Headlines

ಎರಡನೇ ದಿನವೂ ಭರ್ಜರಿ ಗಳಿಕೆ ಮಾಡಿದ ‘ಕೆಡಿ’; ಧ್ರುವ ಸಿನಿಮಾ ಕಲೆಕ್ಷನ್ ಎಷ್ಟು? – Kannada News | KD Movie Box Office: Dhruva Sarja’s Film Rakes In Crores on Day 2

ಧ್ರುವ ಸರ್ಜಾ (Dhruva Sarja) ನಟನೆಯ ‘ಕೆಡಿ’ ಚಿತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ಕೇಳಿ ಬಂದಿದೆ. ಜೋಗಿ ಪ್ರೇಮ್ ಅವರು ಹಲವು ವರ್ಷಗಳ ಬಳಿಕ ಕಂಬ್ಯಾಕ್ ಮಾಡಿದ್ದಾರೆ ಎಂಬ ಮಾತು ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿದೆ. ಈ ಸಿನಿಮಾಗೆ ಮೊದಲ ದಿನಕ್ಕೆ ಹೋಲಿಸಿದರೆ ಎರಡನೇ ದಿನ ಶೋಗಳ ಸಂಖ್ಯೆ ಕೊಂಚ ಕಡಿಮೆ ಆಗಿದೆ. ಎರಡನೇ ದಿನ ಫ್ಯಾನ್ಸ್ ಶೋ ಇಲ್ಲದಿರುವುದು ಕೂಡ ಇದಕ್ಕೆ ಕಾರಣ. ಹಾಗಾದರೆ, ‘ಕೆಡಿ’ ಸಿನಿಮಾ ಎರಡನೇ ದಿನ ಗಳಿಕೆ ಮಾಡಿದ್ದು ಎಷ್ಟು? ಆ ಬಗ್ಗೆ ಇಲ್ಲಿದೆ ವಿವರ.

‘ಕೆಡಿ’ ಸಿನಿಮಾ ಎರಡನೇ ದಿನ ಬಾಕ್ಸ್ ಆಫೀಸ್​​ನಲ್ಲಿ ಅಬ್ಬರಿಸಿದೆ. ಮೊದಲ ದಿನ ಈ ಚಿತ್ರ 3.5 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಹಾಗೂ 4.1 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿತ್ತು. ಎರಡನೇ ದಿನವೂ ಇದೇ ಟ್ರೆಂಡ್ ಮುಂದುವರಿದಿದೆ. ಸಿನಿಮಾ ರಿಲೀಸ್ ಆಗಿದ್ದು ಏಪ್ರಿಲ್ 30. ಮೇ 1 ಕಾರ್ಮಿಕರ ದಿನಾಚರಣೆ ಪ್ರಯುಕ್ತ ರಜಾ ಇತ್ತು. ಹೀಗಾಗಿ, ಜನರು ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾ ನೋಡಿದ್ದಾರೆ.

ಮೊದಲ ದಿನ ಚಿತ್ರಕ್ಕೆ 845 ಶೋಗಳನ್ನು ನೀಡಲಾಗಿತ್ತು. ಎರಡನೇ ದಿನ ಸಿನಿಮಾಗೆ 817 ಶೋಗಳನ್ನು ನೀಡಲಾಗಿತ್ತು. ಅಂದು 3.50 ಕೋಟಿ ರೂಪಾಯಿ ನೆಟ್​ ಹಾಗೂ 4.1 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಆಗಿದೆ. ಈ ಮೂಲಕ ಚಿತ್ರದ ಗ್ರಾಸ್ ಕಲೆಕ್ಷನ್ ಎರಡು ದಿನಕ್ಕೆ 8.19 ಕೋಟಿ ರೂಪಾಯಿ ಆಗಿದೆ. ನೆಟ್ ಕಲೆಕ್ಷನ್ 7 ಕೋಟಿ ರೂಪಾಯಿ ಆಗಿದೆ.

ಇದನ್ನೂ ಓದಿ: ಧ್ರುವ ಸರ್ಜಾಗೆ ವಿಶ್ ಮಾಡಿ ‘ಕೆಡಿ’ ಚಿತ್ರದ ಬೆಂಬಲಕ್ಕೆ ನಿಂತ ಸ್ಯಾಂಡಲ್​ವುಡ್ ಸೆಲೆಬ್ರಿಟಿಗಳು

ಕೆಡಿ ಚಿತ್ರದಲ್ಲಿ ದೊಡ್ಡದಾದ ಪಾತ್ರವರ್ಗ ಇದೆ. ಧ್ರುವ ಸರ್ಜಾ, ರೀಷ್ಮಾ ನಾಣಯ್ಯ, ರಮೇಶ್ ಅರವಿಂದ್, ರವಿಚಂದ್ರನ್, ಶಿಲ್ಪಾ ಶೆಟ್ಟಿ, ರವಿ ಶಂಕರ್ ಮೊದಲಾದವರು ನಟಿಸಿದ್ದಾರೆ. ಧ್ರುವ ಸರ್ಜಾ ವೃತ್ತಿ ಜೀವನದ ದೃಷ್ಟಿಯಿಂದ ಸಿನಿಮಾ ತುಂಬಾನೇ ಮುಖ್ಯವಾಗಿತ್ತು. ‘ಮಾರ್ಟಿನ್’ ಚಿತ್ರದ ಸೋಲಿನಿಂದ ಅವರು ಕಂಗೆಟ್ಟಿದ್ದರು. ಅವರಿಗೆ ಈ ಚಿತ್ರ ದೊಡ್ಡ ಗೆಲುವು ನೀಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *