ಐದು ಕಿಲೋ ಎಲ್​ಪಿಜಿ ಸಿಲಿಂಡರ್ ಹಂಚಿಕೆ ಎರಡು ಪಟ್ಟು ಹೆಚ್ಚಳ; ವಲಸೆ ಕಾರ್ಮಿಕರಿಗೆ ನಿರಾಳ

ಐದು ಕಿಲೋ ಎಲ್​ಪಿಜಿ ಸಿಲಿಂಡರ್ ಹಂಚಿಕೆ ಎರಡು ಪಟ್ಟು ಹೆಚ್ಚಳ; ವಲಸೆ ಕಾರ್ಮಿಕರಿಗೆ ನಿರಾಳ

ನವದೆಹಲಿ, ಏಪ್ರಿಲ್ 7: ಎಲ್​ಪಿಜಿ ಬಿಕ್ಕಟ್ಟಿನಿಂದ ಬಹಳ ಕಷ್ಟ ಎದುರಿಸುತ್ತಿರುವ ವರ್ಗಗಳಲ್ಲಿ ವಲಸಿಗ ಕಾರ್ಮಿಕರಿದ್ದಾರೆ (Migrant workers). ಇವರಿಗೆ ನಿರಾಳ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಸಣ್ಣ ಎಲ್​ಪಿಜಿ ಸಿಲಿಂಡರ್​ಗಳ ಪೂರೈಕೆಯನ್ನು ಹೆಚ್ಚಿಸಿದೆ. ವರದಿಗಳ ಪ್ರಕಾರ ಸರ್ಕಾರವು ಎಲ್ಲಾ ರಾಜ್ಯಗಳಿಗೂ 5 ಕಿಲೋ ತೂಕದ ಫ್ರೀ ಟ್ರೇಡ್ ಎಲ್​ಪಿಜಿ ಸಿಲಿಂಡರ್​ಗಳ (5 kg free trade LPG cylinder) ಹಂಚಿಕೆಯನ್ನು ಎರಡು ಪಟ್ಟು ಹೆಚ್ಚಿಸಿದೆ. ಇದರಿಂದ ಈ ಸಣ್ಣ ಗ್ಯಾಸ್ ಸಿಲಿಂಡರ್ ಲಭ್ಯತೆ ದ್ವಿಗುಣಗೊಂಡಿದೆ.

ವಲಸಿಗ ಕಾರ್ಮಿಕರಿಗೆ ವಿತರಿಸಲು ಲಭ್ಯ ಇರುವ ನಿತ್ಯದ ಐದು ಕಿಲೋ ಮುಕ್ತ ವ್ಯಾಪಾರ ಎಲ್​ಪಿಜಿ ಸಿಲಿಂಡರ್​ಗಳನ್ನು ಎರಡು ಪಟ್ಟು ಹೆಚ್ಚಿಸಲಾಗುತ್ತಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಸೋಮವಾರ ಆದೇಶ ಹೊರಡಿಸಿದೆ.

ಇದನ್ನೂ ಓದಿ: ಇಪಿಎಫ್, ಎನ್​ಪಿಎಸ್ ಮತ್ತು ಮ್ಯೂಚುವಲ್ ಫಂಡ್; ರಿಟೈರ್ಮೆಂಟ್ ಪ್ಲಾನಿಂಗ್​ಗೆ ಯಾವುದು ಉತ್ತಮ?

ಮಾರ್ಚ್ 2 ಮತ್ತು 3ರಂದು ನಿತ್ಯ ಸರಾಸರಿ ವಿತರಿಸಲಾಗುತ್ತಿದ್ದ ಸಿಲಿಂಡರ್​ಗಳ ಸಂಖ್ಯೆಯನ್ನು ಆಧಾರವಾಗಿಟ್ಟುಕೊಳ್ಳಲಾಗಿದೆ. ಹಿಂದಿನ ಆದೇಶದಲ್ಲಿ 5 ಕಿಲೋ ಎಲ್​ಪಿಜಿ ಸಿಲಿಂಡರ್ ಹಂಚಿಕೆಯನ್ನು ಶೇ. 20ಕ್ಕೆ ಮಿತಿಗೊಳಿಸಲಾಗಿತ್ತು. ಈಗ ಹೊಸ ಆದೇಶದಲ್ಲಿ ಇದನ್ನು ಹೆಚ್ಚಿಸಲಾಗಿದೆ.

ಏನಿದು ಫ್ರೀ ಟ್ರೇಡ್ ಎಲ್​ಪಿಜಿ ಸಿಲಿಂಡರ್?

ಕೆಲಸದ ನಿಮಿತ್ತ ಬೇರೆ ಬೇರೆ ಊರುಗಳಿಗೆ ವಲಸೆ ಹೋಗಿರುವ ಮತ್ತು ಅಡ್ರೆಸ್ ಪ್ರೂಫ್ ದಾಖಲೆಗಳು ಇಲ್ಲದ, ಹಾಗೂ ಕಡಿಮೆ ಗ್ಯಾಸ್ ಅವಶ್ಯಕತೆ ಇರುವ ಕಾರ್ಮಿಕರು, ವಿದ್ಯಾರ್ಥಿಗಳು, ಉದ್ಯೋಗಸ್ಥರು ಮೊದಲಾದವರಿಗೆ ಗ್ಯಾಸ್ ಪಡೆಯಲು ಅನುಕೂಲವಾಗಲೆಂದು ಸರ್ಕಾರ ಇತ್ತೀಚೆಗೆ ಸಣ್ಣ ಸಣ್ಣ ಎಲ್​ಪಿಜಿ ಸಿಲಿಂಡರ್​ಗಳನ್ನು ಬಿಡುಗಡೆ ಮಾಡಿದೆ.

ಇದನ್ನೂ ಓದಿ: ಗೋಲ್ಡ್ ಒಡಿ, ಇದು ಒಡವೆ ಸಾಲಕ್ಕಿಂತ ಎಷ್ಟು ಭಿನ್ನ, ಎಷ್ಟು ಉಪಯುಕ್ತ? ಇಲ್ಲಿದೆ ಮಾಹಿತಿ

ಆಧಾರ್ ಇತ್ಯಾದಿ ದಾಖಲೆ ನೀಡಿ ಈ ಸಿಲಿಂಡರ್​ಗಳನ್ನು ಪಡೆಯಬಹುದು. ಸೆಕ್ಯೂರಿಟಿ ಡೆಪಾಸಿಟ್ ಇಡುವುದಾಗಲೀ, ಡಿಸ್ಟ್ರಿಬ್ಯೂಟರ್ ಏಜೆನ್ಸಿಯಲ್ಲಿ ನೊಂದಾಯಿಸುವುದಾಗಲೀ ಅವಶ್ಯಕತೆ ಇರುವುದಿಲ್ಲ. 2 ಕಿಲೋ, 5 ಕಿಲೋ ಮತ್ತು 10 ಕಿಲೋ ತೂಕದ ಫೈಬರ್ ಕಾಂಪೊಸಿಟ್ ಸಿಲಿಂಡರ್​ಗಳನ್ನು ವಿತರಿಸುತ್ತಿದೆ.

ಸದ್ಯ ಐದು ಕಿಲೋ ಎಲ್​ಪಿಜಿ ಸಿಲಿಂಡರ್​ಗಳ ಹಂಚಿಕೆಯನ್ನು ಎರಡು ಪಟ್ಟು ಹೆಚ್ಚಿಸುತ್ತಿರುವುದು ವಲಸಿಗ ಕಾರ್ಮಿಕರನ್ನು ಗುರಿಯಾಗಿಸಿ ಮಾತ್ರವೇ. ಎಲ್​ಪಿಜಿ ಸಿಗದ ಹಿನ್ನೆಲೆಯಲ್ಲಿ ದೇಶಾದ್ಯಂತ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ವಾಪಸ್ ಹೋಗುತ್ತಿರುವ ಟ್ರೆಂಡ್ ಸೃಷ್ಟಿಯಾದ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ತೆಗೆದುಕೊಂಡಿರಬಹುದು. ಈ ಹೆಚ್ಚುವರಿ ಸಿಲಿಂಡರ್ ಹಂಚಿಕೆಯು ವಲಸೆ ಕಾರ್ಮಿಕರಿಗೆ ಮಾತ್ರವೇ ಮಾಡಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *