ಕರಿಬೇವಿನ ಎಲೆ ಇಲ್ಲದೆಯೇ ಅಡುಗೆ ಆಗಲ್ವಾ? ಆದ್ರೆ ಈ ಸಮಸ್ಯೆ ಇದ್ದಲ್ಲಿ ಇದನ್ನು ಬಳಸದಿರುವುದೇ ಒಳ್ಳೆಯದು

ಕರಿಬೇವಿನ ಎಲೆ ಇಲ್ಲದೆಯೇ ಅಡುಗೆ ಆಗಲ್ವಾ? ಆದ್ರೆ ಈ ಸಮಸ್ಯೆ ಇದ್ದಲ್ಲಿ ಇದನ್ನು ಬಳಸದಿರುವುದೇ ಒಳ್ಳೆಯದು

ನಾವು ಮಾಡುವ ಬಹುತೇಕ ಪ್ರತಿಯೊಂದು ಅಡುಗೆಯಲ್ಲೂ ಕರಿಬೇವಿನ ಎಲೆ (Curry Leaves) ಅಥವಾ ಒಗ್ಗರಣೆ ಸೊಪ್ಪು ಹಾಕಿಯೇ ಹಾಕುತ್ತೇವೆ. ಅದಿಲ್ಲದಿದ್ದರೆ ಅಡುಗೆ ಆಗುವುದೇ ಇಲ್ಲ. ಇದನ್ನು ಕೇವಲ ರುಚಿಗಾಗಿ ಮಾತ್ರವಲ್ಲದೆ, ಅದರಲ್ಲಿರುವ ಔಷಧೀಯ ಗುಣಗಳ ಕಾರಣದಿಂದಲೂ ಆಯುರ್ವೇದದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಇಷ್ಟೆಲ್ಲಾ ಆರೋಗ್ಯಕರ ಗುಣಗಳಿದ್ದರೂ ಕೂಡ ಎಲೆ ಎಲ್ಲರಿಗೂ ಸೂಕ್ತವಲ್ಲ ಎಂಬುದು ನಿಮಗೆ ತಿಳಿದಿದೆಯೇ… ಹೌದು, ಕೆಲವು ಆರೋಗ್ಯ ಸಮಸ್ಯೆಗಳಿರುವವರು ಇದನ್ನು ಸೇವಿಸುವಾಗ ಜಾಗ್ರತೆ ವಹಿಸಬೇಕು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಈ ಕರಿಬೇವಿನ ಎಲೆ ಯಾರಿಗೆ ಒಳ್ಳೆಯದಲ್ಲ, ಯಾಕೆ ಸೇವನೆ ಮಾಡಬಾರದು, ಇದರಿಂದ ಯಾವ ರೀತಿಯ ಸಮಸ್ಯೆಗಳಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಈ ಕುರಿತ ಮತ್ತಷ್ಟು ಮಾಹಿತಿ ಸ್ಟೋರಿಯಲ್ಲಿದೆ.

ಕಡಿಮೆ ಶುಗರ್ ಸಮಸ್ಯೆಯಿರುವವರಿಗೆ ಒಳ್ಳೆಯದಲ್ಲ:

ಕರಿಬೇವಿನ ಸೊಪ್ಪು ಸ್ವಾಭಾವಿಕವಾಗಿ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಮಧುಮೇಹಿಗಳಿಗೆ ಲಾಭಕರವಾದರೂ, ಈಗಾಗಲೇ ಶುಗರ್ ಮಟ್ಟ ಕಡಿಮೆ ಇರುವವರು ಹೆಚ್ಚು ಪ್ರಮಾಣದಲ್ಲಿ ಸೇವಿಸಿದರೆ ಹೈಪೋಗ್ಲೈಸೀಮಿಯಾ ಅಪಾಯ ಹೆಚ್ಚುತ್ತದೆ. ಇದರಿಂದ ತಲೆ ಸುತ್ತುವುದು, ದೌರ್ಬಲ್ಯ ಕಾಣಿಸಿಕೊಳ್ಳಬಹುದು.

ಅಲರ್ಜಿ ಇರುವವರು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು:

ಕೆಲವರಿಗೆ ಕೆಲವು ರೀತಿಯ ಸೊಪ್ಪು ಅಥವಾ ಮಸಾಲೆ ಸೇವನೆ ಮಾಡಿದಾಗ ಅಲರ್ಜಿ ಉಂಟಾಗುತ್ತದೆ. ಹಾಗೆಯೇ ಕರಿಬೇವಿನ ಎಲೆ ಕೆಲವರಿಗೆ ಆಗಿಬರುವುದಿಲ್ಲ. ಇದನ್ನು ತಿಂದ ನಂತರ ಚರ್ಮದಲ್ಲಿ ಉರಿ, ಊತ ಅಥವಾ ಉಸಿರಾಟ ಸಂಬಂಧಿ ತೊಂದರೆ ಕಂಡುಬರಬಹುದು. ಹಾಗಾದರೆ ಬಳಸುವುದನ್ನು ನಿಲ್ಲಿಸುವುದು ಒಳ್ಳೆಯದು.

ಇದನ್ನೂ ಓದಿ: ಪ್ರತಿನಿತ್ಯ ಈ ಎಲೆ ತಿನ್ನಿ ಹೃದಯದ ಆರೋಗ್ಯವೂ ಚೆನ್ನಾಗಿರುತ್ತೆ, ನಿಮ್ಮ ತ್ವಚೆಯೂ ಕಾಂತಿಯುತವಾಗುತ್ತೆ

ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಿಗೆ:

ಗರ್ಭಧಾರಣೆಯ ಸಮಯದಲ್ಲಿ ಹಾರ್ಮೋನ್ ಬದಲಾವಣೆಗಳಿಂದ ದೇಹ ಹೆಚ್ಚು ಸಂವೇದನಾಶೀಲವಾಗಿರುತ್ತದೆ. ಕರಿಬೇವಿನ ಎಲೆಯ ರಸ ಅಥವಾ ಹೆಚ್ಚು ಪ್ರಮಾಣದಲ್ಲಿ ಕರಿಬೇವಿನ ಸೊಪ್ಪಿನ ಪುಡಿಯನ್ನು ಸೇವಿಸುವುದರಿಂದ ಕೆಲವರಿಗೆ ವಾಂತಿ ಅಥವಾ ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ಮಿತವಾಗಿ ಸೇವಿಸುವುದು ಉತ್ತಮ.

ಜೀರ್ಣಕ್ರಿಯೆ ಸಮಸ್ಯೆಯಿರುವವರು:

ಕರಿಬೇವಿನ ಸೊಪ್ಪು ಸಾಮಾನ್ಯವಾಗಿ ಜೀರ್ಣಕ್ರಿಯೆಗೆ ಸಹಾಯಕವಾದರೂ, ಅಲ್ಸರ್ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆಗಳಿರುವವರು ಹಸಿ ಎಲೆಯನ್ನು ನೇರವಾಗಿ ಜಗಿದು ತಿನ್ನುವುದರಿಂದ ಹೊಟ್ಟೆಯಲ್ಲಿ ಸಮಸ್ಯೆ ಉಂಟಾಗಬಹುದು.

ಕಿಡ್ನಿ ಸಮಸ್ಯೆಯಿರುವವರು

ಕೆಲವು ಅಧ್ಯಯನಗಳ ಪ್ರಕಾರ, ಕಿಡ್ನಿ ಸೋಂಕು ಅಥವಾ ಡಯಾಲಿಸಿಸ್‌ನಲ್ಲಿರುವವರು ಯಾವುದೇ ಔಷಧೀಯ ಸಸ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಅಗತ್ಯ. ಕರಿಬೇವಿನ ಎಲೆಯಲ್ಲಿರುವ ಕೆಲವು ಅಂಶಗಳು ಚಿಕಿತ್ಸೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *