Headlines

ಐಪಿಎಲ್​ಗೆ ಗುಡ್ ಬೈ ಹೇಳಿದ RCB ಮಾಜಿ ಆಟಗಾರ! – Kannada News | Murugan Ashwin announces retirement from IPL

ತಮಿಳುನಾಡು ಮೂಲದ ಕ್ರಿಕೆಟಿಗ ಮುರುಗನ್ ಅಶ್ವಿನ್ ಅವರು ಎಲ್ಲಾ ಮಾದರಿಯ ದೇಶಿ ಕ್ರಿಕೆಟ್ ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್ (IPL) ನಿಂದ  ನಿವೃತ್ತಿ ಘೋಷಿಸಿದ್ದಾರೆ. 35 ವರ್ಷದ ಅಶ್ವಿನ್, ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಮ್ಮ 10 ವರ್ಷಗಳ ವೃತ್ತಿಪರ ಕ್ರಿಕೆಟ್ ಜೀವನಕ್ಕೆ ತೆರೆ ಎಳೆದಿದ್ದಾರೆ.

ಈ ನಿವೃತ್ತಿಯ ಘೋಷಣೆಯೊಂದಿಗೆ ಇದು ಕ್ರಿಕೆಟ್‌ನಿಂದ ಸಂಪೂರ್ಣ ವಿದಾಯವಲ್ಲ ಎಂದು ಸ್ಪಷ್ಟಪಡಿಸಿರುವ ಮುರುಗನ್ ಅಶ್ವಿನ್, ಮುಂಬರುವ ದಿನಗಳಲ್ಲಿ ವಿದೇಶಿ ಲೀಗ್‌ಗಳಲ್ಲಿ ಆಡುವ ಅವಕಾಶಗಳನ್ನು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ. ಈ ಮೂಲಕ ವಿದೇಶಿ ಲೀಗ್ ಹಾಗೂ ನಿವೃತ್ತ ಆಟಗಾರರ ಲೀಗ್​ಗಳಲ್ಲಿ ಕಣಕ್ಕಿಳಿಯುವ ಯೋಜನೆ ಹಾಕಿಕೊಂಡಿದ್ದಾರೆ.

ಮೂವರು ನಾಯಕರುಗಳಿಗೆ ಧನ್ಯವಾದ:

ಮುರುಗನ್ ಅಶ್ವಿನ್ ಐಪಿಎಲ್​ನಲ್ಲಿ ಮೂವರು ದಿಗ್ಗಜರ ನಾಯಕತ್ವದಲ್ಲಿ ಆಡಿದ ಕೆಲವೇ ಕೆಲವು ಆಟಗಾರರಲ್ಲಿ ಇಬ್ಬರು. ಇದೀಗ ಈ ಮೂವರಿಗೆ, ಅಂದರೆ ಮಹೇಂದ್ರ ಸಿಂಗ್ ಧೋನಿ, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ಕೃತಜ್ಞತೆಗಳ ಮೂಲಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

  • ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಮುರುಗನ್ ಅಶ್ವಿನ್ ರೈಸಿಂಗ್ ಪುಣೆ ಜೈಂಟ್ಸ್ ಪರ ಕಣಕ್ಕಿಳಿದಿದ್ದರು.
  • ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದರು
  • ವಿರಾಟ್ ಕೊಹ್ಲಿ ಸಾರಥ್ಯದಲ್ಲಿ ಆರ್​ಸಿಬಿ ಪರ ಕಣಕ್ಕಿಳಿದಿದ್ದರು.

6 ತಂಡಗಳ ಪರ ಕಣಕ್ಕಿಳಿದಿದ್ದ ಮುರುಗನ್:

ಮುರುಗನ್ ಅಶ್ವಿನ್  2016 ರಿಂದ 2023 ರವರೆಗೆ ಅವರು ಒಟ್ಟು 6 ವಿಭಿನ್ನ ಫ್ರಾಂಚೈಸಿಗಳನ್ನು ಪ್ರತಿನಿಧಿಸಿದ್ದಾರೆ. ಆ ತಂಡಗಳಾವುವು ಎಂದರೆ…

  • ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ (RPS)
  • ಡೆಲ್ಲಿ ಡೇರ್‌ಡೆವಿಲ್ಸ್ (ಈಗಿನ ಡೆಲ್ಲಿ ಕ್ಯಾಪಿಟಲ್ಸ್- DC)
  • ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)
  • ಪಂಜಾಬ್ ಕಿಂಗ್ಸ್​ (PBKS)
  • ಮುಂಬೈ ಇಂಡಿಯನ್ಸ್ (MI)
  • ರಾಜಸ್ಥಾನ್ ರಾಯಲ್ಸ್​ (RR)

ಆರ್​ಸಿಬಿ ಮಾಜಿ ಆಟಗಾರ:

2018 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಎಂಟ್ರಿ ಕೊಟ್ಟಿದ್ದ ಮುರುಗನ್ ಅಶ್ವಿನ್ ಆರ್​ಸಿಬಿ ಪರ 2 ಪಂದ್ಯಗಳನ್ನಾಡಿದ್ದರು. ಈ ವೇಳೆ 3 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು.

ಐಪಿಎಲ್ ವೃತ್ತಿ ಜೀವನ:

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಒಟ್ಟು 44 ಪಂದ್ಯಗಳನ್ನಾಡಿರುವ ಮುರುಗನ್ ಅಶ್ವಿನ್ ಒಟ್ಟು 35 ಪಂದ್ಯಗಳನ್ನು ಪಡದಿದ್ದಾರೆ. ಈ ವೇಳೆ 21 ರನ್​ಗಳಿಗೆ ಮೂರು ವಿಕೆಟ್ ಕಬಳಿಸಿರುವುದು ಅವರ ಶ್ರೇಷ್ಠ ಪ್ರದರ್ಶನ.

ಹಾಗೆಯೇ ದೇಶೀಯ ಅಂಗಳದಲ್ಲಿ ತಮಿಳುನಾಡು ಪರ ಕಣಕ್ಕಿಳಿಯುವ ಮೂಲಕ ಕೆರಿಯರ್ ಆರಂಭಿಸಿದ್ದ ಮುರುಗನ್, ಆ ಬಳಿಕ ಚಂಡೀಗಢ್ ಹಾಗೂ ಜಮ್ಮು ಕಾಶ್ಮೀರ ತಂಡಗಳನ್ನು ಪ್ರತಿನಿಧಿಸಿದ್ದರು. ಈ ವೇಳೆ ಒಟ್ಟು 117 ಟಿ20 ಪಂದ್ಯಗಳನ್ನಾಡಿರುವ ಅವರು 115 ವಿಕೆಟ್ ಪಡೆದಿದ್ದಾರೆ. ಹಾಗೆಯೇ ಲಿಸ್ಟ್​-ಎ ಕ್ರಿಕೆಟ್​ನಲ್ಲಿ 34 ಮ್ಯಾಚ್​ಗಳನ್ನಾಡಿರುವ ಮುರುಗನ್ 35 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು.

ಇದನ್ನೂ ಓದಿ: 07:07: CSK ತಂಡಕ್ಕೆ ಹಾರ್ದಿಕ್ ಪಾಂಡ್ಯ?

ಇದೀಗ ತಮ್ಮ 35ನೇ ವಯಸ್ಸಿಗೆ ದೇಶೀಯ ಕ್ರಿಕೆಟ್​ ಹಾಗೂ ಐಪಿಎಲ್​​ಗೆ ಗುಡ್ ಬೈ ಹೇಳಿರುವ ಮುರುಗನ್ ಅಶ್ವಿನ್ ಮುಂಬರುವ ದಿನಗಳಲ್ಲಿ ವಿದೇಶಿ ಲೀಗ್​ಗಳಲ್ಲಿ ಕಣಕ್ಕಿಳಿಯುವ ಇರಾದೆಯಲ್ಲಿದ್ದಾರೆ.

Published On – 10:32 am, Tue, 26 May 26

Source link

Leave a Reply

Your email address will not be published. Required fields are marked *