ಕಾರವಾರ, ಮೇ 07: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಹಟುಗಾ ಗ್ರಾಮದ ಬಳಿ ಕೈಗಾ ಅಣುಸ್ಥಾವರಕ್ಕೆ ಸಂಬಂಧಿಸಿದ ಸಲಕರಣೆ ಹೊತ್ತಿದ್ದ ಭಾರೀ ವಾಹನವೊಂದು ಪಲ್ಟಿಯಾಗಿದೆ. ಕೈಗಾ ಅಣುಸ್ಥಾವರದ 5 ಮತ್ತು 6ನೇ ಘಟಕಗಳಿಗಾಗಿ ಸೂರತ್ನಿಂದ ತರಲಾಗುತ್ತಿದ್ದ ಸುಮಾರು 140 ಟನ್ ತೂಕದ ವಿಕಿರಣ ರಕ್ಷಾ ಕವಚ ಹೊತ್ತಿದ್ದ ವಾಹನವೇ ಅಪಘಾತಕ್ಕೆ ಈಡಾಗಿದ್ದು, ಅದೃಷ್ಟವಶಾತ್ ದೊಡ್ಡ ಅನಾಹುತ ತಪ್ಪಿದೆ. ಕೈಗಾ ಅಣುಸ್ಥಾವರದ ವಿಸ್ತರಣಾ ಕಾಮಗಾರಿಗಾಗಿ ಅತ್ಯಗತ್ಯವಾಗಿದ್ದ ಈ ವಿಕಿರಣ ರಕ್ಷಾ ಕವಚವನ್ನು ಸೂರತ್ನಿಂದ ರಸ್ತೆಯ ಮೂಲಕ ಅತ್ಯಂತ ಜಾಗರೂಕತೆಯಿಂದ ಸಾಗಿಸಲಾಗುತ್ತಿತ್ತು. ಆದರೆ ಮಲೆನಾಡಿನ ತಿರುವು ರಸ್ತೆಗಳಲ್ಲಿ ಸಾಗುವಾಗ ಈ ಅವಘಡ ಸಂಭವಿಸಿದೆ. 140 ಟನ್ ಭಾರ ಇರುವುದರಿಂದ ವಾಹನವನ್ನು ಮೇಲೆತ್ತಲು ಬೃಹತ್ ಕ್ರೇನ್ಗಳ ಅವಶ್ಯಕತೆಯಿದ್ದು, ಸ್ಥಳಕ್ಕೆ ಕೈಗಾ ಅಧಿಕಾರಿಗಳು ಮತ್ತು ತಾಂತ್ರಿಕ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.