ಕಸ್ಟಮರ್ ಮನೆಯಲ್ಲಿ ಚಿನ್ನ ಕದ್ದ ಕ್ಯಾಬ್​​ ಚಾಲಕ ಲಾಕ್​​: ದೋಚಿದ್ದಿದ್ದು ಬರೋಬ್ಬರಿ 25 ಲಕ್ಷ ಮೌಲ್ಯದ ಬಂಗಾರ!

ಕಸ್ಟಮರ್ ಮನೆಯಲ್ಲಿ ಚಿನ್ನ ಕದ್ದ ಕ್ಯಾಬ್​​ ಚಾಲಕ ಲಾಕ್​​: ದೋಚಿದ್ದಿದ್ದು ಬರೋಬ್ಬರಿ 25 ಲಕ್ಷ ಮೌಲ್ಯದ ಬಂಗಾರ!

ಬೆಂಗಳೂರು, ಮಾರ್ಚ್​ 09: ಕಸ್ಟಮರ್ ಮನೆಯಲ್ಲಿ 25 ಲಕ್ಷ ಮೌಲ್ಯದ ಚಿನ್ನಾಭರಣ ದೊಚ್ಚಿದ್ದ ಕ್ಯಾಬ್ ಚಾಲಕನನ್ನು ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ. ಅಬ್ದುಲ್ ರೆಹಮಾನ್ ಬಂಧಿತ ಆರೋಪಿಯಾಗಿದ್ದು, ಚಿನ್ನಾಭರಣ ಸಮೇತ ಚಾಲಕನನ್ನು ಪೊಲೀಸರು ಲಾಕ್​​ ಮಾಡಿದ್ದಾರೆ. ಫೆಬ್ರವರಿ 11 ಶಾಪಿಂಗ್​​ಗೆ ಮುಂಬೈಗೆ ಹೊರಟಿದ್ದ ದಂಪತಿ, ಹೆಬ್ಬಾಳದಿಂದ ಯಶವಂತಪುರಕ್ಕೆ ಕ್ಯಾಬ್ ಬುಕ್ ಮಾಡಿದ್ದರು. ಈ ವೇಳೆ ಸೈಯದ್ ಸಲ್ಮಾನ್ ಪತ್ನಿಗೆ ಮನೆಯಲ್ಲಿ ಚಿನ್ನಾಭರಣ ಇರುವ ಕಪಾಟು ಲಾಕ್ ಮಾಡಿದ್ದೀಯಾ ಎಂದು ಕೇಳಿದ್ದರು. ಮಾರ್ಗ ಮಧ್ಯೆ ಮೂರು ದಿನಗಳ ಕಾಲ ಮನೆಗೆ ವಾಪಾಸ್ ಬರಲ್ಲ ಎಂದು ಇವರು ಮಾತಾಡಿದ್ದನ್ನೂ ಸಹ ಆರೋಪಿ ಕೇಳಿಸಿಕೊಂಡಿದ್ದ. ಸೈಯದ್ ಕುಟುಂಬವನ್ನು ಯಶವಂತಪುರಕ್ಕೆ ಡ್ರಾಪ್ ಮಾಡಿ ಹೆಬ್ಬಾಳಕ್ಕೆ ಬಂದಿದ್ದ ಅಬ್ದುಲ್ ರೆಹಮಾನ್,  ಸೈಯದ್ ಸಲ್ಮಾನ್ ಮನೆಯಲ್ಲಿ ಕಳ್ಳತನ ನಡೆಸಿದ್ದ. ಈ ಸಂಬಂಧ ಸಿಸಿ ಕ್ಯಾಮೆರಾ ಪರಿಶೀಲನೆ ವೇಳೆ ಕ್ಯಾಬ್ ಚಾಲಕ ಬಂದಿರೋದು ಪತ್ತೆಯಾಗಿದ್ದು, ಆತನ ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ. ಈತ ಈ ಹಿಂದೆಯೂ ಇದೇ ರಿತಿಯ ಕೃತ್ಯಗಳಲ್ಲಿ ಭಾಗಿಯಾಗಿದ್ದು, ಜಾಮೀನಿನ ಮೇಲೆ ಹೊರ ಬಂದಿದ್ದ ಎಂಬುದು ಗೊತ್ತಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *