Headlines

ಎಐ ಶೃಂಗಸಭೆಯಲ್ಲಿ ಪ್ರದರ್ಶನಕ್ಕಿಟ್ಟಿದ್ದ ವಸ್ತುವೇ ಕಳ್ಳತನ; ಹುಮ್ಮಸ್ಸಿನಲ್ಲಿದ್ದ ಬೆಂಗಳೂರು ಸ್ಟಾರ್ಟಪ್ ಸ್ಥಾಪಕನಿಗೆ ಶಾಕ್ – Kannada News | Bengaluru startup’s patented AI product stolen at Delhi summit, NeoSapien CEO expresses disappointment

ನವದೆಹಲಿ, ಫೆಬ್ರುವರಿ 17: ಇಲ್ಲಿಯ ಭಾರತ್ ಮಂಟಪಂನಲ್ಲಿ ನಡೆಯುತ್ತಿರುವ ಎಐ ಇಂಪ್ಯಾಕ್ಟ್ ಸಮಿಟ್ (AI Impact Summit) ಇಡೀ ಜಗತ್ತಿನ ಗಮನ ಸೆಳೆಯುತ್ತಿದೆ. ಅದರ ಹೊರತಾಗಿಯೂ ಕೆಲವರಿಗೆ ಕಹಿ ಅನುಭವವನ್ನೂ ನೀಡುತ್ತಿದೆ. ಬೆಂಗಳೂರಿನ ನಿಯೋಸೇಪಿಯೆನ್ (NeoSapien) ಎನ್ನುವ ಕಂಪನಿಯ ಪೇಟೆಂಟ್ ಉತ್ಪನ್ನದ ಸ್ಯಾಂಪಲ್​ವೊಂದು ಎಕ್ಸ್​ಪೋ ವೇಳೆ ಕಳ್ಳತನವಾದ ಘಟನೆ ನಡೆದಿದೆ. ಕಂಪನಿಯ ಸಂಸ್ಥಾಪಕ ಹಾಗೂ ಸಿಇಒ ಧನಂಜಯ್ ಯಾದವ್ (Dhananjay Yadav) ಈ ಘಟನೆಯನ್ನು ಎಕ್ಸ್​ನಲ್ಲಿ ಹಂಚಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ.

ಶೃಂಗಸಭೆಯ ಎಕ್ಸ್​ಪೋ ಹಾಲ್​ನಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಇದ್ದಾಗ್ಯೂ ನಿಯೋಸೇಪಿಯನ್​ನ ಎಐ ದಿರಿಸು ಕಳ್ಳತನ ಆಗಿರುವುದು ವಿಪರ್ಯಾಸ. ನಿನ್ನೆ ಸಮಾವೇಶದ ಮೊದಲ ದಿನವೇ (ಫೆ. 16) ಈ ದುರದೃಷ್ಟಕರ ಅನುಭವ ಆಗಿದೆ. ಆ ಘಟನೆ ಹೇಗೆ ನಡೆಯಿತು ಎನ್ನುವುದನ್ನು ಯಾದವ್ ಹಂಚಿಕೊಂಡಿದ್ದು ಹೀಗೆ…

ಇದನ್ನೂ ಓದಿ: ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಬಿಲ್ ಗೇಟ್ಸ್; ವಕ್ತಾರರಿಂದ ಸ್ಪಷ್ಟನೆ

‘ಎಐ ಇಂಪ್ಯಾಕ್ಟ್ ಸಮಿಟ್​ನ ಮೊದಲ ದಿನವೇ ನಮಗೆ ನೋವಿನ ಅನುಭವ ಕೊಟ್ಟಿತು. ಭಾರತದಲ್ಲಿ ಈ ಸಮಿಟ್ ಮೊದಲ ಬಾರಿಗೆ ಆಯೋಜನೆಯಾಗಿದೆ. ಎಐ ಇಕೋಸಿಸ್ಟಂ ಹಾಗೂ ಸರ್ಕಾರದ ಕ್ರಮಗಳಿಗೆ ಬೆಂಬಲ ಕೊಡಲು ವೈಯಕ್ತಿಕವಾಗಿ ಈ ಶೋನಲ್ಲಿ ಪಾಲ್ಗೊಳ್ಳಲು ಹೋಗಿದ್ದೆ. ಆದರೆ, ನಂತರ ನಡೆದದ್ದು ನಿಜಕ್ಕೂ ಆಘಾತಕಾರಿ.

‘ಮಧ್ಯಾಹ್ನ 2 ಗಂಟೆಗೆ ಪ್ರಧಾನಿ ಮೋದಿ ಬರಲಿರುವ ಹಿನ್ನೆಲೆಯಲ್ಲಿ ಜಾಗವನ್ನು ತೆರವುಗೊಳಿಸಲು 12 ಗಂಟೆಗೆ ಭದ್ರತಾ ಸಿಬ್ಬಂದಿ ಆಗಮಿಸಿದರು. ಪೇಟೆಂಟ್ ಪಡೆದ ಭಾರತದ ಮೊದಲ ಎಐ ದಿರಿಸನ್ನು (Neo AI wearable) ಅಭಿವೃದ್ಧಿಪಡಿಸುತ್ತಿರುವುದಾಗಿ ವಿವರಿಸಿ, ಅದನ್ನು ಪ್ರದರ್ಶಿಸಲು ಅವಕಾಶ ಕೊಡಬೇಕೆಂದು ಕೇಳಿಕೊಂಡೆ. ಒಬ್ಬ ಅಧಿಕಾರಿಯು ನನಗೆ ಉಳಿಯಲು ಅವಕಾಶ ಕೊಡುವಂತೆ ಇತರರಿಗೆ ತಿಳಿಸಿದರು. ನಂತರ ಭದ್ರತಾ ಸಿಬ್ಬಂದಿ ಹೊರಟಿತು.

‘ಆ ನಂತರ ಮತ್ತೊಂದು ಗುಂಪು ಬಂದು ಕೂಡಲೇ ಹೊರಹೋಗಬೇಕೆಂದು ನಮಗೆ ಆದೇಶಿಸಿತು. ಭದ್ರತಾ ಸಿಬ್ಬಂದಿ ಮಧ್ಯೆಯೇ ತಾಳಮೇಳದ ಕೊರತೆ ಇದ್ದಂತೆ ಕಂಡಿತು. ನಮ್ಮ ವೇರಬಲ್​ಗಳನ್ನು ತೆಗೆದುಕೊಂಡು ಹೋಗಬೇಕಾ ಎಂದು ಕೇಳಿದೆ. ಹಲವರು ಲ್ಯಾಪ್​ಟಾಪ್​ಗಳನ್ನೇ ಬಿಟ್ಟು ಹೋಗುತ್ತಿದ್ದಾರೆ. ಸೆಕ್ಯೂರಿಟಿಯವರು ನೋಡಿಕೊಳ್ಳುತ್ತಾರೆ ಎಂದರು. ಅವರನ್ನು ನಂಬಿ ನಾನು ಅಲ್ಲಿಂದ ಹೊರಟೆ. ಎಐ ದಿರಿಸು ಸುರಕ್ಷಿತವಾಗಿರುತ್ತೆ ಮತ್ತು ಪ್ರಧಾನಿಗಳ ಗಮನ ಸೆಳೆಯುತ್ತೆ ಅನ್ನೋ ಭರವಸೆ ಇಟ್ಟುಕೊಂಡಿದ್ದೆ.

‘ಮಧ್ಯಾಹ್ನ 12ರಿಂದ ಸಂಜೆ 6ರವರೆಗೆ ಗೇಟ್​ಗಳು ಬಂದ್ ಆದವು. ಅಂದುಕೊಂಡಿದ್ದಕ್ಕಿಂತ ಹೆಚ್ಚು ಹೊತ್ತು ಮುಚ್ಚಿತ್ತು. ಒಳಗೆ ಹೋಗಿ ನೋಡಿದಾಗ ವೇರಬಲ್​ಗಳು ಕಳುವಾಗಿದ್ದವು.

ಇದನ್ನೂ ಓದಿ: AI Impact Summit: ಜನಕಲ್ಯಾಣಕ್ಕೆ ಎಐ ಬಳಕೆ, ಇದು ಭಾರತಕ್ಕಿರುವ ಬದ್ಧತೆ: ಅಶ್ವಿನಿ ವೈಷ್ಣವ್

‘ಅಲ್ಲಿಗೆ ಭದ್ರತಾ ಸಿಬ್ಬಂದಿ ಮಾತ್ರವೇ ಪ್ರವೇಶಾವಕಾಶ ಹೊಂದಿದ್ದರು, ಈ ಕಳ್ಳತನ ಹೇಗೆ ನಡೆಯಿತು? ಇದು ಬಹಳ ನಿರಾಸೆಯ ಘಟನೆ’ ಎಂದು ನಿಯೋ ಸೇಪಿಯನ್ ಸಿಇಒ ಧನಂಜಯ್ ಯಾದವ್ ಬೇಸರ ವ್ಯಕ್ತಪಡಿಸಿದ್ದಾರೆ.

ನಿಯೋಸೇಪಿಯನ್ ಸಿಇಒ ಅವರ ಟ್ವೀಟ್

ಯಾವುದಿದು ನಿಯೋಸೇಪಿಯನ್ ಎಐ ದಿರಿಸು?

ನಿಯೋಸೇಪಿಯನ್ ಕಂಪನಿಯು ನಿಯೋ1 ಎನ್ನುವ ಎಐ ದಿರಿಸನ್ನು ಅಭಿವೃದ್ಧಿಪಡಿಸಿದೆ. ಇದು ಪೆಂಡೆಂಟ್ ರೀತಿ ಕೊರಳಿಗೆ ಧರಿಸಿಕೊಳ್ಳಬಹುದು. ನಮ್ಮ ಮಾತುಗಳನ್ನು ಆಲಿಸಿ, ದಿನದ ಸಾರಾಂಶವನ್ನು ಇದು ಹಿಡಿದಿಟ್ಟು ನಮಗೆ ಉಪಯುಕ್ತ ಮಾಹಿತಿ, ಅಲರ್ಟ್​ಗಳನ್ನು ಇದು ನೀಡಬಲ್ಲುದು. ಇದರ ಬೆಲೆ ಸುಮಾರು 11-15 ಸಾವಿರ ರೂ ಆಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *