
ಬ್ರೆಜಿಲ್, ಏಪ್ರಿಲ್ 17: ಸಾಮಾನ್ಯವಾಗಿ ಮಕ್ಕಳು ಶಾಲೆಗೆ ಹೋಗುವಾಗ ಅಳುತ್ತಾರೆ, ಸಂಜೆ ಮನೆಗೆ ಹೋಗಲು ಪೋಷಕರು ಬಂದಾಗ ಓಡಿ ಹೋಗಿ ಅವರನ್ನು ಅಪ್ಪಿಕೊಳ್ಳುತ್ತಾರೆ. ಆದರೆ ಬ್ರೆಜಿಲ್‌ನ ಈ ಕಿಂಡರ್‌ಗಾರ್ಟನ್ ಬಾಲಕಿಯ ಕಥೆಯೇ ಬೇರೆ. ದಿನವಿಡೀ ಶಾಲೆಯಲ್ಲಿದ್ದ ಮಗಳನ್ನು ಮನೆಗೆ ಕರೆದುಕೊಂಡು ಹೋಗಲು ಪೋಷಕರು ಅತೀವ ಸಂಭ್ರಮದಿಂದ ಶಾಲೆಗೆ ಬಂದಿದ್ದರು. ತರಗತಿಯಿಂದ ಹೊರಬಂದ ಪುಟ್ಟ ಹುಡುಗಿ ತನ್ನ ಹೆತ್ತವರನ್ನು ನೋಡಿ ಓಡಿ ಬಂದು ಅಪ್ಪಿಕೊಳ್ಳುತ್ತಾಳೆ ಎಂದು ಅವರು ನಿರೀಕ್ಷಿಸಿದ್ದರು.
ಆದರೆ ಅಲ್ಲಿ ನಡೆದಿದ್ದೇ ಬೇರೆ, ಆಕೆ ತನ್ನ ಪೋಷಕರನ್ನು ಕಂಡೂ ಕಾಣದಂತೆ ಅವರ ಪಕ್ಕದಲ್ಲೇ ನಡೆದು ನೇರವಾಗಿ ಹೋದಳು. ಪೋಷಕರಿಗೆ ಒಂದು ಕ್ಷಣ ದಿಗಿಲಾಯಿತು, ನಮ್ಮ ಮಗಳು ನಮ್ಮನ್ನೇ ಅಪ್ಪಿಕೊಳ್ಳದೆ ಯಾರ ಹಿಂದೆ ಹೋಗುತ್ತಿದ್ದಾಳೆ ಎಂದು ಅವರು ಕುತೂಹಲದಿಂದ ಅವಳನ್ನು ಹಿಂಬಾಲಿಸಿದರು.
ಆ ಪುಟ್ಟ ಬಾಲಕಿ ಓಡಿ ಹೋಗಿ ಅಪ್ಪಿಕೊಂಡಿದ್ದು ಶಾಲೆಯ ಸೆಕ್ಯೂರಿಟಿ ಅಥವಾ ಮಕ್ಕಳನ್ನು ಕರೆದೊಯ್ಯುವ ಸಿಬ್ಬಂದಿಯನ್ನು, ಪ್ರತಿದಿನ ಬೆಳಗ್ಗೆ ಪೋಷಕರು ಕಾರಿನಲ್ಲಿ ಕರೆತಂದಾಗ, ಈ ಸಿಬ್ಬಂದಿಯೇ ಆಕೆಯನ್ನು ಪ್ರೀತಿಯಿಂದ ಎತ್ತಿಕೊಂಡು ತರಗತಿಯವರೆಗೆ ಬಿಡುತ್ತಿದ್ದರು. ಆ ಪುಟ್ಟ ಹೃದಯದಲ್ಲಿ ಆ ವ್ಯಕ್ತಿಯ ಬಗ್ಗೆ ಎಷ್ಟು ಗಾಢವಾದ ಸ್ನೇಹ ಬೆಳೆದಿತ್ತೆಂದರೆ, ಮನೆಗೆ ಹೋಗುವ ಸಮಯದಲ್ಲೂ ಅವರನ್ನು ಬಾಲಕಿ ಮರೆತಿರಲಿಲ್ಲ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ