ಕಳೆದ 12 ವರ್ಷದಲ್ಲಿ ಐಟಿ ಮೊದಲಾದ ಸೆಕ್ಟರ್​ಗಳಲ್ಲಿ ಭಾರತದ ರಫ್ತು ಗಣನೀಯ ಏರಿಕೆ: ದರ್ಪಣ್ ಜೈನ್ – Kannada News

ಬೆಂಗಳೂರು, ಜೂನ್ 9: ಮಾಹಿತಿ ತಂತ್ರಜ್ಞಾನ, ಎಲೆಕ್ಟ್ರಾನಿಕ್ ಉಪಕರಣ, ಮಸಾಲೆ ಪದಾರ್ಥ, ಔಷಧ ಹಾಗು ಇನ್ನೂ ಬೇರೆ ಬೇರೆ ಸೆಕ್ಟರ್​ಗಳಲ್ಲಿ ಭಾರತದ ರಫ್ತು ಕಳೆದ 12 ವರ್ಷದಲ್ಲಿ ಗಣನೀಯವಾಗಿ ಹೆಚ್ಚಳ ಆಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಉದ್ಯಮ ಸಚಿವಾಲದಯ ಹೆಚ್ಚುವರಿ ಕಾರ್ಯದರ್ಶಿ ದರ್ಪಣ್ ಜೈನ್ (Darpan Jain) ಹೇಳಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಇಂದು ನಡೆದ ಸಂವಾದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅವರು, ಮುಕ್ತ ವ್ಯಾಪಾರ ಒಪ್ಪಂದಗಳ ದೆಸೆಯಿಂದ ಭಾರತದ ಮಾರುಕಟ್ಟೆ ಮತ್ತಷ್ಟು ವಿಸ್ತರಣೆ ಆಗಿರುವ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.

ಕಳೆದ 12 ವರ್ಷದ ಅವಧಿಯಲ್ಲಿ (2014ರಿಂದ) ದೇಶ ಕಂಡ ಅಭ್ಯುದಯದ ಕುರಿತಾಗಿ ವಿವಿಧೆಡೆ ವಿಚಾರ ಗೋಷ್ಠಿಗಳು, ಸಂವಾದಗಳು ನಡೆಯುತ್ತಿದ್ದು, ಅದರ ಭಾಗವಾಗಿ ಬೆಂಗಳೂರಿನಲ್ಲಿ ಮಾಧ್ಯಮದೊಂದಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ‘ಮುಕ್ತ ವ್ಯಾಪಾರ ಒಪ್ಪಂದಗಳು ಮತ್ತು ಐಟಿ ಸೆಕ್ಟರ್​ನಲ್ಲಿ ಭಾರತದ 12 ವರ್ಷಗಳ ಪ್ರಗತಿ’ ವಿಚಾರದ ಬಗ್ಗೆ ಈ ಸಂವಾದ ನಡೆಯಿತು. ವಾಣಿಜ್ಯ ಸಚಿವಾಲಯದ ನಿರ್ದೇಶಕ ಅನೂಪಾ ಎಸ್ ನಾಯರ್ ಅವರು ಕೂಡ ಉಪಸ್ಥಿತರಿದ್ದರು.

ಇದನ್ನೂ ಓದಿ: ರೈಲುಗಳಲ್ಲಿ ಇನ್ಮುಂದೆ ಮತ್ತೆ ಅಡುಗೆ ಶುರು; ಆದರೆ, ಎಲ್​ಪಿಜಿ ಬದಲು ಇಂಡಕ್ಷನ್ ಸ್ಟೌವ್ ಬಳಲು ನಿರ್ಧಾರ

ಹಿರಿಯ ಐಎಎಸ್ ಅಧಿಕಾರಿಯಾದ ದರ್ಪಣ್ ಜೈನ್ ಅವರು ಭಾರತ ಮತ್ತು ಅಮೆರಿಕ ನಡುವಿನ ಮುಕ್ತ ವ್ಯಾಪಾರ ಒಪ್ಪಂದ ಕುದುರಿಸಲು ಸಂಧಾನದಲ್ಲಿರುವ ಭಾರತೀಯ ತಂಡದ ಪ್ರಮುಖ ಸದಸ್ಯರಾಗಿದ್ದಾರೆ. ಕರ್ನಾಟಕ ಕೇಡರ್​ನ ಐಎಎಸ್ ಅಧಿಕಾರಿಯಾದ ಇವರು ಭಾರತದ ಮುಖ್ಯ ಸಂಧಾನಕಾರರೂ ಹೌದು.

ಪಿಐಬಿ ಬೆಂಗಳೂರಿನ ಟ್ವೀಟ್

12 ವರ್ಷಗಳ ಸಾಧನೆಯ ಹೈಲೈಟ್ಸ್

  1. ಒಂಬತ್ತು ಮುಕ್ತ ವ್ಯಾಪಾರ ಒಪ್ಪಂದಗಳು
  2. ಸುಲಭ ವ್ಯಾಪಾರ ವಾತಾವರಣದಲ್ಲಿ ವಿಶ್ವಬ್ಯಾಂಕ್ ರಾಂಕಿಂಗ್ ಪಟ್ಟಿಯಲ್ಲಿ ಭಾರತ 79ನೇ ಸ್ಥಾನಕ್ಕೆ ಏರಿಕೆ.
  3. 47,000 ಕಾನೂನು ನಿಯಮಗಳ ಸರಳೀಕರಣ
  4. 9,000ಕ್ಕೂ ಅಧಿಕ ಆರ್​ಬಿಐ ಸುತ್ತೋಲೆಗಳನ್ನು 244 ನಿರ್ದೇಶನಗಳಾಗಿ ಸರಳೀಕರಣಗೊಳಿಸಲಾಗಿರುವುದು.
  5. 4,623 ಕಾನೂನುಗಳನ್ನು ಅಪರಾಧಮುಕ್ತಗೊಳಿಸಲಾಗಿದೆ. 4,270 ಕಾನೂನುಗಳನ್ನು ಅಂತ್ಯಗೊಳಿಸಲಾಗಿದೆ.
  6. ಬ್ರಾಪ್ 2026 ಅಡಿಯಲ್ಲಿ 9,700ಕ್ಕೂ ಅಧಿಕ ಸುಧಾರಣೆಗಳು ಜಾರಿ
  7. ದಿವಾಳಿ ಕಾನೂನು ಅಡಿ 4 ಲಕ್ಷ ಕೋಟಿ ರೂ ವಸೂಲಿ
  8. ‘ಪ್ರಗತಿ’ ಮೂಲಕ 85 ಲಕ್ಷ ಕೋಟಿ ರೂ ಮೌಲ್ಯದ ಯೋಜನೆಗಳ ಶೀಘ್ರ ವಿಲೇವಾರಿ.
  9. 29 ಕಾರ್ಮಿಕ ಕಾನೂನುಗಳನ್ನು 4 ಕಾರ್ಮಿಕ ಸಂಹಿತೆಯಾಗಿ ವರ್ಗೀಕರಣ
  10. 2014ರಿಂದ 2025ರವರೆಗೆ 748 ಬಿಲಿಯನ್ ಡಾಲರ್​ಗೂ ಅಧಿಕ ಎಫ್​ಡಿಐ ಹೂಡಿಕೆ ಒಳಹರಿವು
  11. ಸ್ಟಾರ್ಟಪ್​ಗಳ ಲಾಭಗಳಿಗೆ ಶೇ. 100ರಷ್ಟು ತೆರಿಗೆ ಕಡಿತ
  12. ಸರ್ಕಾರಿ ಇಮಾರ್ಕೆಟ್ ಪ್ಲೇಸ್​ನ ಪೋರ್ಟಲ್​ನಲ್ಲಿ (GeM Portal- Govt eMarketPlace) ಬಿಕರಿಯಾದ ಒಟ್ಟು ಸರಕು ಮೌಲ್ಯ (GMV- Gross Merchandise Value) 18.42 ಲಕ್ಷ ಕೋಟಿ ರೂಗೂ ಅಧಿಕ.

ಇದನ್ನೂ ಓದಿ: ಹೊಸ DL, ವಾಹನ ನಿಯಮ: ಪರವಾನಗಿ ಅವಧಿ ವಿಸ್ತರಣೆ, ಆನ್​ಲೈನ್​ನಲ್ಲೇ ವಾಹನ ಮಾಲಕತ್ವ ವರ್ಗಾವಣೆ
ಕಿರಣ್ ರಿಜಿಜು ಅವರ ಎಕ್ಸ್ ಪೋಸ್ಟ್

12 ವರ್ಷಗಳ ಸೇವೆಯ ಮತ್ತಷ್ಟು ಹೈಲೈಟ್ಸ್

  • ಭಾರತ 2024ರಲ್ಲಿ ಟ್ರಚೋಮಾ ಮುಕ್ತ ದೇಶವೆಂದು ವಿಶ್ವ ಆರೋಗ್ಯ ಸಂಸ್ಥೆಯಿಂದ ಪ್ರಮಾಣೀಕರಣ ಪಡೆಯಿತು. ಈ ಸಾಧನೆ ಮಾಡಿದ ಮೂರನೇ ಏಷ್ಯನ್ ದೇಶವೆನಿಸಿದೆ. ಟ್ರಚೋಮಾ ಎಂಬುದು ಕುರುಡುತನ ತರಬಲ್ಲಂತಹ ಅಪಾಯಕಾಗಿ ಬ್ಯಾಕ್ಟೀರಿಯಾ ಸೋಂಕು. ಸ್ವಚ್ಛತೆ ಇಲ್ಲದ ಪರಿಸರದಲ್ಲಿ ಈ ಸೋಂಕು ಹೆಚ್ಚಿರುತ್ತದೆ. ಭಾರತ ಈ ಸೋಂಕಿನಿಂದ ಮುಕ್ತಗೊಂಡಿರುವುದು ಗಮನಾರ್ಹ ಸಾಧನೆ.
  • ಉಜ್ವಲ ಯೋಜನೆ ಅಡಿ 10 ಕೋಟಿಗೂ ಅಧಿಕ ಕುಟುಂಬಗಳು ಎಲ್​ಪಿಜಿ ಸೌಲಭ್ಯ ಪಡೆದಿವೆ. ಕಟ್ಟಿಗೆ ಒಲೆಗಳಿಂದ ಮುಕ್ತರಾಗಿದ್ದಾರೆ.
  • 12 ವರ್ಷದಲ್ಲಿ 12 ಕೋಟಿಗೂ ಅಧಿಕ ಶೌಚಾಲಯಗಳ ನಿರ್ಮಾಣವಾಗಿದೆ.
  • ಚಿಮಣಿ ದೀಪಗಳನ್ನು ಬಳಸುತ್ತಿದ್ದ ಮನೆಗಳಿಗೆ ವಿದ್ಯುತ್ ದೀಪ ಬೆಳಗುತ್ತಿದೆ. ಸೌಭಾಗ್ಯ ಯೋಜನೆ ಅಡಿ ಹತ್ತಿರಹತ್ತಿರ ಮೂರು ಕೋಟಿ ಮನೆಗಳಿಗೆ ವಿದ್ಯುತ್ ಸಂಪರ್ಕ ಸಿಕ್ಕಿದೆ.
  • ಸರ್ಕಾರಿ ಯೋಜನೆಗಳ ಫಲಾನುಭವಿಗಳಿಗೆ ಡೈರೆಕ್ಟ್ ಬೆನಿಫಿಶಿಯರಿ ಟ್ರಾನ್ಸ್​ಫರ್ ಮೂಲಕ ನೇರವಾಗಿ ಅಕೌಂಟ್​ಗೆ ವರ್ಗಾವಣೆ ಆಗಿರುವ ಹಣ ಬರೋಬ್ಬರಿ 50 ಲಕ್ಷ ಕೋಟಿ ರೂಗೂ ಅಧಿಕ.
  • ಕಿಲೋಮೀಟರ್​ಗಟ್ಟಲೆ ನಡೆದು ಹೋಗಿ ನೀರು ತರಬೇಕಾದ ಸ್ಥಿತಿ ಇದ್ದ ಮನೆಗಳಿಗೆ ಈಗ ನೇರವಾಗಿ ನಲ್ಲಿ ಭಾಗ್ಯ ಸಿಗುತ್ತದೆ. 15 ಕೋಟಿಗೂ ಅಧಿಕ ಗ್ರಾಮೀಣ ಮನೆಗಳಿಗೆ ಕೊಳವೆ ನೀರಿನ ಸಂಪರ್ಕ ಕೊಡಲಾಗಿದೆ.
  • ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿ, ಪ್ರತ್ಯೇಕತೆಯ ಕೂಗಿಗೆ ಆಹಾರವಾಗುತ್ತಿದ್ದ ಆರ್ಟಿಲ್ 370 ಅನ್ನು ರದ್ದುಗೊಳಿಸಲಾಯಿತು. ಇದರಿಂದ ಕಣಿವೆ ರಾಜ್ಯ ದೇಶದ ಮುಖ್ಯವಾಹಿನಿಯೊಂದಿಗೆ ಮಿಳಿತಗೊಳ್ಳಲು ಸಾಧ್ಯವಾಗಿದೆ.
  • ಕುನೋ ನ್ಯಾಷನಲ್ ಪಾರ್ಕ್​ಗೆ ಚೀತಾಗಳನ್ನು ತಂದು ಬಿಡಲಾಗಿದೆ. ಇದರೊಂದಿಗೆ ಭಾರತಕ್ಕೆ ಚೀತಾ 70 ವರ್ಷದ ನಂತರ ಮರಳಿದಂತಾಗಿದೆ.
  • ಪಿಎಂ ಸೂರ್ಯಘರ್ ಯೋಜನೆ ಅಡಿ ಇಲ್ಲಿಯವರೆಗೆ 35 ಲಕ್ಷಕ್ಕೂ ಅಧಿಕ ಮನೆಗಳಿಗೆ ಮೇಲ್ಛಾವಣಿ ಸೌರವಿದ್ಯುತ್ ಘಟಕ ಅಳವಡಿಸಲಾಗಿದೆ. ಒಟ್ಟು 10.7 ಗಿಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಈ ಮನೆಗಳಿಗೆ ಇರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *