ಅಖರೋಟ್ ಪ್ರಯೋಜನಗಳುImage Credit source: Getty Images
ಇಂದಿನ ವೇಗದ ಜೀವನಶೈಲಿಯಲ್ಲಿ ಆರೋಗ್ಯಕರ ಆಹಾರ ಪದ್ಧತಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಅಂತಹ ಆಹಾರಗಳಲ್ಲಿ ವಾಲ್ನಟ್ ಅಥವಾ ಅಕ್ರೋಟು (Akrodu) ಅಥವಾ ಅಖ್ರೋಟ್೦ ಪ್ರಮುಖವಾದ ಡ್ರೈಫ್ರೂಟ್ ಆಗಿದ್ದು, ಇದರಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು, ಪ್ರೋಟೀನ್, ಫೈಬರ್, ಆರೋಗ್ಯಕರ ಕೊಬ್ಬು, ವಿಟಮಿನ್ ಬಿ6, ವಿಟಮಿನ್ ಇ, ಮ್ಯಾಗ್ನೀಷಿಯಂ, ಫಾಸ್ಫರಸ್ ಹಾಗೂ ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ. ಇವು ದೇಹದ ಸಮಗ್ರ ಆರೋಗ್ಯಕ್ಕೆ ನೆರವಾಗುತ್ತವೆ. ಹಾಗಾದರೆ ಬೆಳಿಗ್ಗೆ ಎದ್ದು ಒಂದು ಮುಷ್ಠಿ ಅಕ್ರೋಟ್ ತಿನ್ನುವುದರಿಂದ ಎಷ್ಟೆಲ್ಲಾ ಪ್ರಯೋಜನಗಳನ್ನು ಪಡೆಯಬಹುದು ಮತ್ತು ಯಾಕೆ ಇದು ನಮ್ಮ ದೇಹಕ್ಕೆ ಒಳ್ಳೆಯದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಅಕ್ರೋಟ್ ಸೇವಿಸಿದರೆ ಸಿಗುವ ಪ್ರಯೋಜನಗಳು:
ಹೃದಯದ ಆರೋಗ್ಯಕ್ಕೆ ಒಳ್ಳೆಯದು: ಅಕ್ರೋಟ್‌ನಲ್ಲಿರುವ ಒಮೆಗಾ–3 ಕೊಬ್ಬಿನಾಮ್ಲಗಳು ಮತ್ತು ಆಂಟಿಆಕ್ಸಿಡೆಂಟ್‌ಗಳು ಹೃದಯದ ಸಾಮಾನ್ಯ ಕಾರ್ಯವನ್ನು ಬೆಂಬಲಿಸಲು ಸಹಾಯ ಮಾಡಬಹುದು.
ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು: ನಿಯಮಿತ ಪ್ರಮಾಣದಲ್ಲಿ ಅಕ್ರೋಟ್ ಸೇವಿಸುವುದರಿಂದ ನೆನಪಿನ ಶಕ್ತಿ, ಏಕಾಗ್ರತೆ ಮತ್ತು ಮೆದುಳಿನ ಆರೋಗ್ಯಕ್ಕೆ ಸಹಕಾರಿಯಾಗಬಹುದು.
ಜೀರ್ಣಕ್ರಿಯೆ ಸುಧಾರಣೆ: ಫೈಬರ್ ಅಧಿಕವಾಗಿರುವುದರಿಂದ ಜೀರ್ಣಕ್ರಿಯೆ ಸುಗಮವಾಗಲು ನೆರವಾಗುತ್ತದೆ. ಮಲಬದ್ಧತೆ ಸಮಸ್ಯೆಯನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.
ತೂಕ ನಿಯಂತ್ರಣಕ್ಕೆ ಸಹಕಾರಿ: ಪ್ರೋಟೀನ್ ಮತ್ತು ಫೈಬರ್ ಹೊಟ್ಟೆ ತುಂಬಿದ ಅನುಭವ ನೀಡುವುದರಿಂದ ಅನಗತ್ಯ ಹಸಿವು ಕಡಿಮೆಯಾಗುತ್ತದೆ ಇದರಿಂದ ತೂಕ ನಿಯಂತ್ರಣಕ್ಕೆ ಬರುತ್ತದೆ.
ಅಗತ್ಯ ಪೋಷಕಾಂಶಗಳ ಪೂರೈಕೆ: ಮ್ಯಾಗ್ನೀಷಿಯಂ, ಫಾಸ್ಫರಸ್, ಕಾಪರ್ ಮತ್ತು ಮ್ಯಾಂಗನೀಸ್ ಸೇರಿದಂತೆ ಹಲವು ಪೋಷಕಾಂಶಗಳು ದೇಹಕ್ಕೆ ಶಕ್ತಿ ಮತ್ತು ಪೋಷಣೆಯನ್ನು ಒದಗಿಸುತ್ತವೆ.
ಇದನ್ನೂ ಓದಿ: ರಾತ್ರಿ ಚೆನ್ನಾಗಿ ನಿದ್ರೆ ಬರಬೇಕು ಅಂದ್ರೆ ಈ 5 ಆಹಾರಗಳನ್ನು ಸೇವನೆ ಮಾಡಿ
ಅಕ್ರೋಟ್ ತಿನ್ನುವ ಸರಿಯಾದ ವಿಧಾನ
ಸಾಮಾನ್ಯವಾಗಿ ಅಕ್ರೋಟ್ ಅನ್ನು ಬೆಳಿಗ್ಗೆ ಸೇವಿಸುವುದು ಬಹಳ ಉತ್ತಮ. ರಾತ್ರಿ ನೀರಿನಲ್ಲಿ ನೆನೆಸಿ ಬೆಳಿಗ್ಗೆ ತಿನ್ನಬಹುದು ಅಥವಾ ಅದನ್ನು ನೇರವಾಗಿ ಸೇವಿಸಬಹುದು. ಮೊಸರು, ಓಟ್ಸ್, ಸ್ಮೂದಿ ಅಥವಾ ಸಲಾಡ್ ಜೊತೆಯಲ್ಲಿಯೂ ತಿನ್ನಬಹುದು. ಸಾಮಾನ್ಯವಾಗಿ ದಿನಕ್ಕೆ ಒಂದು ಮುಷ್ಠಿ (ಸುಮಾರು 25–30 ಗ್ರಾಂ) ತಿನ್ನಬಹುದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.
ಅಖರೋಟ್ ಸೇವಿಸುವಾಗ ಗಮನಿಸಬೇಕಾದ ಸಂಗತಿಗಳು:
- ಅತಿಯಾಗಿ ಸೇವಿಸಬೇಡಿ, ಏಕೆಂದರೆ ಇದರಲ್ಲಿ ಕ್ಯಾಲೊರಿ ಪ್ರಮಾಣ ಹೆಚ್ಚು.
- ಹಳೆಯದು ಅಥವಾ ವಾಸನೆ ಬರುವ ಅಖರೋಟ್ ಬಳಸಬೇಡಿ.
- ಡ್ರೈಫ್ರೂಟ್ ಅಲರ್ಜಿ ಇರುವವರು ವೈದ್ಯರ ಸಲಹೆ ಪಡೆದು ಮಾತ್ರ ಸೇವಿಸಬೇಕು.
- ಯಾವುದೇ ದೀರ್ಘಕಾಲದ ಆರೋಗ್ಯ ಸಮಸ್ಯೆ ಇದ್ದರೆ ತಜ್ಞರ ಸಲಹೆಯಂತೆ ಆಹಾರದಲ್ಲಿ ಸೇರಿಸಿಕೊಳ್ಳುವುದು ಉತ್ತಮ.
ಸೂಚನೆ: ಅಖರೋಟ್ ಆರೋಗ್ಯಕರ ಆಹಾರದ ಭಾಗವಾಗಿದ್ದರೂ, ಸಮತೋಲನ ಆಹಾರ ಮತ್ತು ನಿಯಮಿತ ವ್ಯಾಯಾಮದೊಂದಿಗೆ ಸೇವಿಸಿದಾಗ ಉತ್ತಮ ಪ್ರಯೋಜನ ದೊರೆಯುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ