ಚಿತ್ರದುರ್ಗ, (ಜುಲೈ 16): ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಇಳಿದು ತಿಂಗಳುಗಳೇ ಕಳೆದಿದ್ದು, ಡಿಕೆ ಶಿವಕುಮಾರ್ ಅವರು ನೂತನ ಮುಖ್ಯಮಂತ್ರಿಯಾಗಿದ್ದಾರೆ. ಆದರೂ ಸಹ ಕೆಲ ಸರ್ಕಾರಿ ಬೋರ್ಡ್ಗಳಲ್ಲಿ ಇನ್ನೂ ಸಿದ್ದರಾಮಯ್ಯನವರೇ ಸಿಎಂ ಎಂದೇ ಇದೆ. ಸರ್ಕಾರಿ ಮಾಹಿತಿ ನಾಮಫಲಕಗಳಲ್ಲಿ ಸಿಎಂ ಹೆಸರು ಮತ್ತು ಭಾವಚಿತ್ರ ಬದಲಾಗಿಸಿಲ್ಲ. ಹೌದು….ಚಿತ್ರದುರ್ಗದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಮಾಹಿತಿ ಬೋರ್ಡ್ನಲ್ಲಿ ಸಿದ್ದರಾಮಯ್ಯನವರು ಇನ್ನೂ ಸಿಎಂ ಆಗಿಯೇ ಉಳಿದಿದ್ದರೆ, ಡಿಕೆ ಶಿವಕುಮಾರ್ ಡಿಸಿಎಂ ಎನ್ನುವ ನಾಮಫಲಕ ರಾರಾಜಿಸುತ್ತಿದೆ.