ಐಶಾರಾಮಿ ಕಾರು ಖರೀದಿಸಿದ ನಟಿ ರಾಧಿಕಾ, ಬೆಲೆ ಎಷ್ಟು ಲಕ್ಷ ಗೊತ್ತೆ? – Kannada News | Radhika Narayan purchased new Volvo Ex30 car see details

ಸಿನಿಮಾ (Cinema) ನಟ-ನಟಿಯರು ಐಶಾರಾಮಿ ಕಾರುಗಳು ಖರೀದಿಸುವುದು ಹೊಸದೇನೂ ಅಲ್ಲ. ಆದರೆ ಅವರ ಕಾರುಗಳ ಆಯ್ಕೆ ಅವರ ವ್ಯಕ್ತಿತ್ವವನ್ನು ಸೂಚಿಸುತ್ತವೆ. ಇದೀಗ ನಟಿ ರಾಧಿಕಾ ನಾರಾಯಣ್ ಅವರು ಹೊಸ ಕಾರೊಂದನ್ನು ಖರೀದಿ ಮಾಡಿದ್ದಾರೆ. ಇದು ಸಾಮಾನ್ಯವಾದ ಕಾರಲ್ಲ, ವಿಶ್ವದಲ್ಲೇ ಸುರಕ್ಷತೆಗೆ ಹೆಸರಾದ ಕಾರು ಬ್ರ್ಯಾಂಡ್ ಒಂದು ಬಿಡುಗಡೆ ಮಾಡಿರುವ ಐಶಾರಾಮಿ ಮತ್ತು ಸುರಕ್ಷಿತ ಇವಿ ಕಾರು. ಅದುವೇ ವೋಲ್ವೋ ಇಎಕ್ಸ್ 30. ಹಲವು ವೈಶಿಷ್ಟ್ಯತೆಗಳನ್ನು ಹೊಂದಿರುವ ಈ ಹೊಸ ಕಾರನ್ನು ನಟಿ ರಾಧಿಕಾ ಖರೀದಿ ಮಾಡಿದ್ದಾರೆ.

‘ರಂಗಿತರಂ’, ‘ಯೂ ಟರ್ನ್’, ‘ಡಿಟೆಕ್ಟಿವ್ ಶಿವಾಜಿ’ ಸೇರಿದಂತೆ ಹಲವಾರು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ, ಈಗಲೂ ನಟಿಸುತ್ತಿರುವ ನಟಿ ರಾಧಿಕಾ ನಾರಾಯಣ್ ಅವರು ‘ವೋಲ್ವೋ ಇಕ್ಸ್ 30’ ಕಾರನ್ನು ಇತ್ತೀಚೆಗಷ್ಟೆ ಖರೀದಿ ಮಾಡಿದ್ದು, ಕಾರಿನೊಟ್ಟಿಗೆ ತಮ್ಮ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ‘ಮತ್ತೊಂದು ಸುಂದರ ವಸ್ತು, ನನ್ನ ಮೆಚ್ಚಿನ ವಸ್ತುಗಳ ಪಟ್ಟಿಗೆ ಸೇರಿದೆ’ ಎಂದು ನಟಿ ರಾಧಿಕಾ ನಾರಾಯಣ್ ತಮ್ಮ ಹೊಸ ಕಾರಿನ ಬಗ್ಗೆ ಬರೆದುಕೊಂಡಿದ್ದಾರೆ.

ರಾಧಿಕಾ ಖರೀದಿ ಮಾಡಿರುವ ‘ವೋಲ್ವೋ ಇಕ್ಸ್ 30’ ಇವಿ ಕಾರಾಗಿದ್ದು ಇದರ ಬೆಲೆ ಬೆಂಗಳೂರಿನಲ್ಲಿ 42 ಲಕ್ಷದಿಂದ 50 ಲಕ್ಷ ರೂಪಾಯಿಗಳ ವರೆಗೆ ಇದೆ. ಕಾರಿನಲ್ಲಿ ಸಾಕಷ್ಟು ವೈಶಿಷ್ಟ್ಯಗಳಿದ್ದು, ಈ ಕಾರು ಸಿಂಗಲ್ ಚಾರ್ಜ್​ಗೆ 400 ರಿಂದ 450 ಕಿ.ಮೀ ರೇಂಜ್ ನೀಡುತ್ತದೆಯಂತೆ. ಜೊತೆಗೆ ಅತ್ಯಂತ ವೇಗವಾದ ಕಾರು ಸಹ ಇದಾಗಿದ್ದು ನಾಲ್ಕು ಸೆಕೆಂಡುಗಳ ಒಳಗಾಗಿಯೇ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಶಕ್ತಿವಂತ ಕಾರು ಇದಾಗಿದ್ದು ವೋಲ್ವೊ ಇಕ್ಸ್ 30ಯ ಟ್ವಿನ್ ಮೋಟಾರ್ ಕಾರು 422 ಬಿಎಚ್​​ಪಿ ಮತ್ತು 543 ನೂಟಮ್ ಮೀಟರ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಇದನ್ನೂ ಓದಿ:ಈ ವಾರ ಒಟಿಟಿಯಲ್ಲಿ ಭರ್ಜರಿ ಸಿನಿಮಾಗಳು, ತಪ್ಪದೇ ನೋಡಿ

ಹಲವಾರು ಸುರಕ್ಷತಾ ಆಯ್ಕೆಗಳನ್ನು ಹೊಂದಿರುವ ಈ ಕಾರು ಅತ್ಯುತ್ತಮ ಇಂಟೀರಿಯರ್, ಅತ್ಯುತ್ತಮ ಸೌಂಡ್ ಸಿಸ್ಟಮ್, ಅತ್ಯುತ್ತಮ ಡ್ಯಾಶ್ ಬೋರ್ಡ್ ವಿನ್ಯಾಸ ಮತ್ತು ಡ್ರೈವಿಂಗ್ ಆಯ್ಕೆಗಳನ್ನು ಒಳಗೊಂಡಿದೆ. ಹೀಟೆಡ್-ವೆಂಟಿಲೇಟೆಡ್ ಸೀಟುಗಳ ಜೊತೆಗೆ ಹಲವು ಐಶಾರಾಮಿ ಆಯ್ಕೆಗಳನ್ನು ಸಹ ಈ ಕಾರು ಒಳಗೊಂಡಿದೆ. ಇದೇ ಕಾರಣಕ್ಕೆ ಈ ಕಾರು ಇಷ್ಟು ದುಬಾರಿ.

ಅಂದಹಾಗೆ ರಾಧಿಕಾ ಅವರು ವೋಲ್ವೋ ಕಂಪೆನಿಯ ಅಭಿಮಾನಿ ಆಗಿದ್ದು, ಅವರ ಬಳಿ ವೋಲ್ವೋ ಇಎಕ್ಸ್ 30 ಜೊತೆಗೆ ವೋಲ್ವೋದ ಶಕ್ತಿಶಾಲಿ ಇಂಧನ ಕಾರಾ ವೋಲ್ವೊ ಎಕ್ಸ್​ಸಿ 90 ಕಾರು ಸಹ ಇದೆ. ಇದು ಸಹ ಐಶಾರಾಮಿ ಮತ್ತು ಪವರ್​​ಫುಲ್ ಕಾರಾಗಿದ್ದು, ಈ ಕಾರಿನ ಬೆಲೆ ಬೆಂಗಳೂರಿನಲ್ಲಿ 1.20 ಕೋಟಿ ರೂಪಾಯಿಗಳಿವೆ. ವೋಲ್ವೊ ಎಕ್ಸ್​ಸಿ 90 ಕಾರು ವಿಶ್ವದ ಅತ್ಯುತ್ತಮ ಕಾರುಗಳಲ್ಲಿ ಒಂದಾಗಿದ್ದು, ಆ ಕಾರಿನ ಜೊತೆಗೆ ಈಗ ವೋಲ್ವೋದ ಇವಿ ಕಾರನ್ನೂ ಸಹ ನಟಿ ರಾಧಿಕಾ ನಾರಾಯಣ್ ಖರೀದಿ ಮಾಡಿದ್ದಾರೆ.

ರಾಧಿಕಾ ನಾರಾಯಣ್ ಅವರು ಪ್ರಸ್ತುತ ‘ವೀರ ಕಂಬಳ’ ಮತ್ತು ‘ಡೈಜಿ’ ಸಿನಿಮಾಗಳಲ್ಲಿ ನಟಿಸಿದ್ದು, ಎರಡೂ ಸಿನಿಮಾಗಳು ಆದಷ್ಟು ಭೇಗ ಬಿಡುಗಡೆ ಆಗಲಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *