
ಬೆಂಗಳೂರು, ಏಪ್ರಿಲ್ 2: ವಿದ್ಯಾರ್ಥಿ ಜೀವನದಲ್ಲೇ ಸರಿಯಾದ ಕರಿಯರ್ ಆಯ್ಕೆ ಮಾಡಿಕೊಳ್ಳುವುದು ಬಹಳ ಮುಖ್ಯ, ಹಾಗು ಬಹಳ ಕಷ್ಟಕರ ಕೆಲಸವೂ ಹೌದು. ಈ ಕಾರ್ಯವನ್ನು ಸುಲಭವಾಗಿಸಬಲ್ಲುದು ಟಿವಿ9 ಕನ್ನಡ ಎಜುಕೇಶ್ ಸಮಿಟ್ 2026 (TV9 Kannada Education Summit). ಬೆಂಗಳೂರಿನ ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಏಪ್ರಿಲ್ 10ರಿಂದ 12ರವರೆಗೆ ಮೂರು ದಿನಗಳ ಕಾಲ ನಡೆಯುವ ಮಹಾ ಕಾರ್ಯಕ್ರಮ ಶಿಕ್ಷಣದ ಭವಿಷ್ಯ ಹೆಜ್ಜೆಗಳನ್ನು ಗುರುತಿಸಲು ಸಹಕಾರಿಯಾಗುತ್ತದೆ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಅದ್ಭುತವಾದ ವೇದಿಕೆ ಇದಾಗಿದೆ.
ನಿಮ್ಮ ಕನಸುಗಳು ತೆರೆಯಲು ಅನುವಾಗಿಸಿ…
ನೀವು ಉನ್ನತ ಶಿಕ್ಷಣ ಮಾಡಬೇಕೆಂದು ಆಲೋಚಿಸುತ್ತಿದ್ದು, ಯಾವ ಕೋರ್ಸ್ ಆಯ್ದುಕೊಳ್ಳಬೇಕು, ಎಲ್ಲಿ ಅವಕಾಶಗಳಿವೆ ಎಂದು ಅರಸುತ್ತಿರುವ ವಿದ್ಯಾರ್ಥಿಯಾಗಿದ್ದರೆ ಇಗೋ ನಿಮಗಾಗಿ ಇದೆ ಟಿವಿ9 ಕನ್ನಡ ಎಜುಕೇಶ್ ಸಮಿಟ್. ಹಾಗೆಯೇ, ನಿಮ್ಮ ಮಗ ಅಥವಾ ಮಗಳ ಶಿಕ್ಷಣದ ದಿಕ್ಕುದೆಸೆ ನಿರ್ಧರಿಸಬೇಕೆಂದಿರುವ ಪೋಷಕರು ನೀವಾಗಿದ್ದರೆ ನಿಮಗೂ ಒಳ್ಳೆಯ ಪ್ಲಾಟ್ಫಾರ್ಮ್ ಇದು. ಈ ಎಜುಕೇಶನ್ ಸಮಿಟ್ನಲ್ಲಿ ಅಗ್ರಮಾನ್ಯ ಕಾಲೇಜುಗಳು, ಯೂನಿವರ್ಸಿಟಿಗಳು ಒಂದೇ ವೇದಿಕೆಯಲ್ಲಿ ಕಾಣಸಿಗುತ್ತವೆ. ಪೋಷಕರು ಮತ್ತು ವಿದ್ಯಾರ್ಥಿಗಳು ಒಂದೇ ಕಡೆ ಎಲ್ಲವನ್ನೂ ಅವಲೋಕಿಸಿ ಮಾಹಿತಿ ತಿಳಿದುಕೊಳ್ಳಬಹುದು.
ವಿವಿಧ ಕೋರ್ಸ್ಗಳ ಪ್ರಪಂಚವೇ ಅನಾವರಣ
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಟಿವಿ9 ಕನ್ನಡ ಶಿಕ್ಷಣ ಶೃಂಗಸಭೆಯಲ್ಲಿ ಅನೇಕ ವಿಭಾಗಗಳಲ್ಲಿ ಯಾವ್ಯಾವ ಕೋರ್ಸ್ಗಳು ಲಭ್ಯ ಇವೆ ಎಂಬುದನ್ನು ತಿಳಿಯಬಹುದು. ಈ ಕೆಳಕಾಣಿಸಿದ ವಿಭಾಗಗಳ ಕೋರ್ಸ್ಗಳ ಮಾಹಿತಿ ಅಲ್ಲಿ ಸಿಗುತ್ತದೆ:
- ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ
- ಔಷಧ ಮತ್ತು ಹೆಲ್ತ್ಕೇರ್
- ಫಾರ್ಮಸಿ
- ಮ್ಯಾನೇಜ್ಮೆಂಟ್ ಮತ್ತು ಬ್ಯುಸಿನೆಸ್ ಸ್ಟಡೀಸ್
- ಕಲೆ ಮತ್ತು ವಿಜ್ಞಾನ
- ಕಾಮರ್ಸ್ ಮತ್ತು ಫೈನಾನ್ಸ್
- ಹೋಟೆಲ್ ಮ್ಯಾನೇಜ್ಮೆಂಟ್
- ಅನಿಮೇಶನ್ ಮತ್ತು ಕ್ರಿಯೇಟಿವ್ ಕ್ಷೇತ್ರ
- ಅಗ್ನಿ ಶಾಮಕ ಹಾಗೂ ತಜ್ಞ ಕೋರ್ಸ್
ಇವಲ್ಲದೆ ಇನ್ನೂ ಹಲವು ವಿಭಾಗಗಳಲ್ಲಿ ಕೋರ್ಸ್ಗಳಿದ್ದು, ಅವೆಲ್ಲವನ್ನೂ ಅವಲೋಕಿಸಬಹುದು. ಎಐ ಕಲಿಯಲು ಇರುವ ಕೋರ್ಸ್ಗಳ ಬಗ್ಗೆ ಮಾರ್ಗದರ್ಶನ ಪಡೆಯಬಹುದು.
ತಜ್ಞರಿಂದ ನೇರವಾಗಿ ಮಾಹಿತಿ ಪಡೆಯಿರಿ…
ಟಿವಿ9 ಕನ್ನಡ ಎಜುಕೇಶನ್ ಸಮಿಟ್ನಲ್ಲಿ ಕಾಣುವ ಬಹಳ ಮುಖ್ಯ ಸಂಗತಿ ಎಂದರೆ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮಾರ್ಗದರ್ಶನ ಕೊಡಲು ಅಪ್ಪಟ ವೃತ್ತಿಪರರು ಉಪಸ್ಥಿತರಿರುತ್ತಾರೆ. ಶಿಕ್ಷಣ ಸಂಸ್ಥೆಗಳ ವೃತ್ತಿಪರರೊಂದಿಗೆ ನೇರವಾಗಿ ಮಾತನಾಡಿ ನಿಮ್ಮ ಸಂದೇಹ, ಗೊಂದಲಗಳನ್ನು ಪರಿಹರಿಸಿಕೊಳ್ಳಬಹುದು.
ಕೋರ್ಸ್ಗಳ ಆಳ ಅಗಲ; ಅಡ್ಮಿಶನ್ ಆಗುವುದು ಹೇಗೆ; ಕೋರ್ಸ್ ಸೇರಲು ಅರ್ಹತಾ ಮಾನದಂಡ; ಪ್ರವೇಶ ಪರೀಕ್ಷೆ; ಸ್ಪರ್ಧಾತ್ಮಕ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವುದು ಹೇಗೆ ಎಂಬಿತ್ಯಾದಿ ಮಾಹಿತಿ ಮತ್ತು ಮಾರ್ಗದರ್ಶನ ಪಡೆಯಲು ಅವಕಾಶ ಇರುತ್ತದೆ.
ಟಿವಿ9 ಕನ್ನಡ ಎಜುಕೇಶನ್ ಸಮಿಟ್ 2026 ವಿವರ
- ಸಮಿಟ್ ದಿನಾಂಕ: 2026ರ ಏಪ್ರಿಲ್ 10, 11 ಮತ್ತು 12, ಶುಕ್ರವಾರದಿಂದ ಭಾನುವಾರದವರೆಗೆ
- ಸಮಯ: ಬೆಳಗ್ಗೆ 10ರಿಂದ ಸಂಜೆ 7ರವರೆಗೆ
- ಸ್ಥಳ: ಬೆಂಗಳೂರಿನ ಅರಮನೆ ಮೈದಾನ, ತ್ರಿಪುರ ವಾಸಿನಿ.
ಗಮನಿಸಿ: ಕಾರ್ಯಕ್ರಮಕ್ಕೆ ಎಲ್ಲರಿಗೂ ಪ್ರವೇಶ ಉಚಿತ ಇರುತ್ತದೆ. ಸಾಕಷ್ಟು ಪಾರ್ಕಿಂಗ್ ಸ್ಥಳಾವಕಾಶ ಇರುತ್ತದೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ