Headlines

ಕಂಡೋರ ಕಾಸಲ್ಲಿ ಶೋಕಿ ಮಾಡ್ತಿದ್ದ ಶ್ರೀಕಿ: ಬೇನಾಮಿಯಾಗಿ ಶ್ರೀಕೃಷ್ಣ ಸಂಪಾದಿಸಿದ್ದ ಕೋಟಿ ಕೋಟಿ ಆಸ್ತಿ – Kannada News | Bitcoin Scam Kingpin Sriki’s Benami Empire: ED Uncovers Lavish Life

ಬೆಂಗಳೂರು, ಏಪ್ರಿಲ್​​ 22: ಬಿಟ್ ಕಾಯಿನ್ ಕಿಂಗ್ ಶ್ರೀಕಿ (Sriki) ಲೈಫ್ ಸ್ಟೈಲ್ ಯಾವ ಕುಬೇರನಿಗೂ ಕಡಿಮೆ ಇರಲಿಲ್ಲ. ಸ್ವಂತ ಅಂತ ಏನಿಲ್ಲ ಅಂದರೂ ಬೇರೆಯವರ ದುಡ್ಡಲ್ಲಿ ಈತ ಶೋಕಿ ಮಾಡುತ್ತಿದ್ದ. ಇಡಿ ದಾಳಿ ಬೆನ್ನಲ್ಲೆ ಶ್ರೀಕಿಯ ಒಂದೊಂದೆ ಲೀಲೆಗಳು ಹೊರಬರುತ್ತಿವೆ. ಬೇನಾಮಿಯಾಗಿ ಶ್ರೀಕಿ ಕೋಟಿ ಕೋಟಿ ಆಸ್ತಿ (Property) ಸಂಪಾದಿಸಿದ್ದ.

ಶ್ರೀಕಿ ಪರಿಚಯವೇ ನಲಪಾಡ್​ಗೂ ಸಂಕಷ್ಟ

ಶ್ರೀ ಕೃಷ್ಣ ಅಲಿಯಾಸ್ ಶ್ರೀಕಿ, ಬಿಟ್ ಕಾಯಿನ್ ಹಗರಣದ ಕಿಂಗ್ ಪಿನ್. ನಿನ್ನೆಯಷ್ಟೆ ಇ.ಡಿ ಅಧಿಕಾರಿಗಳು ದಾಳಿ ಮಾಡಿ ಈತನ‌ ಮನೆಯಿಂದ ಒಂದಷ್ಟು ದಾಖಲೆಗಳನ್ನ ವಶಕ್ಕೆ ಪಡೆದಿದ್ದರು. ಜಯನಗರದಲ್ಲಿ ಅಪ್ಪ ಮಾಡಿಟ್ಟ ಮನೆಯಲ್ಲಿ ಶ್ರೀಕಿ ಶೋಕಿ ಜೀವನ ನಡೆಸುತ್ತಿದ್ದ. ಇದೇ ಶ್ರೀಕಿ ಪರಿಚಯವೇ ನಲಪಾಡ್​ಗೂ ಸಂಕಷ್ಟ ತಂದೊಡ್ಡಿದೆ. ಮೊಹಮ್ಮದ್ ನಲಪಾಡ್ ಸೋದರ ಉಮರ್ ಮೂಲಕ ಶ್ರೀಕಿ ಪರಿಚಯವಾಗುತ್ತದೆ. ಆ ಬಳಿಕ ಮೊಹಮ್ಮದ್ ನಲಾಪಾಡ್ ಮತ್ತು ಸೋದರ ಉಮರ್​ಗೆ ಶ್ರೀಕಿ ಕಾಮನ್ ಫ್ರೆಂಡ್ ಆಗಿದ್ದರು. ಉಮರ್ ಸಹಪಾಠಿಯಾಗಿದ್ದ ಶ್ರೀಕಿ ಅಲಿಯಾಸ್ ಶ್ರೀ ಕೃಷ್ಣ ನಂಟಿನಿಂದಲೇ ಇಡಿ ದಾಳಿಗೆ ಮಹಮ್ಮದ್ ನಲಪಾಡ್ ಮತ್ತು ಹಕೀಬ್ ಒಳಗಾಗಿದ್ದರು.

ಇದನ್ನೂ ಓದಿ: ಹ್ಯಾಕರ್ ಶ್ರೀಕಿಯ ಐಷಾರಾಮಿ ಜೀವನ ನಲಪಾಡ್​ಗೆ ಕುತ್ತು ತಂದಿದ್ದು ಹೇಗೆ ಗೊತ್ತಾ? ಇಲ್ಲಿದೆ ನೋಡಿ

ತನಿಖಾ ಏಜೆನ್ಸಿಗಳಿಗೂ ಈ ಶ್ರೀಕಿ ಸವಾಲಾಗಿದ್ದ. ಸ್ವಂತ ಮೊಬೈಲ್ ಬಳಸಲ್ಲ, ತನ್ನದೇ ಲ್ಯಾಪ್ ಟಾಪ್ ಕೂಡ ಹೊಂದಿಲ್ಲ. ಸ್ವಂತಕ್ಕೆ ಬ್ಯಾಂಕ್ ಅಕೌಂಟ್, ಕ್ರೆಡಿಟ್ ಕಾರ್ಡ್ ಕೂಡ ಇಲ್ಲದೇ ಬಿಂದಾಸ್ ಜೀವನ ನಡೆಸುತ್ತಿದ್ದ. ಕೋಟಿ ಕೋಟಿ ಬಿಟ್ ಕಾಯಿನ್ ಡೀಲ್ ಮಾಡುವ ಶ್ರೀಕಿಗೆ ಫುಲ್ ಡಿಮ್ಯಾಂಡ್ ಕ್ರಿಯೇಟ್ ಆಗಿತ್ತು. ಚಾರ್ಟರ್ಡ್ ಫ್ಲೈಟ್, ಹೈಫೈ ಫ್ಲಾಟ್, ರೆಸಾರ್ಟ್​ಗಳಲ್ಲಿ ಸ್ಟೇ ಮಾಡುವ ಶ್ರೀಕಿ ಡ್ರಗ್ ಅಡಿಕ್ಟ್ ಆಗಿದ್ದ. ಇನ್ನು ಸುತ್ತಾಡುವುದಕ್ಕೆ ಆತನ ಬಳಗ ಐಶಾರಾಮಿ ಕಾರುಗಳ ವ್ಯವಸ್ಥೆ ಮಾಡುತ್ತಿತ್ತು.

ಶ್ರೀಕಿಗಾಗಿ ಪೈಪೋಟಿ 

ಹ್ಯಾಕರ್ಸ್ ಶ್ರೀಕೃಷ್ಣನನ್ನ ಬಳಸಿಕೊಂಡು, ಸರ್ಕಾರದ ವೆಬ್ ಸೈಟ್ ಹ್ಯಾಕ್ ಮಾಡುವುದು, ಪೋಕರ್ ಗೇಮ್ ಹ್ಯಾಕ್ ಮಾಡಿ ಕೋಟಿ ಕೋಟಿ ಮೌಲ್ಯದ ಬಿಟ್ ಕಾಯಿನ್ ಖದೀಸಲಾಗುತ್ತಿತ್ತು. ಬಿಟ್ ಕಾಯಿನ್ ವರ್ಗಾವಣೆ, ಕಂಪನಿಗಳ ಡಾಟಾಗೆ ಖನ್ನಾ ಹಾಕುವ ಹ್ಯಾಕರ್ ಶ್ರೀಕಿ ಜೊತೆಗಿದ್ದರೆ ಹ್ಯಾಕಿಂಗ್ ಕೆಲಸಕ್ಕೂ ಸಹಕಾರಿ ಅಂತಾ ಜೊತೆಗಿಟ್ಟುಕೊಳ್ಳಲು ಪೈಪೋಟಿ ಕೂಡ ಶುರುವಾಗಿತ್ತು. ಅಲ್ಲದೇ ಹ್ಯಾಕರ್ ಶ್ರೀಕಿಗೆ ಪೊಲೀಸ್ ಕೇಸ್, ಅರೆಸ್ಟ್ ಕಾಮನ್ ಆಗಿತ್ತು.

ತನ್ನ ಅಕೌಂಟ್​ನಲ್ಲಿ ಹಣದ ವ್ಯವಹಾರ ನಡೆಸದೇ, ತನ್ನ ಡಿವೈಸ್​ಗಳನ್ನ ಬಳಸದ ಶ್ರೀಕಿ, ಯೂರೋಪ್​ನಲ್ಲಿ ವಿದ್ಯಾಭ್ಯಾಸದ ವೇಳೆ ಇಂಟರ್ ನ್ಯಾಷನಲ್ ಹ್ಯಾಕರ್ಸ್ ಪರಿಚಯ ಮಾಡಿಕೊಂಡಿದ್ದ. ಇದೇ ಪರಿಚಯದಿಂದ ಹ್ಯಾಕರ್ಸ್ ಸಖ್ಯ ಬೆಳೆಸಿ ಹ್ಯಾಕರ್ಸ್ ಆದ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ, ಪೊಲೀಸರ ತನಿಖೆ ವೇಳೆ ಹಲವು ವಿಚಾರ ಹಂಚಿಕೊಂಡಿದ್ದಾನೆ.

ಬೇನಾಮಿ ಹೆಸರಿನಲ್ಲಿ ಕೋಟ್ಯಂತರ ಮೌಲ್ಯದ ಆಸ್ತಿ

ಬೇನಾಮಿ ಹೆಸರಿನಲ್ಲಿ ಕೋಟ್ಯಂತರ ಮೌಲ್ಯದ ಆಸ್ತಿ ಹೊಂದಿರುವ ಶ್ರೀಕಿ, ಕನಕಪುರ ರಸ್ತೆಯ ಕೋಲಗೊಂಡನಹಳ್ಳಿಯಲ್ಲಿ ಕೋಟ್ಯಂತರ ಮೌಲ್ಯದ ಆಸ್ತಿ ಹೊಂದಿದ್ದಾನೆ. ಶ್ರೀಧರ್ ಮತ್ತು ಮನೋಹರ್ ಎಂಬ ಇಬ್ಬರ ಬೇನಾಮಿ ವ್ಯಕ್ತಿಗಳ ಹೆಸರಿನಲ್ಲಿ ಆಸ್ತಿ ಸಂಪಾದನೆ ಮಾಡಿದ್ದಾನೆ.

ಇದನ್ನೂ ಓದಿ: ಕಾಂಗ್ರೆಸ್ ಶಾಸಕ ಹ್ಯಾರಿಸ್‌ ಕುಟುಂಬಕ್ಕೆ ಇ.ಡಿ ಶಾಕ್: ನಲಪಾಡ್​ಗೆ ಉರುಳಾಯ್ತಾ ಬಿಟ್ ಕಾಯಿನ್ ಹಗರಣ!

ಒಟ್ಟಾರೆ ಹ್ಯಾಕರ್ ಶ್ರೀಕಿಯನ್ನ ಬಳಸಿಕೊಂಡು ಕೋಟಿ ಕೋಟಿ ಹಣ ಬಾಚಿಕೊಂಡಿರುವವರ ಸಂಖ್ಯೆ ಜಾಸ್ತಿನೇ ಇದೆ. ಕಂಡೋರ ಅಕೌಂಟ್​ಗೆ ಖನ್ನಾ ಹಾಕುವ ಶ್ರೀಕಿ ಮಾತ್ರ ಹೈಫೈ ಲೈಫ್ ಲೀಡ್ ಮಾಡುತ್ತಾ ತನಿಖಾ ಸಂಸ್ಥೆಗಳ‌ ತಲೆ ನೋವಿಗೆ ಕಾರಣವಾಗಿದ್ದಾನೆ.

ವರದಿ: ವಿಕಾಸ್ Tv9 ಬೆಂಗಳೂರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *