Headlines

ಕಾಂಗ್ರೆಸ್​​ನಿಂದ ಭಾರತದ ವರ್ಚಸ್ಸು ನಾಶಮಾಡುವ ಪ್ರಯತ್ನ; ಪ್ರಧಾನಿ ಮೋದಿ ವಾಗ್ದಾಳಿ – Kannada News | They Tried To Destroy India’s Image PM Narendra Modi Lashes Out At Congress Over shirtless Protest

ನವದೆಹಲಿ, ಫೆಬ್ರವರಿ 27: ಫೆಬ್ರವರಿ 21ರಂದು ಮುಕ್ತಾಯಗೊಂಡ AI ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಭಾರತದ ಇಮೇಜ್ ಅನ್ನು ನಾಶಮಾಡಲು ಪ್ರಯತ್ನಿಸಿದ ಕಾಂಗ್ರೆಸ್ ಪ್ರಯತ್ನಿಸಿತು ಎಂದು ಪ್ರಧಾನಿ ನರೇಂದ್ರ ಮೋದಿ (PM Modi) ಕಾಂಗ್ರೆಸ್ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನ್ಯೂಸ್ 18 ರೈಸಿಂಗ್ ಭಾರತ್ ಶೃಂಗಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಪಿಎಂ ಮೋದಿ, ಯುವ ಕಾಂಗ್ರೆಸ್ ಶರ್ಟ್ ಬಿಚ್ಚಿ ನಡೆಸಿದ ಪ್ರತಿಭಟನೆಯನ್ನು ಕೊಳಕು ತಂತ್ರ ಎಂದು ಟೀಕಿಸಿದರು.

“AI ಶೃಂಗಸಭೆಯು ಇಡೀ ದೇಶಕ್ಕೆ ಹೆಮ್ಮೆಯ ಕ್ಷಣವಾಗಿತ್ತು. ಆದರೆ, ಕಾಂಗ್ರೆಸ್ ಪಕ್ಷವು ರಾಷ್ಟ್ರೀಯ ಆಚರಣೆಯನ್ನು ಒಂದು ಪ್ರದರ್ಶನವನ್ನಾಗಿ ಮಾಡಲು ಪ್ರಯತ್ನಿಸಿತು. ವಿದೇಶಿ ಅತಿಥಿಗಳ ಮುಂದೆ ಕಾಂಗ್ರೆಸ್ ತನ್ನ ನಿಜವಾದ ಮುಖವನ್ನು ತಾನು ಬಹಿರಂಗಪಡಿಸಿಕೊಂಡಿತು. ಅಷ್ಟೇ ಅಲ್ಲದೆ ತನ್ನ ಸೈದ್ಧಾಂತಿಕ ದಿವಾಳಿತನವನ್ನೂ ಬಹಿರಂಗಪಡಿಸಿತು” ಎಂದು ಮೋದಿ ಟೀಕಿಸಿದರು.

ಇದನ್ನೂ ಓದಿ: ಮಾನವೀಯತೆ ಎಂದಿಗೂ ಸಂಘರ್ಷಕ್ಕೆ ಬಲಿಯಾಗಬಾರದು; ಇಸ್ರೇಲ್​ನಲ್ಲಿ ಪ್ರಧಾನಿ ಮೋದಿ

“ಕಾಂಗ್ರೆಸ್ ಜಿತ್ನಾ ಶರ್ಟ್ ಫಾರ್ತೇ ರಹೇ, ಹಮ್ ಅಪ್ನಾ ಕಾಮ್ ಕರ್ತೇ ರಹೇ (ಕಾಂಗ್ರೆಸ್ ಎಷ್ಟೇ ಶರ್ಟ್ ಇಲ್ಲದೆ ಪ್ರತಿಭಟನೆ ನಡೆಸಿದರೂ, ನಾವು ನಮ್ಮ ಕೆಲಸವನ್ನು ಮುಂದುವರಿಸುತ್ತೇವೆ)” ಎಂದು ಅವರು ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:35 pm, Fri, 27 February 26

Source link

Leave a Reply

Your email address will not be published. Required fields are marked *