Headlines

ಎರಡು ಲಕ್ಷ ರೂ. ಇದ್ದ ಹಣದ ಬ್ಯಾಗ್ ಕದ್ದೊಯ್ದು, ಮರದ ಮೇಲೆ ಕುಳಿತು ನೋಟಿನ ಮಳೆ ಸುರಿಸಿದ ಕೋತಿ – Kannada News

ಬುಲಂದ್‌ಶಹರ್, ಜೂನ್ 02: ಸಾಮಾನ್ಯವಾಗಿ ಕೋತಿ(Monkey)ಗಳು ಜನರ ಕೈಯಿಂದ ಮೊಬೈಲ್, ಹಣ್ಣು, ಪರ್ಸ್​, ಕನ್ನಡಕ ಇತ್ಯಾದಿ ಕಸಿದುಕೊಳ್ಳುವುದನ್ನು ಕಂಡಿದ್ದೇವೆ. ಆದರೆ ಉತ್ತರ ಪ್ರದೇಶದ ನ್ಯಾಯಾಲಯದ ಆವರಣದಲ್ಲಿ ಕೋತಿಯೊಂದು 2 ಲಕ್ಷ ರೂ. ಇದ್ದ ಬ್ಯಾಗ್​ ಕದ್ದೊಯ್ದು, ಮರದ ಮೇಲೆ ಕುಳಿತು ಹಣದ ಮಳೆ ಸುರಿಸಿರುವ ವಿಡಿಯೋ ವೈರಲ್ ಆಗಿದೆ.

ಬೇವಿನ ಮರದಲ್ಲಿ ‘ನೋಟುಗಳ ಮಳೆ’
ನ್ಯಾಯಾಲಯದ ಆವರಣದಲ್ಲಿ ವ್ಯಕ್ತಿಯೊಬ್ಬರು ಹಣದ ಚೀಲದೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ, ಇದ್ದಕ್ಕಿದ್ದಂತೆ ಪ್ರತ್ಯಕ್ಷವಾದ ಕೋತಿಯು ಚೀಲವನ್ನು ಕಸಿದುಕೊಂಡು ಕ್ಷಣಾರ್ಧದಲ್ಲಿ ಹತ್ತಿರದ ಬೇವಿನ ಮರವನ್ನು ಹತ್ತಿದೆ. ಚೀಲದೊಳಗೆ ಹಣ್ಣು ಅಥವಾ ಬಿಸ್ಕತ್ತು ಇರಬಹುದೆಂದು ಭಾವಿಸಿದ ಕೋತಿ, ಬ್ಯಾಗ್ ಜಿಪ್ ತೆರೆದು ನೋಟುಗಳ ಕಂತೆಗಳನ್ನು ಹೊರತೆಗೆಯಲು ಆರಂಭಿಸಿದೆ. ನಂತರ ಒಂದೊಂದೇ ನೋಟುಗಳನ್ನು ಗಾಳಿಯಲ್ಲಿ ತೂರಲಾರಂಭಿಸಿತು.

ವಿಡಿಯೋ

ಹಣ ಆಯ್ದುಕೊಂಡ ಜನರು: ಮರದಿಂದ 500 ರೂ. ಮುಖಬೆಲೆಯ ನೋಟುಗಳು ಗಾಳಿಯಲ್ಲಿ ತೇಲುತ್ತಾ ಕೆಳಗೆ ಬೀಳುತ್ತಿದ್ದಂತೆ, ನ್ಯಾಯಾಲಯದ ಆವರಣದಲ್ಲಿ ಕೋಲಾಹಲ ಸೃಷ್ಟಿಯಾಗಿತ್ತು. ಕೆಳಗೆ ನಿಂತಿದ್ದ ಸಾರ್ವಜನಿಕರು ಹಾಗೂ ವಕೀಲರು ನೋಟುಗಳನ್ನು ಸಂಗ್ರಹಿಸಿ, ಮಾಲೀಕರಿಗೆ ಸಹಾಯ ಮಾಡಲು ಮುಂದಾದರು. ಸ್ವಲ್ಪ ಸಮಯದವರೆಗೆ ಇಡೀ ಆವರಣ ಆಕಾಶದಿಂದ ಹಣದ ಮಳೆಯಾಗುತ್ತಿರುವಂತೆ ಕಾಣಿಸುತ್ತಿತ್ತು.

ಮತ್ತಷ್ಟು ಓದಿ: Video Viral: ಕೋತಿ ಜೊತೆಯೇ ಚೇಷ್ಟೆ ಮಾಡಲು ಹೋದ್ರೆ ಏನಾಗುತ್ತೆ ನೋಡಿ; ವಿಡಿಯೋ ವೈರಲ್​

ಸಾಮಾಜಿಕ ಜಾಲತಾಣದಲ್ಲಿ ನಗುವಿನ ಅಲೆ
ಈ ಇಡೀ ರೋಚಕ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ತಮಾಷೆಯ ಕಾಮೆಂಟ್‌ಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.ಬಂದರ್ ಬಾಬಾ ಇಂದು ಎಲ್ಲರಿಗೂ ಉಚಿತ ಬೋನಸ್ ನೀಡುತ್ತಿದ್ದಾರೆ ಎಂದು ಒಬ್ಬರು ಬರೆದರೆ, ಇಷ್ಟು ದಿನ ಸಿನಿಮಾಗಳಲ್ಲಿ ಮಾತ್ರ ಹಣದ ಮಳೆ ನೋಡಿರುತ್ತೀರಿ, ಇಂದು ಕೋತಿರಾಯ ನಿಜವಾಗಿಯೇ ಆಸೆ ಈಡೇರಿಸಿದ್ದಾನೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಯಾರಿಗೂ ಯಾವುದೇ ಹಾನಿಯಾಗದೆ, ಕಳೆದುಹೋದ ಹಣವು ವಾಪಸ್ ಸಿಗುವಂತಾದ ಈ ಅಪರೂಪದ ವೀಡಿಯೊ ಲಕ್ಷಾಂತರ ವೀಕ್ಷಣೆಗಳನ್ನು ಪಡೆದು ಇಂಟರ್ನೆಟ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *