ಪ್ರಭಾಸ್ (Prabhas), ಭಾರತದ ಟಾಪ್ ಪ್ಯಾನ್ ಇಂಡಿಯಾ ಸ್ಟಾರ್ ನಟ. ಕೋಟ್ಯಂತರ ಅಭಿಮಾನಿಗಳನ್ನು ಅವರು ಹೊಂದಿದ್ದಾರೆ. ಇತರೆ ಸ್ಟಾರ್ ನಟ-ನಟಿಯರು ತಮ್ಮ ಅಭಿಮಾನಿಗಳೊಟ್ಟಿಗೆ ಸಂಪರ್ಕದಲ್ಲಿರಲು, ಸದಾ ಟ್ರೆಂಡಿಂಗ್ನಲ್ಲಿರಲು ಸೋಷಿಯಲ್ ಮೀಡಿಯಾ ಅನ್ನು ಬಲು ಪರಿಣಾಮಕಾರಿಯಾಗಿ ಬಳಸುತ್ತಾರೆ. ಈಗಿನ ಸ್ಟಾರ್ ನಟಿಯರು ಸಾಮಾಜಿಕ ಜಾಲತಾಣವನ್ನು ಬಲು ಗಂಭೀರವಾಗಿ ಪರಿಗಣಿಸಿದ್ದಾರೆ. ಆದರೆ ನಟ ಪ್ರಭಾಸ್ ಇದಕ್ಕೆ ವ್ಯತಿರಿಕ್ತ. ಅವರು ಸಾಮಾಜಿಕ ಜಾಲತಾಣದಲ್ಲಿ ಬಹಳ ಇನ್ಯಾಕ್ಟಿವ್. ಸಾಮಾಜಿಕ ಜಾಲತಾಣದಿಂದ ಪ್ರಭಾಸ್ ಅದೆಷ್ಟು ದೂರವೆಂದರೆ ಏಳು ವರ್ಷಗಳಿಂದಲೂ ಅವರು ತಮ್ಮ ಡಿಪಿ ಬದಲಿಸಿರಲಿಲ್ಲ. ಈಗ ಏಳು ವರ್ಷಗಳ ಬಳಿಕ ಇನ್ಸ್ಟಾಗ್ರಾಂ ಡಿಪಿ ಬದಲಿಸಿದ್ದಾರೆ.
ಹೌದು, ನಟ ಪ್ರಭಾಸ್ ಬರೋಬ್ಬರಿ ಏಳು ವರ್ಷಗಳ ಬಳಿಕ ತಮ್ಮ ಡಿಪಿ ಬದಲಾವಣೆ ಮಾಡಿದ್ದಾರೆ. ಏಳು ವರ್ಷಗಳ ಹಿಂದೆ ಪ್ರಭಾಸ್, ‘ಬಾಹುಬಲಿ’ ಸಿನಿಮಾದ ತಮ್ಮದೇ ಚಿತ್ರವನ್ನು ಇನ್ಸ್ಟಾಗ್ರಾಂಗೆ ಡಿಪಿಯಾಗಿ ಇರಿಸಿಕೊಂಡಿದ್ದರು. ಆ ಚಿತ್ರವನ್ನು ಇಷ್ಟು ವರ್ಷಗಳಾದರೂ ಅವರು ಬದಲಾವಣೆ ಮಾಡಿರಲಿಲ್ಲ. ಈಗ ಏಳು ವರ್ಷಗಳ ಬಳಿಕ ಮೊದಲ ಬಾರಿಗೆ ತಮ್ಮ ಡಿಪಿ ಬದಲಾಯಿಸಿದ್ದಾರೆ.
ಈಗ ‘ಬಾಹುಬಲಿ’ ಸಿನಿಮಾದ ಚಿತ್ರವನ್ನು ತೆಗೆದಿರುವ ಪ್ರಭಾಸ್, ತಮ್ಮ ಹೊಸ ಸಿನಿಮಾ ‘ಫೌಜಿ’ಯ ಪೋಸ್ಟರ್ ಅನ್ನು ತಮ್ಮ ಡಿಪಿ ಆಗಿ ಹಾಕಿಕೊಂಡಿದ್ದಾರೆ. ಪಂಚೆ ಧರಿಸಿ, ಬರಿ ಮೈಯಲ್ಲಿ ಪ್ರಭಾಸ್ ಕೂತಿರುವ ಚಿತ್ರ ಇದಾಗಿದೆ. ಪ್ರಭಾಸ್ ಸುತ್ತ ಹೆಣಗಳ ರಾಶಿ, ಪ್ರಭಾಸ್ ಮೈ ರಕ್ತದಿಂದ ನೆನೆದಿದೆ. ಕೆಲ ವಾರಗಳ ಹಿಂದಷ್ಟೆ ‘ಫೌಜಿ’ ಚಿತ್ರತಂಡವು ಈ ಪೋಸ್ಟರ್ ಅನ್ನು ಬಿಡುಗಡೆ ಮಾಡಿತ್ತು. ಇದೀಗ ಫೋಟೊವನ್ನು ಡಿಪಿ ಆಗಿ ಇರಿಸಿಕೊಂಡಿದ್ದಾರೆ ಪ್ರಭಾಸ್. ‘ಫೌಜಿ’ ಸಿನಿಮಾದ ಮೇಲೆ ಪ್ರಭಾಸ್ ಅವರಿಗೆ ಭಾರಿ ನಿರೀಕ್ಷೆ, ಆತ್ಮವಿಶ್ವಾಸ ಇರುವ ಕಾರಣದಿಂದಲೇ ಪ್ರಭಾಸ್ ಅವರು ಸಿನಿಮಾದ ಫೋಟೊವನ್ನು ತಮ್ಮ ಡಿಪಿಗೆ ಇರಿಸಿಕೊಂಡಿದ್ದಾರೆ ಎನ್ನುತ್ತಿದ್ದಾರೆ ಅಭಿಮಾನಿಗಳು.
ಇದನ್ನೂ ಓದಿ:‘ರಾಮಾಯಣ’ ಟ್ರೈಲರ್ ಬಿಡುಗಡೆ ಆದರೆ ಟ್ರೆಂಡ್ ಆಗುತ್ತಿರುವುದು ಪ್ರಭಾಸ್, ಏಕೆ?
‘ಫೌಜಿ’ ಸಿನಿಮಾವನ್ನು ರಘು ಹನುಪುಡಿ ನಿರ್ದೇಶನ ಮಾಡಿದ್ದಾರೆ. ತೆಲುಗಿನ ಕಲ್ಟ್ ಕ್ಲಾಸಿಕ್ ಸಿನಿಮಾ ‘ಸೀತಾ ರಾಮಂ’ ನಿರ್ದೇಶನ ಮಾಡಿರುವುದು ಇದೇ ರಘು ಹನುಪುಡಿ. ಸಿನಿಮಾ ಡಿಸೆಂಬರ್ 3ಕ್ಕೆ ರಿಲೀಸ್ ಆಗಲಿದೆ. ‘ಫೌಜಿ’ ಜೊತೆಗೆ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಸ್ಪಿರಿಟ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆಗೆ ‘ಕಲ್ಕಿ 2898 ಎಡಿ’ ಸಿನಿಮಾನಲ್ಲೂ ನಟಿಸುತ್ತಿದ್ದಾರೆ. ಈ ಮೂರೂ ಸಿನಿಮಾಗಳ ಬಳಿಕ ‘ಸಲಾರ್ 2’ ಸಿನಿಮಾನಲ್ಲಿ ನಟಿಸಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ