ಕಾರಿನಲ್ಲಿದ್ದ ಹಣದ ಬ್ಯಾಗ್​​ ಎಗರಿಸಿ ಪರಾರಿಯಾಗುವಷ್ಟರಲ್ಲಿ ಸಿಕ್ಕಿಬಿದ್ದ ಕಳ್ಳರು: ಕಂಬಕ್ಕೆ ಕಟ್ಟಿಹಾಕಿ ಸ್ಥಳೀಯರಿಂದ ಥಳಿತ​​

ಕಾರಿನಲ್ಲಿದ್ದ ಹಣದ ಬ್ಯಾಗ್​​ ಎಗರಿಸಿ ಪರಾರಿಯಾಗುವಷ್ಟರಲ್ಲಿ ಸಿಕ್ಕಿಬಿದ್ದ ಕಳ್ಳರು: ಕಂಬಕ್ಕೆ ಕಟ್ಟಿಹಾಕಿ ಸ್ಥಳೀಯರಿಂದ  ಥಳಿತ​​

ಚಿಕ್ಕಬಳ್ಳಾಪುರ, ಮಾರ್ಚ್​ 08: ಸಂಬಂಧಿಕರ ಮದುವೆ ಕಾರ್ಯದ ಪ್ರಯುಕ್ತ ಎಲ್ಲಾ ಚಿನ್ನಾಭರಣವನ್ನು ಒತ್ತೆಯಿಟ್ಟು ಅದರಿಂದ ಬಂದ ಹಣವನ್ನು ತೆಗೆದುಕೊಂಡ ಕುಟುಂಬವೊಂದು ಬೆಂಗಳೂರಿನತ್ತ ಹೊರಟಿತ್ತು. ದಾರಿ ಮಧ್ಯೆ ಟೀ ಕುಡಿಯಲು ಕಾರು ನಿಲ್ಲಿಸಿ ಬಾಗಿಲು ತೆಗೆದಿದ್ದೆ ತಡ, ಫಿಲ್ಮಿ ಸ್ಟೈಲ್​​ನಲ್ಲಿ ಬಂದ ಕಳ್ಳರ ಗ್ಯಾಂಗ್ ಕಾರಿನಲ್ಲಿದ್ದ ಹಣದ ಬ್ಯಾಗ್ ಕದ್ದು (Robbery) ಎಸ್ಕೇಪ್ ಆಗುತ್ತಿದ್ದರು. ಇದನ್ನು ನೋಡಿದ ಸ್ಥಳೀಯರು ಇಬ್ಬರು ಕಳ್ಳರನ್ನು ಹಿಡಿದು ಕಂಬಕ್ಕೆ ಕಟ್ಟಿ ಹಾಕಿದ್ದಾರೆ. ಆದರೆ ಮತ್ತೊಬ್ಬ ಹಣದ ಸಮೇತ ಪರಾರಿ ಆಗಿದ್ದಾನೆ. ಚಿಕ್ಕಬಳ್ಳಾಪುರ ನಗರ ಹೊರಹೊಲಯದ ಕೆ.ವಿ ಕ್ಯಾಂಪಸ್​ ಬಳಿ ಘಟನೆ ನಡೆದಿದೆ.

ಕಳ್ಳರನ್ನು ಬೆನ್ನಟ್ಟಿ  ಹಿಡಿದ ಕ್ರಿಕೆಟ್ ಆಡುತ್ತಿದ್ದ ಯುವಕರು  

ಆಂಧ್ರ ಮೂಲದ ಉಷಾ ಹಾಗೂ ಅವರ ಇಬ್ಬರು ಮಕ್ಕಳು, ಸಂಬಂಧಿಕರ ಮದುವೆ ಕಾರ್ಯಕ್ಕೆ ಹಣ ಕೊಡಲು ಆಂಧ್ರದಿಂದ ಬೆಂಗಳೂರಿಗೆ ಹೊರಟಿದ್ದರು. ದಾರಿ ಮಧ್ಯೆ ಚಿಕ್ಕಬಳ್ಳಾಪುರದ ಬಳಿ ತಿಂಡಿ ತಿನ್ನಲು ಅಂತ ಕಾರು ನಿಲ್ಲಿಸಿ ಬಾಗಿಲು ತೆಗೆದಿದ್ದೆ ತಡ, ಅಷ್ಟರಲ್ಲಿ ಬಂದ ಮೂವರು ಅಪರಿಚಿತ ಯುವಕರು ಕಾರಿನಲ್ಲಿದ್ದ ಹಣದ ಬ್ಯಾಗ್ ಎಗರಿಸಿ ಪರಾರಿ ಆಗಿದ್ದಾರೆ. ಉಷಾ ಮಕ್ಕಳು ಜೋರಾಗಿ ಕೂಗಿದ್ದಾರೆ. ಈ ವೇಲೆ ಅಲ್ಲೇ ಕ್ರಿಕೆಟ್ ಆಡುತ್ತಿದ್ದ ಯುವಕರು ಸಹ ಬೆನ್ನಟ್ಟಿ ಇಬ್ಬರು ಕಳ್ಳರನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಇದನ್ನೂ ಓದಿ: ಉದ್ಯಮಿ ಮನೆಯಲ್ಲಿ ದರೋಡೆ ಕೇಸ್​​ಗೆ ಬಿಗ್​​ ಟ್ವಿಸ್ಟ್​​: ಪ್ರಾಣ ಸ್ನೇಹಿತನ ಮನೆಯಲ್ಲೇ ರಾಬರಿ ಮಾಡಿಸಿದ ಸ್ಟಾಂಪ್ ವೆಂಡರ್

ಇನ್ನು ಸ್ಥಳಿಯರು ಇಬ್ಬರನ್ನು ಲಾಕ್ ಮಾಡುತ್ತಿದ್ದಂತೆ ಮತ್ತೋರ್ವ ಹಣದ ಬ್ಯಾಗ್ ಸಮೇತ ಪರಾರಿ ಆಗಿದ್ದಾನೆ. ನಂದಿಗಿರಿಧಾಮ ಠಾಣೆ ಪೊಲಿಸರು ಶೋಧ ಕಾರ್ಯ ನಡೆಸಿದ್ದಾರೆ.

ಇದನ್ನೂ ಓದಿ: ಉದ್ಯಮಿ ಮನೆಯಲ್ಲಿ ಕಳ್ಳತನ ಪ್ರಕರಣಕ್ಕೆ ಬಿಗ್​​​​ ಟ್ವಿಸ್ಟ್​: ಪೆರೋಲ್ ಮೇಲೆ ಹೊರಬಂದಿದ್ದ ಕುಖ್ಯಾತ ಖೈದಿಯಿಂದಲ್ಲೇ ಕನ್ನ!

ಹಣದ ಬ್ಯಾಗ್ ಸಮೇತ ಕಾರು ಆಂಧ್ರದಿಂದ ಬೆಂಗಳೂರಿಗೆ ಹೊರಟಿತ್ತು. ಕಾರಿನಲ್ಲಿ ಹಣ ಇರುವ ಬಗ್ಗೆ ಹಾಗೂ ಕಾರು ಡೋರ್ ತೆಗೆದಯುತ್ತಿದ್ದಂತೆ ಅಟ್ಯಾಕ್ ಮಾಡಿರುವ ಹಿಂದೆ ಹಲವು ಅನುಮಾನಗಳು ವ್ಯಕ್ತವಾಗಿವೆ. ಮತ್ತೊಂದೆಡೆ ಬಂಧಿತ ಕಳ್ಳರು ಕಾರಿನಲ್ಲಿ ಇರುವವರ ಮೇಲೇ ಬೊಟ್ಟುತೋರಿಸಿದ್ದಾರೆ. ಒಟ್ಟಿನಲ್ಲಿ ಪೊಲೀಸರ ತನಿಖೆಯಿಂದ ಸತ್ಯ ಗೊತ್ತಾಗಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *