ಆಮಿರ್ ಖಾನ್ (Aamir Khan) ದೊಡ್ಡ ಸ್ಟಾರ್ ನಟ ಜೊತೆಗೆ ನಿರ್ಮಾಪಕರೂ ಸಹ. ಅವರ ಒಟ್ಟು ಆಸ್ತಿ ಮೌಲ್ಯ 1880 ಕೋಟಿ ಎನ್ನಲಾಗುತ್ತದೆ. ಸಿನಿಮಾ ನಿರ್ಮಾಣ, ನಟನೆ ಜೊತೆಗೆ ಬೇರೆ ಕೆಲವು ಉದ್ಯಮಗಳಲ್ಲಿಯೂ ಹೂಡಿಕೆ ಮಾಡಿದ್ದಾರೆ. ತಮ್ಮ ಮಗನಿಗಾಗಿ ಸಿನಿಮಾ ನಿರ್ಮಾಣ ಮಾಡಿದ್ದಾರೆ, ಮಗಳ ಸಿನಿಮಾ ಮೇಲೆ ಹೂಡಿಕೆ ಮಾಡಿದ್ದಾ. ಮಗಳಿಗೆ ಉದ್ಯಮ ಹಾಕಿಕೊಂಡಿದ್ದಾರೆ. ಆದರೆ ಆಮಿರ್ ಖಾನ್ ಅವರ ಸಹೋದರ ಹೈದರ್ ಅಲಿ ಖಾನ್ ಮಾತ್ರ ಊಟಕ್ಕೂ ಪರದಾಡುತ್ತಿದ್ದಾರೆ ಮತ್ತು ಗುಡಿಸಿನಂಥಹಾ ಮನೆಯಲ್ಲಿ ವಾಸಿಸುತ್ತಿದ್ದಾರೆ. ಆಮಿರ್ ಅವರ ಸಹೋದರನ ಮಾಜಿ ಪತ್ನಿ ಇವಾ ಗ್ರೋವರ್ ಈ ವಿಷಯ ಬಹಿರಂಗಪಡಿಸಿದ್ದಾರೆ.
ಆಮಿರ್ ಖಾನ್ ಅವರ ಮಲ ಸಹೋದರ ಹೈದರ್ ಅಲಿ ಖಾನ್ ಅವರ ಮಾಜಿ ಪತ್ನಿ ಇವಾ ಗ್ರೋವರ್ ನಟಿ ಆಗಿದ್ದು, ‘ಕರೇಜ್ಮಾ ಕಾ ಕರೇಜ್ಮಾ’, ‘ಶರಾರತ್’ ಮತ್ತು ‘ಬಡೆ ಅಚ್ಛೇ ಲಗ್ತೆ ಹೈ’ ಮುಂತಾದ ಧಾರಾವಾಹಿಗಳಲ್ಲಿನ ಪಾತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಇವಾ, ಆಮಿರ್ ಖಾನ್ ಅವರ ಮಲ ಸಹೋದರ ಹೈದರ್ ಅಲಿ ಖಾನ್ ಅವರೊಂದಿಗೆ ತಮ್ಮ ಮದುವೆಯನ್ನು ಸ್ಮರಿಸಿಕೊಂಡಿದ್ದಾರೆ. ಹೈದರ್ ಜೊತೆಗಿನ ಮದುವೆಯ ಸಂದರ್ಭದಲ್ಲಿ ದೈಹಿಕ ದೌರ್ಜನ್ಯವನ್ನು ಎದುರಿಸಬೇಕಾಯಿತು ಎಂದಿದ್ದಾರೆ.
ಇದನ್ನೂ ಓದಿ:ಮೂರನೇ ವಿವಾಹದ ಬಳಿಕ ವಿವಾದಕ್ಕೆ ಸಿಲುಕಿದ ಆಮಿರ್ ಖಾನ್
ಹೈದರ್ ಪ್ರಸ್ತುತ ಕಷ್ಟಕರ ಪರಿಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ ಎಂದು ಆರೋಪಿಸುತ್ತಾ ಅವರು ಹೇಳಿದ್ದು, ‘ಇವತ್ತು ಹೈದರ್ ಉತ್ತಮ ಸ್ಥಿತಿಯಲ್ಲಿಲ್ಲ. ಅವರಿಗೆ ಸ್ವಂತ ಮನೆಯಿಲ್ಲ ಮತ್ತು ಊಟಕ್ಕೂ ಪರದಾಡುತ್ತಿದ್ದಾರೆ. ಕೆಲವೊಮ್ಮೆ ಯಾರಾದರೂ ಅವರನ್ನು ಗುಡಿಸಿನಲ್ಲಿ ಇರಲು ಬಿಡುತ್ತಾರೆ, ಕೆಲವೊಮ್ಮೆ ಸ್ನೇಹಿತರು ಸಹಾಯ ಮಾಡುತ್ತಾರೆ. ನನಗೆ ಬೇಸರವಾಗುತ್ತದೆ. ಏನೇ ಆಗಿರಲಿ, ಅವರು ಒಂದು ಕಾಲದಲ್ಲಿ ನನ್ನ ಪತಿಯಾಗಿದ್ದರು. ಅವರ ಸುತ್ತಮುತ್ತ ಅವರಿಗೆ ನಿರಂತರವಾಗಿ ಮದ್ಯ ನೀಡುವ ಜನರಿದ್ದಾರೆ. ಅವರನ್ನು ನೋಡಿಕೊಳ್ಳಲು ಯಾರೂ ಇಲ್ಲ. ಅವರ ಸಮಯ ಬಂದಾಗ ಅವರಿಗೆ ಶಾಂತಿ ಸಿಗಲಿ ಎಂದು ಮಾತ್ರ ನಾನು ಪ್ರಾರ್ಥಿಸುತ್ತೇನೆ. ಅವರು ಬಹಳಷ್ಟು ನರಳುತ್ತಿದ್ದಾರೆ’ ಎಂದಿದ್ದಾರೆ.
ತಮ್ಮ ಮದುವೆಯ ಬಗ್ಗೆಯೂ ಮಾತನಾಡಿರು ನಟಿ, ನಾನು ಹೈದರ್ ಅವರನ್ನು ಮದುವೆಯಾದ ಮೂರನೇ ದಿನದಂದೇ ಹೈದರ್ ನನ್ನ ಮೇಲೆ ದೈಹಿಕ ಹಲ್ಲೆ ನಡೆಸಲು ಆರಂಭಿಸಿದರು ಎಂದು ನಟಿ ಆರೋಪಿಸಿದ್ದಾರೆ. ಇದರಿಂದ ತಮ್ಮ ಮೈಮೇಲೆ ಗಾಯದ ಗುರುತುಗಳಾಗಿದ್ದವು ಮತ್ತು ತೀವ್ರ ಆಘಾತಕ್ಕೊಳಗಾಗಿದ್ದೆ, ಹೈದರ್ ಹೆಚ್ಚು ಶಂಕಿತ ಸ್ವಭಾವದವರಾಗುತ್ತಾ ಹೋದರು, ಆಗಿರದ ವಿಷಯಗಳನ್ನೂ ಊಹಿಸಿಕೊಳ್ಳುತ್ತಿದ್ದರು, ಅತಿಯಾದ ಮದ್ಯಪಾನವು ಅವರ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿತು, ಅವರಿಗೆ ಮಾನಸಿಕ ಸಮಸ್ಯೆ ಇತ್ತು ಎಂದು ಅವರು ಹೇಳಿದ್ದಾರೆ.
ಹೈದರ್ ಅಲಿ ಖಾನ್ ಅವರು ಆಮಿರ್ ಖಾನ್ ಅವರ ಮಲ ಸಹೋದರ. ಆಮಿರ್ ಖಾನ್ ಅವರ ತಂದೆ ತಾಹಿರ್ ಖಾನ್ ಅವರ ಎರಡನೇ ಪತ್ನಿ ಶೆಹನಾಜ್ ಅವರ ಮಗ. ಕೆಲ ಸಿನಿಮಾಗಳಲ್ಲಿ ಸಹ ಹೈದರ್ ಅಲಿ ಖಾನ್ ನಟಿಸಿದ್ದರು. ಆದರೆ ಈಗ ಹೀನಾಯ ಸ್ಥಿತಿಯಲ್ಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On – 3:08 pm, Wed, 22 July 26