
ನವದೆಹಲಿ, (ಜುಲೈ 19): ನಾಳೆಯಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗುವ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಇನ್ನು ಜುಲೈ 20ರಂದು ಕಾಕ್ರೋಚ್ ಜನತಾ ಪಕ್ಷ (CJP) ನಡೆಸಲು ಉದ್ದೇಶಿಸಿದ್ದ ‘ಚಲೋ ಸಂಸದ್’ ಮೆರವಣಿಗೆಯನ್ನು ದೆಹಲಿ ಪೊಲೀಸರು ನಿರ್ಬಂಧಿಸಿದ್ದಾರೆ. ಕಾಕ್ರೋಚ್ ಜನತಾ ಪಕ್ಷ (CJP) ನಡೆಸಲು ಉದ್ದೇಶಿಸಿದ್ದ ‘ಚಲೋ ಸಂಸದ್’ ಮೆರವಣಿಗೆ ಸಂಬಂಧ ದೆಹಲಿ ಪೊಲೀಸರಿಗೆ ಯಾವುದೇ ಅನುಮತಿ ಕೋರಿ ಅರ್ಜಿ ನೀಡಿಲ್ಲ. ಪ್ರತಿಭಟನಾ ಮೆರವಣಿಗೆಗಾಗಿ ಸಂಘಟನೆಯಿಂದ ಯಾವುದೇ ಅನುಮತಿಯನ್ನು ಕೋರಿಲ್ಲ ಅಥವಾ ಪೊಲೀಸ್ ಆಡಳಿತದಿಂದ ಅಂತಹ ಯಾವುದೇ ಅನುಮತಿಯನ್ನು ನೀಡಲಾಗಿಲ್ಲ ಎಂದು ದೆಹಲಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಅನುಮತಿಯಿಲ್ಲದೆ ಬೀದಿಗಿಳಿಯುವ ಪ್ರತಿಭಟನಾಕಾರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಸಿದ್ದಾರೆ.