Headlines

ಎಕ್ಸಿಟ್ ಪೋಲ್‌ ಬಿಜೆಪಿ ಕಚೇರಿಯಿಂದ ಬಂದಿವೆ, ಬಂಗಾಳದಲ್ಲಿ ಮತ್ತೆ ನಾವೇ ಸರ್ಕಾರ ರಚಿಸುತ್ತೇವೆ; ಮಮತಾ ಬ್ಯಾನರ್ಜಿ ವಿಶ್ವಾಸ – Kannada News | Exit polls rigged Mamata Banerjee claims TMC will win over 226 seats in West Bengal Assembly elections

ಕೊಲ್ಕತ್ತಾ, ಏಪ್ರಿಲ್ 30: ಪಶ್ಚಿಮ ಬಂಗಾಳದ (West Bengal) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ವಿಡಿಯೋ ಸಂದೇಶ ಬಿಡುಗಡೆ ಮಾಡಿದ್ದು, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷವು ನಿರ್ಣಾಯಕ ಗೆಲುವಿನ ಹಾದಿಯಲ್ಲಿದೆ ಎಂದು ಹೇಳಿದ್ದಾರೆ. ಚುನಾವಣೆಯ ಫಲಿತಾಂಶವು ಈಗಾಗಲೇ ತಮ್ಮ ಪಕ್ಷದ ಪರವಾಗಿ ಸ್ಪಷ್ಟವಾಗಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಗೆ ತಮ್ಮ ವಿಶ್ವಾಸವನ್ನು ಬಲಪಡಿಸುತ್ತಾ, “ನಾವು 226ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ” ಎಂದು ಅವರು ಹೇಳಿದ್ದಾರೆ.

“ಎಕ್ಸಿಟ್ ಪೋಲ್‌ಗಳು ಬಿಜೆಪಿ ಕಚೇರಿಯಿಂದ ಬಂದಿವೆ. ಅದರಲ್ಲಿ ಹೇಳಿರುವ ಸಂಖ್ಯೆಗಳು ಕಟ್ಟುಕಥೆಯಾಗಿದ್ದು, ಟಿಎಂಸಿ ಕಾರ್ಯಕರ್ತರನ್ನು ನಿರಾಶೆಗೊಳಿಸುವ ಉದ್ದೇಶವನ್ನು ಹೊಂದಿವೆ” ಎಂದು ಮಮತಾ ಬ್ಯಾನರ್ಜಿ ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ. ತಮ್ಮ ಕ್ಷೇತ್ರವಾದ ಭವಾನಿಪುರದಲ್ಲಿ ಇಡೀ ರಾತ್ರಿ ದಾಳಿಗಳನ್ನು ನಡೆಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: West Bengal Election Exit Poll Results 2026: ಪಶ್ಚಿಮ ಬಂಗಾಳದಲ್ಲಿ ಟಿಎಂಸಿಗೆ ಭಾರೀ ಹಿನ್ನಡೆ; ಬಿಜೆಪಿಗೆ 146-175 ಸ್ಥಾನಗಳ ನಿರೀಕ್ಷೆ

“ಬಿಜೆಪಿ ಅಂತಿಮ ಆಟವಾಡಿದೆ. ನಿಜವಾದ ಅಂಕಿಅಂಶಗಳನ್ನು ಬಿಡುಗಡೆ ಮಾಡಿದ್ದರೆ ಷೇರು ಮಾರುಕಟ್ಟೆಗಳು ಉರುಳುತ್ತಿದ್ದವು. ಜನರು ಒಟ್ಟಾಗಿರಬೇಕು. ಮತ ಎಣಿಕೆಯ ಮೇಲೆ ನಿಗಾ ಇಡಬೇಕು. ರಾತ್ರಿಯಿಡೀ ಎಚ್ಚರವಾಗಿರಿ” ಎಂದು ಅವರು ಹೇಳಿದ್ದಾರೆ.
“ಬಿಜೆಪಿ ಅಂತಿಮ ಆಟ ಆಡಿದೆ. ನಿಜವಾದ ಅಂಕಿ-ಅಂಶಗಳು ಬಿಡುಗಡೆಯಾದರೆ ಷೇರು ಮಾರುಕಟ್ಟೆಗಳು ಕುಸಿಯುತ್ತಿದ್ದವು. ಜನರು ಒಟ್ಟಾಗಿ ಉಳಿಯಬೇಕು ಮತ್ತು ಎಣಿಕೆಯ ಮೇಲೆ ನಿಗಾ ಇಡಬೇಕು” ಎಂದು ಸಿಎಂ ಹೇಳಿದ್ದಾರೆ.

ಇದನ್ನೂ ಓದಿ:  ತಮಿಳುನಾಡಿನಲ್ಲಿ ನಡೆಯಲಿಲ್ಲ ಬಿಜೆಪಿ ಕಮಾಲ್; ಡಿಎಂಕೆ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ

2026ರ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಪಶ್ಚಿಮ ಬಂಗಾಳವನ್ನು ಗೆಲ್ಲುತ್ತದೆ ಎಂದು ಮತದಾನೋತ್ತರ ಸಮೀಕ್ಷೆಗಳು ಅಂದಾಜಿಸಿವೆ. ಚಾಣಕ್ಯ ಸ್ಟ್ರಾಟಜೀಸ್‌ನ ನಿರ್ಗಮನ ಸಮೀಕ್ಷೆಯು ಬಿಜೆಪಿ 150-160 ವಿಧಾನಸಭಾ ಸ್ಥಾನಗಳನ್ನು ಮತ್ತು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯದ ಒಟ್ಟು 294 ವಿಧಾನಸಭಾ ಸ್ಥಾನಗಳಲ್ಲಿ 130-140 ಸ್ಥಾನಗಳನ್ನು ಗಳಿಸುತ್ತದೆ ಎಂದು ಅಂದಾಜಿಸಿದೆ. ಮ್ಯಾಟ್ರಿಜ್ ನಡೆಸಿದ ಸಮೀಕ್ಷೆಯ ಪ್ರಕಾರ, ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 146-161 ಸ್ಥಾನಗಳೊಂದಿಗೆ ಗೆಲ್ಲಲಿದೆ, ಟಿಎಂಸಿ 125ರಿಂದ 140 ಸ್ಥಾನಗಳನ್ನು ಗೆಲ್ಲಲಿದೆ ಎಂದು ಅಂದಾಜಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *