ಐತಿಹಾಸಿಕ ಮೇಲುಕೋಟೆ ವೈರಮುಡಿ ಉತ್ಸವಕ್ಕೆ ಸ್ಪಾನ್ಸರ್​​: ಖಾಲಿ ಆಯ್ತಾ ಸರ್ಕಾರದ ಖಜಾನೆ?

ಐತಿಹಾಸಿಕ ಮೇಲುಕೋಟೆ ವೈರಮುಡಿ ಉತ್ಸವಕ್ಕೆ ಸ್ಪಾನ್ಸರ್​​: ಖಾಲಿ ಆಯ್ತಾ ಸರ್ಕಾರದ ಖಜಾನೆ?

ಮಂಡ್ಯ, ಮಾರ್ಚ್​​ 18: ವೈರಮುಡಿ ಉತ್ಸವ ಕರ್ನಾಟಕದ ಅತ್ಯಂತ ಭವ್ಯ ಆಚರಣೆಗಳಲ್ಲೊಂದು. ವಜ್ರಖಚಿತ ಕಿರೀಟಧಾರಿಯಾದ ಶ್ರೀ ಚೆಲುವನಾರಾಯಣಸ್ವಾಮಿಯನ್ನು (Cheluvanarayana Swamy) ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಭಕ್ತಿ ಮತ್ತು ಸಂಸ್ಕೃತಿಯ ಸಮ್ಮಿಲನವಾಗುವ ಈ ಉತ್ಸವದಲ್ಲಿ ಈಗ ಹೊಸ ವಿವಾದವೊಂದು ಸೃಷ್ಟಿಯಾಗಿದೆ. ಸರ್ಕಾರದಿಂದ ನಡೆಯುತ್ತಿದ್ದ ಉತ್ಸವ ಇದೀಗ ಖಾಸಗಿ ಪ್ರಾಯೋಜಕತ್ವಕ್ಕೆ ಮೊರೆ ಹೋಗಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಆದರೆ ಇದಕ್ಕೆ ಅಧಿಕಾರಿಗಳು ಕೊಡುತ್ತಿರುವ ಉತ್ತರವೇ ಬೇರೆ.

ಪ್ರಯೋಜಕತ್ವಕ್ಕೆ ಮೊರೆ ಹೋದ ಸರ್ಕಾರ?

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನಲ್ಲಿರುವ ಐತಿಹಾಸಿಕ ಧಾರ್ಮಿಕ ಕ್ಷೇತ್ರ ಮೇಲುಕೋಟೆಯಲ್ಲಿ ಮಾರ್ಚ್ 23 ರಿಂದ ಏಪ್ರಿಲ್ 4ರವರೆಗೆ ವೈರಮುಡಿ ಬ್ರಹ್ಮೋತ್ಸವ ನೆರವೇರಲಿದೆ. ಮಾರ್ಚ್ 28ರಂದು ನಡೆಯಲಿರುವ ವೈರಮುಡಿ ಕಿರೀಟಧಾರಣ ಮಹೋತ್ಸವಕ್ಕೆ ರಾಜ್ಯ, ಹೊರ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಪ್ರತಿವರ್ಷ ಅದ್ದೂರಿ ಉತ್ಸವಕ್ಕೆ ಅನುದಾನ ನೀಡುತ್ತ ಬಂದಿದ್ದ ಸರ್ಕಾರ ಈ ಉತ್ಸವಕ್ಕೆ ಹಣ ಬಿಡುಗಡೆ ಮಾಡದೆ‌ ಖಾಸಗಿ ಪ್ರಯೋಜಕತ್ವಕ್ಕೆ ಮುಂದಾದರಾ ಅನ್ನೋ ಪ್ರಶ್ನೆ ಮೂಡಿದೆ.

ಇದನ್ನೂ ಓದಿ: 110 ಅಡಿಗೆ ಇಳಿದ ಕೃಷ್ಣರಾಜ ಸಾಗರ ಜಲಾಶಯದ ನೀರಿನ ಮಟ್ಟ; ಕುಡಿಯುವ ನೀರಿಗೆ ಸಮಸ್ಯೆ ಆಗುತ್ತಾ?

ಕಳೆದ ಬಾರಿ ಸರ್ಕಾರ ನೀಡಿದ್ದ 1 ಕೋಟಿ ರೂ ಅನುದಾನದ ಭರವಸೆ ಮೇರೆಗೆ ವಿಜೃಂಭಣೆಯಿಂದ ವೈರಮುಡಿ ಉತ್ಸವ ನೆರವೇರಿತ್ತು. ಅದರಂತೆ ಈ ಬಾರಿ ಕೂಡ ಉತ್ಸವ ನಡೆಸಲು ಸರ್ಕಾರ ಮುಂದಾಗಿದೆ.‌ ಆದರೆ ಉತ್ಸವಕ್ಕೆ ಖಾಸಗಿ ಪ್ರಯೋಜಕತ್ವ ಪಡೆಯುತ್ತಿದ್ದಾರೆ ಅನ್ನೋ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಏಕೆಂದರೆ ಆಹ್ವಾನ ಪತ್ರಿಕೆಯಲ್ಲಿ ಪ್ರಾಯೋಜಕರ ಹೆಸರು ನಮೂದಿಸಿದ್ದು, ಯಾವ ಮಾನದಂಡದ ಮೇಲೆ ಪ್ರಾಯೋಜಕರ ಹೆಸರನ್ನು ನಮೂದಿಸಿದ್ದು, ಅಂತ ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ​ ಹೇಳಿದ್ದಿಷ್ಟು 

ಈ ಆರೋಪಗಳನ್ನ ಮಂಡ್ಯ ಜಿಲ್ಲಾಧಿಕಾರಿಗಳು ತಳ್ಳಿಹಾಕಿದ್ದಾರೆ. ಪ್ರಾಯೋಜಕತ್ವ ಪಡೆಯಲಾಗುತ್ತೆ, ಆದರೆ ಅವರ ಹೆಸರನ್ನ ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸುವುದಿಲ್ಲ. ಈ ವೈರಲ್​​ ಆಗಿರುವ ಆಹ್ವಾನ ಪತ್ರಿಕೆ ಅಧಿಕೃತವಲ್ಲ ಎನ್ನುತ್ತಿದ್ದಾರೆ. ಅಷ್ಟೇ ಅಲ್ಲದೆ ಯಾರೋ ದುರುದ್ದೇಶ ಪೂರ್ವಕವಾಗಿ ಆಹ್ವಾನ ಪತ್ರಿಕೆ ವೈರಲ್ ಮಾಡಿದ್ದಾರೆ. ತನಿಖೆ‌ ನಡೆಸಿ ಅಂತವರ ವಿರುದ್ಧ ಕನೂನು ಕ್ರಮ ಜರುಗಿಸುತ್ತೇವೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದ್ದಾರೆ.

ಇದನ್ನೂ ಓದಿ: ಮೇಲುಕೋಟೆ ಚೆಲುವನಾರಾಯಣಸ್ವಾಮಿ ಸನ್ನಿಧಾನದಲ್ಲಿ ಬೆತ್ತಲಾದ ಯುವಕ, ಸಿಬ್ಬಂದಿ ಕೈಗೆ ಸಿಗದೆ ಹುಚ್ಚಾಟ

ಒಟ್ಟಾರೆ ಭಕ್ತಿ ಮತ್ತು ಪರಂಪರೆಯ ಸಂಕೇತವಾಗಬೇಕಿದ್ದ ವೈರಮುಡಿ ಉತ್ಸವ ಈ ಬಾರಿ ಆರಂಭದಲ್ಲೇ ವಿಘ್ನ ಶುರುವಾಗಿದ್ದು, ನಿಜಕ್ಕೂ ಆಹ್ವಾನ ಪತ್ರಿಕೆ ಮುದ್ರಿಸಿರುವ ಉದ್ದೇಶ ಏನು ಅನ್ನೋದು ತನಿಖೆಯಿಂದ ಬಯಲಾಗಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *