Headlines

ಎಲ್ಲಾ ಪಂದ್ಯಗಳನ್ನು ಗೆದ್ದರೂ ಆಸ್ಟ್ರೇಲಿಯಾ ಇನ್ನೂ ಕೂಡ ಸೆಮಿಫೈನಲ್​ಗೇರಿಲ್ಲ! – Kannada News | Why Australia Women Haven’t Sealed Semis Spot Yet

ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್ 2026 ರಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡವು ಭರ್ಜರಿ ಪ್ರದರ್ಶನ ಮುಂದುವರಿಸಿದೆ. ಆಡಿದ ನಾಲ್ಕೂ ಪಂದ್ಯಗಳನ್ನು ಗೆಲುವು ದಾಖಲಿಸಿರುವ ಆಸೀಸ್ ಪಡೆ ಒಟ್ಟು 8 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಇದಾಗ್ಯೂ ಆಸ್ಟ್ರೇಲಿಯಾ ತಂಡ ಅಧಿಕೃತವಾಗಿ ಸೆಮಿಫೈನಲ್​ಗೇರಿಲ್ಲ ಎಂಬುದು ವಿಶೇಷ.

ಸತತ ನಾಲ್ಕು ಪಂದ್ಯಗಳನ್ನು ಗೆದ್ದು, +4.724 ರಷ್ಟು ಬೃಹತ್ ನೆಟ್ ರನ್ ರೇಟ್ ಹೊಂದಿದ್ದರೂ ಸಹ ಆಸೀಸ್ ಪಡೆಯ ಸೆಮಿಫೈನಲ್​ ಎಂಟ್ರಿ ಖಚಿತವಾಗದಿರಲು ಮುಖ್ಯ ಕಾರಣ ಈ ಕೆಳಗಿನಂತಿದೆ.

ಸೆಮಿಫೈನಲ್​ಗೇರಿಲ್ಲ ಯಾಕೆ?

ಗ್ರೂಪ್ ‘A’ ನಲ್ಲಿ ಆಸ್ಟ್ರೇಲಿಯಾ ತನ್ನ 4 ಪಂದ್ಯಗಳನ್ನು ಆಡಿ ಮುಗಿಸಿದೆ. ಆದರೆ ಗ್ರೂಪ್‌ನ ಇತರ ಪ್ರಮುಖ ತಂಡಗಳಾದ ಭಾರತ, ಸೌತ್ ಆಫ್ರಿಕಾ ಮತ್ತು ಬಾಂಗ್ಲಾದೇಶ್ ತಂಡಗಳು ಕೇವಲ 3 ಪಂದ್ಯಗಳನ್ನು ಆಡಿದ್ದು, ಈ ತಂಡಗಳಿಗೆ ತಲಾ ಎರಡೆರಡು ಪಂದ್ಯಗಳು ಬಾಕಿ ಇವೆ.

ಪ್ರಸ್ತುತ ಭಾರತ, ಸೌತ್ ಆಫ್ರಿಕಾ ಮತ್ತು ಬಾಂಗ್ಲಾದೇಶ್ ತಂಡಗಳು ತಲಾ 4 ಅಂಕಗಳನ್ನು ಹೊಂದಿವೆ. ಅಂದರೆ ಮುಂದಿನ ಎರಡು ಪಂದ್ಯಗಳ ಮೂಲಕ ಈ ಟೀಮ್​ಗಳಿಗೂ 8 ಅಂಗಳನ್ನು ಪಡೆಯಲು ಅವಕಾಶವಿದೆ.

  • ಭಾರತ ತಂಡವು ತನ್ನ ಮುಂದಿನ ಪಂದ್ಯದಲ್ಲಿ ಬಾಂಗ್ಲಾದೇಶ್ ಹಾಗೂ ಆಸ್ಟ್ರೇಲಿಯಾವನ್ನು ಸೋಲಿಸಿದರೆ 8 ಅಂಕ ತಲುಪುತ್ತದೆ.
  • ಸೌತ್ ಆಫ್ರಿಕಾ ತಂಡವು ನೆದರ್​ಲೆಂಡ್ಸ್ ಮತ್ತು ಬಾಂಗ್ಲಾದೇಶ್ ವಿರುದ್ಧ ಜಯ ಸಾಧಿಸಿದರೆ 8 ಅಂಕಗಳನ್ನು ಪಡೆಯಲಿದೆ.
  • ಬಾಂಗ್ಲಾದೇಶ್ ತಂಡವು ಭಾರತ ಮತ್ತು ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಜಯ ಸಾಧಿಸಿದರೆ 8 ಅಂಕಗಳನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ.

ಅಂದರೆ ಪ್ರಸ್ತುತ ಅಂಕ ಪಟ್ಟಿಯಲ್ಲಿ 8 ಅಂಕಗಳನ್ನು ಹೊಂದಿರುವ ಆಸ್ಟ್ರೇಲಿಯಾ ತಂಡದ ಪಾಯಿಂಟ್ಸ್​ ಅನ್ನು ಸರಿದೂಗಿಸಲು ಮೂರು ತಂಡಗಳಿಗೆ ಅವಕಾಶವಿದೆ. ಒಂದು ವೇಳೆ ಅಂಕ ಪಟ್ಟಿಯಲ್ಲಿ ಮೂರು ತಂಡಗಳು 8 ಅಂಕಗಳನ್ನು ಪಡೆದುಕೊಂಡರೆ, ನೆಟ್​ ರನ್ ರೇಟ್ ಲೆಕ್ಕಾಚಾರ ಬರಲಿದೆ.

ಇದನ್ನೂ ಓದಿ: ಯಾರಿಂದಲೂ ಸಾಧ್ಯವಾಗದ ವಿಶ್ವ ದಾಖಲೆ ನಿರ್ಮಿಸಿದ ಕ್ರಿಸ್ಟಿಯಾನೊ ರೊನಾಲ್ಡೊ

ಹೀಗಾಗಿಯೇ 4 ಗೆಲುವು ದಾಖಲಿಸಿದರೂ ಆಸ್ಟ್ರೇಲಿಯಾ ತಂಡ ಅಧಿಕೃತವಾಗಿ ಸೆಮಿಫೈನಲ್​ಗೇರಿಲ್ಲ. ಒಂದು ವೇಳೆ ಆಸೀಸ್ ಪಡೆ ತನ್ನ ಮುಂದಿನ ಪಂದ್ಯದಲ್ಲಿ ಭಾರತ ತಂಡವನ್ನು ಸೋಲಿಸಿದರೆ ಆಸ್ಟ್ರೇಲಿಯಾ ತಂಡ ಸೆಮಿಫೈನಲ್​ಗೆ ಎಂಟ್ರಿ ಕೊಡಲಿದೆ. ಹೀಗಾಗಿ ಜೂನ್ 28 ರಂದು ನಡೆಯಲಿರುವ ಕೊನೆಯ ಪಂದ್ಯವು ಆಸ್ಟ್ರೇಲಿಯಾ ಹಾಗೂ ಭಾರತ ತಂಡಗಳಿಗೆ ನಿರ್ಣಾಯಕ ಎನ್ನಬಹುದು.

Source link

Leave a Reply

Your email address will not be published. Required fields are marked *