Headlines

ಕರ್ನಾಟಕದಲ್ಲಿ ಮೂವರು ಹಿರಿಯ IPS, ನಾಲ್ವರು IAS ಅಧಿಕಾರಿಗಳ ವರ್ಗಾವಣೆ: ಯಾರು ಎಲ್ಲಿಗೆ? ಇಲ್ಲಿದೆ ವಿವರ – Kannada News | Four IAS And 3 IPS Officer Transferred By Karnataka Governmnet, here Is List

ಬೆಂಗಳೂರು, (ಮೇ 06): ಕರ್ನಾಟಕ ಸರ್ಕಾರ, (Karnataka Governmnet)  ಐಎಎಸ್‌ ಹಾಗೂ ಐಪಿಎಸ್ ಅಧಿಕಾರಿಗಳ ವರ್ಗಾವಣೆ (IAS And IPS Officers Transffer) ಮಾಡಿ ಆದೇಶ ಹೊರಡಿಸಿದೆ. ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ 4 ಐಎಎಸ್‌ ಮತ್ತು ಮೂವರು ಐಪಿಎಸ್ ಹಿರಿಯ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಪ್ರಮುಖವಾಗಿ ಕಲಬುರಗಿ ಜಿಲ್ಲಾಧಿಕಾರಿ ಹಾಗೂ ಹಿರಿಯ ಐಪಿಎಸ್​ ಅಧಿಕಾರಿಗಳಾದ ಚೇತನ್ ಸಿಂಗ್ ರಾಥೋಡ್, ಸಂದೀಪ್ ಪಾಟೀಲ್ ಮತ್ತು ಅನುಪಮ್ ಅಗರ್ವಾಲ್ ಅವರನ್ನ ವರ್ಗಾವಣೆ ಮಾಡಲಾಗಿದೆ.

  • ಕರ್ನಾಟಕದಲ್ಲಿ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ವರ್ಗಾವಣೆ
  • ಕಲಬುರಗಿ ಹಾಗೂ ರಾಯಚೂರು ಡಿಜಿ ವರ್ಗಾವಣೆ ರಾಜ್ಯ ಸರ್ಕಾರ ಆದೇಶ
  • ಮೂವರು ಹಿರಿಯ ಐಪಿಎಸ್ ಅಧಿಕಾರಿಗಳ ಸಹ ವರ್ಗಾವಣೆ

ಕಲಬುರಗಿಗೆ ಹೊಸ ಜಿಲ್ಲಾಧಿಕಾರಿ

ಕಲಬುರಗಿ ಜಿಲ್ಲಾಧಿಕಾರಿಯಾಗಿ ಫೌಝಿಯಾ ತರನ್ನುಮ್ ಅವರನ್ನು ಗ್ರಾಮೀಣ ಕುಡಿಯುವ ನೀರು ಮತ್ತು ಒಳಚರಂಡಿ ಇಲಾಖೆಯ ಆಯಕ್ತರಾಗಿ ವರ್ಗಾವಣೆ ಮಾಡಲಾಗಿದೆ. ಇನ್ನು ಆರ್ಥಿಕ ಇಲಾಖೆಯ ಜಂಟಿ ಕಾರ್ಯದರ್ಶಿಯಾಗಿದ್ದ ಮುಹಮ್ಮದ್ ಇಕ್ರಾಮುಲ್ಲಾ ಶರೀಫ್ ಅವರನ್ನು ಕಲಬುರಗಿಗೆ ಹೊಸ ಜಿಲ್ಲಾಧಿಕಾರಿಯಾಗಿ ವರ್ಗಾಯಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಪೆಟ್ರೋಲ್, ಡೀಸೆಲ್ ಅಭಾವ: ಬಂಕ್‌ಗಳ ಮುಂದೆ ವಾಹನ ಸವಾರರ ಸಾಲು, ತೀವ್ರಗೊಂಡ ಇಂಧನ ಆತಂಕ

ರಾಯಚೂರು ಡಿಸಿ ವರ್ಗಾವಣೆ

ರಾಯಚೂರು ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ (ಡಿಸಿ) 2016ನೇ ಬ್ಯಾಚ್‌ನ ಐಎಎಸ್ ಅಧಿಕಾರಿ ಪೂವಿತಾ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ರಾಯಚೂರಿನ ಹಾಲಿ ಜಿಲ್ಲಾಧಿಕಾರಿಯಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದ ನಿತಿಶ್ ಕೆ ಅವರನ್ನು ರಾಜ್ಯ ಸರ್ಕಾರ ದಿಢೀರ್ ವರ್ಗಾವಣೆ ಮಾಡಿದೆ. ಆದರೆ, ಅವರಿಗೆ ಮುಂದಿನ ಹುದ್ದೆ ಮತ್ತು ಸ್ಥಳದ ಕುರಿತು ಸರ್ಕಾರದಿಂದ ಇನ್ನೂ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಹೀಗಾಗಿ ಮುಂದಿನ ಆದೇಶದವರೆಗೆ ಅವರು ಸ್ಥಳ ನಿರೀಕ್ಷೆಯಲ್ಲಿದ್ದಾರೆ.

ಆರ್ಥಿಕ ಇಲಾಖೆಯ ಸರಕಾರದ ಉಪ ಕಾರ್ಯದರ್ಶಿ-3 ಡಾ.ಗೋಪಾಲ್ ಕೃಷ್ಣ ಬಿ. ಅವರನ್ನು ಆರ್ಥಿಕ ಇಲಾಖೆಯ ಸರಕಾರದ ಉಪ ಕಾರ್ಯದರ್ಶಿ(ಬಜೆಟ್ ಮತ್ತು ಸಂಪನ್ಮೂಲ)ಯಾಗಿ ಹಾಗೂ ಹಾವೇರಿ ಜಿಲ್ಲಾ ಪಂಚಾಯತಿಯ ಸಿಇಒ ರುಚಿ ಬಂದಲ್ ಅವರನ್ನು ಆರ್ಥಿಕ ಇಲಾಖೆಯ ಸರಕಾರದ ಉಪ ಕಾರ್ಯದರ್ಶಿ-3 ಎಂದು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

14 ತಿಂಗಳಲ್ಲೇ ಹಾವೇರಿ ಸಿಇಒ ಟ್ರಾನ್ಸ್​ಫರ್

ಹಾವೇರಿ ಜಿಲ್ಲಾ ಪಂಚಾಯತ್ ಸಿಇಒ ಆಗಿ ಅಧಿಕಾರ ವಹಿಸಿಕೊಂಡು 14 ತಿಂಗಳಿನಲ್ಲಿಯೇ ರುಚಿ ಬಿಂದಲ್ ಅವರನ್ನು ಏಕಾಏಕಿ, ಬೆಂಗಳೂರಿನ ಆರ್ಥಿಕ ಇಲಾಖೆಯ ಉಪ ಕಾರ್ಯದರ್ಶಿ–3 ಆಗಿ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಮೂವರು ಹಿರಿಯ IPS ಅಧಿಕಾರಿಗಳ ವರ್ಗಾವಣೆ

  1. ಸಂದೀಪ್ ಪಾಟೀಲ್, IGP, ಉತ್ತರ ವಲಯ, ಬೆಳಗಾವಿ.
  2. ಚೇತನ್ ಸಿಂಗ್ ರಾಥೋಡ್, IGP, ಸಿಐಡಿ
  3. ಅನುಪಮ್ ಅಗರವಾಲ್, IGP, KSRPಗೆ ವರ್ಗಾವಣೆ

ಕರ್ನಾಟಕದ ಮತ್ತಷ್ಟು  ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *