
ನವದೆಹಲಿ, ಮೇ 26: ‘ಎದ್ದೇಳು ಮಗನೇ…’ ಎನ್ನುತ್ತಾ ಅಸಹಾಯಕ ತಾಯಾನೆ ತನ್ನ ಸತ್ತ ಮರಿಯಾನೆಯನ್ನು ಸೊಂಡಿಲಿನಿಂದ ಎಬ್ಬಿಸಲು ಪ್ರಯತ್ನಿಸುತ್ತಿರುವ ದೃಶ್ಯ ನೋಡಿದರೆ ಎಂಥವರ ಕಣ್ಣೂ ತುಂಬಿ ಬರುತ್ತದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ವೈರಲ್ (Viral Video) ಆಗುತ್ತಿದ್ದು , ಜನರು ಭಾವುಕರಾಗುತ್ತಿದ್ದಾರೆ. ಛತ್ತೀಸ್ಗಢದಲ್ಲಿ ಈ ಘಟನೆ ನಡೆದಿದೆ. ಧರ್ಮಜೈಗಢ ಅರಣ್ಯ ವಿಭಾಗದ ಛಲ್ ಬೆಟ್ಟದಲ್ಲಿ 39 ಆನೆಗಳ ಹಿಂಡು ತಡರಾತ್ರಿ ಪುಸಲ್ಡಾ ಗ್ರಾಮದ ಬಳಿಯ ಕೊಳದಲ್ಲಿ ಸ್ನಾನ ಮಾಡಲು ಬಂದಿತ್ತು. ಈ ಘಟನೆಯಲ್ಲಿ, ಮರಿ ಆನೆಯೊಂದು ಆಳವಾದ ನೀರಿಗೆ ಹೋಗಿ ಮುಳುಗಿ ಸಾವನ್ನಪ್ಪಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ