯೋಗ ಬದಲು, ಹೂಡಕೆಯ ಜವಾಬ್ದಾರಿ, ಒತ್ತಡ ಇಲ್ಲದೇ ಆಲಸ್ಯ ಇವುಗಳೆಲ್ಲ ಇರಲಿದ್ದು, ಸಮಯಕ್ಕೆ ಬೇಕಾದ ಚಾತುರ್ಯ ಇರಬೇಕು. ಸಮಯಸ್ಪೂರ್ತಿಯಿಂದ ವಾರವು ನಿಮ್ಮದಾಗಲಿದೆ.
ಮೇಷ ರಾಶಿ :
ವೃತ್ತಿಜೀವನದಲ್ಲಿ ಹೊಸ ಉತ್ಸಾಹ ಕಂಡುಬರಲಿದೆ. ಮಂಗಳನ ಶುಭ ದೃಷ್ಟಿಯಿಂದಾಗಿ ಕಠಿಣ ಕೆಲಸಗಳನ್ನೂ ಸುಲಭವಾಗಿ ಪೂರ್ಣಗೊಳಿಸುವಿರಿ. ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ವಾದ-ವಿವಾದಗಳಿಗೆ ಇಳಿಯಬೇಡಿ, ನಿಮ್ಮ ಕೆಲಸದ ಕಡೆಗೆ ಮಾತ್ರ ಗಮನಹರಿಸಿ.
ವೃಷಭ ರಾಶಿ :
ನಿಮ್ಮದೇ ರಾಶಿಯಲ್ಲಿ ಮಂಗಳನಿರುವುದರಿಂದ ಆತ್ಮವಿಶ್ವಾಸ ಹೆಚ್ಚಿರುತ್ತದೆ. ಕಠಿಣ ಪರಿಶ್ರಮಕ್ಕೆ ತಕ್ಕ ಮನ್ನಣೆ ಮತ್ತು ಮೇಲಧಿಕಾರಿಗಳಿಂದ ಪ್ರಶಂಸೆ ಸಿಗುವ ಯೋಗವಿದೆ. ಹೊಸ ಜವಾಬ್ದಾರಿಗಳು ಸಿಕ್ಕಾಗ ಹಿಂಜರಿಯದೆ ಮುನ್ನಡೆಯಿರಿ, ಇದು ನಿಮ್ಮ ಬೆಳವಣಿಗೆಗೆ ಸಹಕಾರಿ.
ಮಿಥುನ ರಾಶಿ :
ಬುಧನ ನಡೆ ಹಾಗೂ ಬದಲಾವಣೆಗಳಿಂದಾಗಿ ಸಂವಹನ ಕ್ಷೇತ್ರದಲ್ಲಿ ಇರುವವರಿಗೆ ಉತ್ತಮ ಅವಕಾಶಗಳು ಸಿಗಲಿವೆ. ಪ್ರವಾಸ ಅಥವಾ ವಿದೇಶಿ ಸಂಪರ್ಕಗಳಿಂದ ಲಾಭವಾಗಬಹುದು. ಸಹಿ ಮಾಡುವ ಮುನ್ನ ಯಾವುದೇ ದಾಖಲೆಗಳನ್ನು ಸರಿಯಾಗಿ ಓದಿ ನೋಡುವುದು ಉತ್ತಮ.
ಕರ್ಕಾಟಕ ರಾಶಿ :
ಸೂರ್ಯ ಮತ್ತು ಗುರುವಿನ ಸಂಯೋಜನೆಯು ನಿಮ್ಮ ರಾಶಿಯಲ್ಲೇ ಇರುವುದರಿಂದ ವೃತ್ತಿರಂಗದಲ್ಲಿ ಅತ್ಯಂತ ಸುವರ್ಣ ಅವಕಾಶಗಳು ಎದುರಾಗಲಿವೆ. ಉದ್ಯೋಗ ಬದಲಾವಣೆಗೆ ಇದು ಸೂಕ್ತ ಸಮಯ. ನಾಯಕತ್ವದ ಗುಣಗಳನ್ನು ಪ್ರದರ್ಶಿಸಲು ಸಿಗುವ ಅವಕಾಶವನ್ನು ಕೈಚೆಲ್ಲಬೇಡಿ.
ಸಿಂಹ ರಾಶಿ :
ಶುಕ್ರ ಮತ್ತು ಕೇತುಗಳ ಪ್ರಭಾವದಿಂದಾಗಿ ಸೃಜನಾತ್ಮಕ ಕ್ಷೇತ್ರಗಳಲ್ಲಿ ಇರುವವರಿಗೆ ಉತ್ತಮ ಯಶಸ್ಸು ಸಿಗಲಿದೆ. ಆದರೆ, ಕೆಲಸದ ಒತ್ತಡ ಸ್ವಲ್ಪ ಹೆಚ್ಚಿರಬಹುದು. ಕಚೇರಿಯ ರಾಜಕೀಯದಿಂದ ದೂರವಿರಿ ಮತ್ತು ನಿಮ್ಮ ಗುರಿಯತ್ತ ಮಾತ್ರ ಗಮನವಿರಲಿ.
ಕನ್ಯಾ ರಾಶಿ :
ಉದ್ಯೋಗದಲ್ಲಿ ಸ್ಥಿರತೆ ಇರಲಿದ್ದು, ಹಳೆಯ ಬಾಕಿ ಉಳಿದಿದ್ದ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳಲಿವೆ. ಉದ್ಯಮಿಗಳಿಗೆ ಹೊಸ ಹೂಡಿಕೆಯಿಂದ ಲಾಭವಾಗುವ ಸಾಧ್ಯತೆ ಇದೆ. ಸಹೋದ್ಯೋಗಿಗಳಿಗೆ ಸಹಾಯ ಮಾಡುವುದರಿಂದ ಕಚೇರಿಯಲ್ಲಿ ನಿಮ್ಮ ಗೌರವ ಹೆಚ್ಚುತ್ತದೆ.
ತುಲಾ ರಾಶಿ :
ವೃತ್ತಿ ಜೀವನದಲ್ಲಿ ಪ್ರಗತಿ ಕಂಡುಬರಲಿದೆ. ನಿಮ್ಮ ದಕ್ಷತೆ ಮತ್ತು ಕೌಶಲ್ಯಕ್ಕೆ ತಕ್ಕಂತೆ ಹೊಸ ಯೋಜನೆ ನಿಮ್ಮ ಕೈಸೇರಲಿವೆ. ಸಂಬಳ ಹೆಚ್ಚಳದ ಮಾತುಕತೆ ಸಫಲವಾಗಬಹುದು. ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಉದ್ವೇಗಕ್ಕೆ ಒಳಗಾಗಬೇಡಿ, ತಾಳ್ಮೆಯಿಂದ ಯೋಚಿಸಿ.
ವೃಶ್ಚಿಕ ರಾಶಿ :
ಅದೃಷ್ಟದ ಸಂಪೂರ್ಣ ಬೆಂಬಲ ನಿಮಗಿದೆ. ದೀರ್ಘಕಾಲದಿಂದ ಕಾಯುತ್ತಿದ್ದ ಪದೋನ್ನತಿ ಅಥವಾ ವರ್ಗಾವಣೆಯ ಸುದ್ದಿ ಈ ವಾರ ಸಿಗುವ ಸಾಧ್ಯತೆ ದಟ್ಟವಾಗಿದೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನವನ್ನು ಗೌರವಿಸಿ, ಅದು ನಿಮ್ಮ ಮುಂದಿನ ಹಾದಿಗೆ ಸಹಕಾರಿ.
ಧನು ರಾಶಿ :
ಈ ವಾರ ಕೆಲಸದ ಜವಾಬ್ದಾರಿಗಳು ಹೆಚ್ಚಾಗಬಹುದು. ಕಠಿಣ ಪರಿಶ್ರಮಕ್ಕೆ ತಕ್ಕ ಫಲ ತಕ್ಷಣ ಸಿಗದಿದ್ದರೂ, ಭವಿಷ್ಯದಲ್ಲಿ ಇದು ಉತ್ತಮ ಬುನಾದಿ ಹಾಕಿಕೊಡಲಿದೆ. ಸಾಧನೆಗೆ ಕಳ್ಳ ದಾರಿಗೆ ಮೊರೆ ಹೋಗಬೇಡಿ, ಪ್ರಾಮಾಣಿಕ ಪ್ರಯತ್ನವೇ ನಿಮ್ಮನ್ನು ಯಶಸ್ಸಿನತ್ತ ಮುನ್ನಡೆಸುತ್ತದೆ.
ಮಕರ ರಾಶಿ :
ಪಾಲುದಾರಿಕೆಯ ವ್ಯವಹಾರಗಳಲ್ಲಿ ಉತ್ತಮ ಪ್ರಗತಿ ಇರಲಿದೆ. ಕಚೇರಿಯಲ್ಲಿ ನಿಮ್ಮ ನಿರ್ಧಾರಗಳಿಗೆ ಎಲ್ಲರಿಂದ ಮನ್ನಣೆ ಸಿಗಲಿದ್ದು, ನಿಮ್ಮ ಪ್ರಭಾವ ಹೆಚ್ಚಾಗಲಿದೆ. ನಿಮ್ಮ ಯೋಚನೆಗಳು ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳುವಾಗ ಸ್ವಲ್ಪ ಜಾಗರೂಕರಾಗಿರಿ.
ಇದನ್ನೂ ಓದಿ: ಈ 4 ರಾಶಿಯವರಿಗೆ ಹಣದ ವ್ಯವಹಾರದಲ್ಲಿ ಇರಲಿ ಎಚ್ಚರ; ಸಾಲ ಕೊಡುವ ಮೊದಲು ಯೋಚಿಸಿ
ಕುಂಭ ರಾಶಿ :
ರಾಹುವಿನ ಪ್ರಭಾವದಿಂದಾಗಿ ಕೆಲವು ಸವಾಲುಗಳು ಎದುರಾಗಬಹುದು, ಆದರೆ ನಿಮ್ಮ ಚತುರತೆಯಿಂದ ಅದನ್ನು ನಿಭಾಯಿಸುವಿರಿ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ಶುಭ ವಾರ್ತೆ ಇದೆ. ಕೆಲಸದ ಸ್ಥಳದಲ್ಲಿ ಸೋಮಾರಿತನವನ್ನು ಬಿಟ್ಟು ಚುರುಕಾಗಿರಿ.
ಮೀನ ರಾಶಿ :
ಶನಿಯು ನಿಮ್ಮದೇ ರಾಶಿಯಲ್ಲಿರುವುದರಿಂದ ಜವಾಬ್ದಾರಿಗಳು ಹೆಚ್ಚಲಿವೆ. ಆದಾಗ್ಯೂ, ನಿಮ್ಮ ಕಠಿಣ ಪರಿಶ್ರಮ ಹಾಗೂ ನಿಷ್ಠೆಗೆ ತಕ್ಕಂತೆ ಉದ್ಯೋಗದಲ್ಲಿ ಉತ್ತಮ ಸ್ಥಾನಮಾನ ದೊರೆಯಲಿದೆ. ಒತ್ತಡವನ್ನು ನಿರ್ವಹಿಸಲು ಸಮಯದ ಯೋಜನೆಯನ್ನು ಸರಿಯಾಗಿ ಮಾಡಿಕೊಳ್ಳಿ.
– ಲೋಹಿತ್ ಹೆಬ್ಬಾರ್