ಧನುಶ್ (Dhanush), ತಮಿಳು ಚಿತ್ರರಂಗದ ಸ್ಟಾರ್ ನಟರುಗಳಲ್ಲಿ ಒಬ್ಬರು. ಮಾತ್ರವಲ್ಲ, ತನ್ನ ವಾರಗೆಯ ಇತರೆ ನಟರಗಿಂತಲೂ ಭಿನ್ನ ರೀತಿಯ ಕತೆಯ ಆಯ್ಕೆಯಿಂದ ಮಾಸ್ ಪ್ರೇಕ್ಷಕರನ್ನು ಮಾತ್ರವಲ್ಲದೆ, ಗಂಭೀರ ಸಿನಿಮಾ ಪ್ರೇಮಿಗಳ ಫೇವರೇಟ್ ಸಹ ಆಗಿದ್ದಾರೆ. ಅವರ ನಟನೆಯ ಹಲವು ಸಿನಿಮಾಗಳು, ಕೇವಲ ಮಾಸ್ ಅಂಶಗಳನ್ನು ಮಾತ್ರ ಒಳಗೊಳ್ಳದೆ ಕತೆ, ಕ್ರಿಯಾತ್ಮಕತೆ ಹೊಂದಿರುವ ಹಲವು ಸಿನಿಮಾಗಳಲ್ಲಿ ನಟಿಸಿದ್ದು, ಅವುಗಳಲ್ಲಿ ಹಲವು ಸಿನಿಮಾಗಳು ಬ್ಲಾಕ್ ಬಸ್ಟರ್ ಆಗಿವೆ. ಅವುಗಳಲ್ಲಿ ಭಾರಿ ಜನಪ್ರಿಯತೆ ಪಡೆದಿರುವ ಸಿನಿಮಾ ಎಂದರೆ ‘ವಡಾ ಚೆನ್ನೈ’. ಇದೀಗ ಈ ಸಿನಿಮಾದ ಎರಡನೇ ಭಾಗದ ಬಗ್ಗೆ ಸ್ವತಃ ಧನುಶ್ ಮಾತನಾಡಿದ್ದಾರೆ.
ಧನುಶ್ ಅವರ ಯಾವುದಾದರೂ ಸಿನಿಮಾದ ಸೀಕ್ವೆಲ್ಗೆ ಭಾರಿ ಬೇಡಿಕೆ ಇದೆಯೆಂದರೆ ಅದು ‘ವಡಾ ಚೆನ್ನೈ’ಗೆ. ವೆಟ್ರಿಮಾರನ್ ನಿರ್ದೇಶಿಸಿದ್ದ ಈ ಸಿನಿಮಾ ನಿಜ ಘಟನೆಗಳನ್ನು ಆಧರಿಸಿದ ಕಾಲ್ಪನಿಕ ಕತೆ ಒಳಗೊಂಡಿತ್ತು. ಸ್ಲಂ ಯುವಕನೊಬ್ಬ, ತನ್ನ ಮೆಚ್ಚಿನ ವ್ಯಕ್ತಿಯ ಕೊಂದ ಅವನ ಗೆಳೆಯರ ಮೇಲೆ ಸೇಡು ತೀರಿಸಿಕೊಳ್ಳುವ ಕತೆಯನ್ನು ಒಳಗೊಂಡಿತ್ತು ‘ವಡ ಚೆನ್ನೈ’. ಈ ಸಿನಿಮಾದ ಸೀಕ್ವೆಲ್ಗಾಗಿ ಹಲವು ವರ್ಷಗಳಿಂದಲೂ ಅಭಿಮಾನಿಗಳು ಕೇಳುತ್ತಲೇ ಇದ್ದಾರೆ. ಇದೀಗ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ ಧನುಶ್.
ಇದನ್ನೂ ಓದಿ:ಗಾಸಿಪ್ಗಳ ನಡುವೆ ಒಟ್ಟಿಗೆ ನಟಿಸಲಿರುವ ಧನುಶ್-ಮೃಣಾಲ್ ಠಾಕೂರ್
ಇದೀಗ ‘ಕಾರಾ’ ಹೆಸರಿನ ಸಿನಿಮಾನಲ್ಲಿ ನಟಿಸಿರುವ ಧನುಶ್, ಆ ಸಿನಿಮಾದ ಪ್ರಚಾರದ ವೇಳೆ ಮಾತನಾಡಿ, ‘ವಡಾ ಚೆನ್ನೈ 2 ಖಂಡಿತವಾಗಿಯೂ ಬರಲಿದೆ. ಇದು ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚು ಬೇಗನೆ ಮತ್ತು ಭರ್ಜರಿಯಾಗಿಯೇ ಬರುತ್ತದೆ’ ಎಂದಿದ್ದಾರೆ. ‘ಸಿನಿಮಾಕ್ಕೆ ‘ರೈಸ್ ಆಫ್ ಅನ್ಬು’ ಎಂದು ಟ್ಯಾಗ್ಲೈನ್ ಇಡಲಾಗಿದ್ದು, ಪ್ರೇಕ್ಷಕರು ಅಂದುಕೊಂಡಿರುವುದಕ್ಕಿಂತಲೂ ಬೇಗನೆ ಅದು ತೆರೆಗೆ ಬರಲಿದೆ’ ಎಂದಿದ್ದಾರೆ.
ನಿರ್ದೇಶಕ ವೆಟ್ರಿಮಾರನ್ ಪ್ರಸ್ತುತ ಜೂನಿಯರ್ ಎನ್ಟಿಆರ್ ಜೊತೆಗಿನ ಸಿನಿಮಾ ಮತ್ತು ಸೂರ್ಯ ಅಭಿನಯದ ‘ವಾಡಿವಾಸಲ್’ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಎಸ್ಟಿಆರ್ ಜೊತೆಗೆ ‘ಅರಸನ್’ ಹೆಸರಿನ ಸಿನಿಮಾವನ್ನು ಸಹ ತೆಗೆದಿದ್ದಾರೆ. ಈ ಕಾರಣದಿಂದಾಗಿ ‘ವಡಾ ಚೆನ್ನೈ 2’ ತಡವಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಧನುಷ್ ಅವರ ಇತ್ತೀಚಿನ ಮಾತುಗಳು ಚಿತ್ರದ ಕೆಲಸಗಳು ಶೀಘ್ರದಲ್ಲೇ ಆರಂಭವಾಗಲಿವೆ ಎಂಬುದನ್ನು ಸೂಚಿಸಿವೆ.
2018 ರಲ್ಲಿ ತೆರೆಕಂಡಿದ್ದ ‘ವಡಾ ಚೆನ್ನೈ’ ಮೊದಲ ಭಾಗವು ಸಿನಿಮಾ ವಿಮರ್ಶಕರ ಮನಸ್ಸು ಗೆದ್ದಿದ್ದು ಮಾತ್ರವಲ್ಲದೆ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಯಶಸ್ಸು ಕಂಡಿತ್ತು. ಉತ್ತರ ಚೆನ್ನೈನ ಭೂಗತ ಲೋಕದ ಕಥೆಯನ್ನು ಹೊಂದಿದ್ದ ಈ ಸಿನಿಮಾದ ಎರಡನೇ ಭಾಗಕ್ಕಾಗಿ ಅಭಿಮಾನಿಗಳು ಕಳೆದ ಆರು ವರ್ಷಗಳಿಂದ ಕಾಯುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ