ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಅವರು 2024ರ ಅಕ್ಟೋಬರ್ನಲ್ಲಿ ಹೆಣ್ಣು ಮಗುವನ್ನು ಬರಮಾಡಿಕೊಂಡರು. ಮಗುವಿಗೆ ತ್ರಿದೇವಿ ಎಂದು ಹೆಸರು ಇಟ್ಟಿದ್ದರು. ಈಗ ಇವರು ಎರಡನೇ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ.
ಪ್ಯಾರಿಸ್ ಐಫಿಲ್ ಟವರ್ ಎದುರು ನಿಂತು ಹರ್ಷಿಕಾ ಹಾಗೂ ಭುವನ್ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರ ಮೊದಲ ಮಗಳು ಕೂಡ ಇದ್ದಾಳೆ. ಈ ಫೋಟೋ ಗಮನ ಸೆಳೆಯುವ ರೀತಿಯಲ್ಲಿ ಇದೆ. ಹರ್ಷಿಕಾ-ಭುವನ್ ದಂಪತಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.
‘ಈ ಸೆಪ್ಟೆಂಬರ್ನಲ್ಲಿ ನಮ್ಮ ತಾರಾಗಣಕ್ಕೆ ಹೊಸ ಪುಟ್ಟ ತಾರೆ ಸೇರ್ಪಡೆಯಾಗಲಿದೆ ಎಂದು ಘೋಷಿಸಲು ನಮಗೆ ತುಂಬಾ ಸಂತೋಷವಾಗಿದೆ. ನಮ್ಮ ಮನಸ್ಸು ತುಂಬಿವೆ ಮತ್ತು ಸ್ಕ್ರಿಪ್ಟ್ ಪರಿಪೂರ್ಣವಾಗಿ ಕಾಣುತ್ತದೆ. ಧನ್ಯವಾದಗಳು’ ಎಂದು ಭುವನ್ ಬರೆದುಕೊಂಡಿದ್ದಾರೆ.
ಭುವನ್ ಹಾಗೂ ಹರ್ಷಿಕಾಗೆ ದೇವರ ಮೇಲೆ ಅಪಾರ ಭಕ್ತಿ. ಅವರು ಆಗಾಗ ವಿವಿಧ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸುತ್ತಾರೆ. ಅವರು ಈಗ ಮತ್ತಷ್ಟು ದೇವಸ್ಥಾನಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ.
ಹರ್ಷಿಕಾ ಹಾಗೂ ಭುವನ್ ಇಬ್ಬರೂ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಇತ್ತೀಚೆಗೆ ಹರ್ಷಿಕಾ ‘ಚಿ. ಸೌಜನ್ಯ’ ಹೆಸರಿನ ಸಿನಿಮಾ ಅನೌನ್ಸ್ ಮಾಡಿದ್ದರು. ಈ ಚಿತ್ರಕ್ಕೆ ಅವರದ್ದೇ ನಿರ್ದೇಶನ ಇದೆ. ಈ ಸಿನಿಮಾ ಯಾವ ಹಂತದಲ್ಲಿದೆ ಎಂಬ ಕುತೂಹಲ ಮೂಡಿದೆ.




