ಕುಕ್ಕೆ ಹಾಗೂ ಕೊಲ್ಲೂರು ದೇವಾಲಯಗಳಿಗೆ ಹೋಗುವ ಭಕ್ತರಿಗೆ ಗುಡ್​​​ ನ್ಯೂಸ್ ನೀಡಿದ ಸಿದ್ದರಾಮಯ್ಯ – Kannada News | Karnataka Budget Boost: Kukke and Kollur Temples Get Development Authorities

ಬೆಂಗಳೂರು: ಇಂದು (ಮಾ.6) 17ನೇ ಬಜೆಟ್​​​ ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರಾವಳಿಗೆ ಹೆಚ್ಚು ಮಹತ್ವದ ನೀಡಿದ್ದಾರೆ. ಬಜೆಟ್​​​ ಆರಂಭದಲ್ಲಿ ಮಹತ್ವದ ಘೋಷಣೆಯನ್ನು ಮಾಡಿದ್ದಾರೆ. ರಾಜ್ಯದ ಅತಿ ಹೆಚ್ಚು ಆದಾಯ ತರುವ ಹಾಗೂ ಲಕ್ಷಾಂತರ ಭಕ್ತರು ಭೇಟಿ ನೀಡುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮತ್ತು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯಗಳ ಮೂಲಸೌಕರ್ಯ ವೃದ್ಧಿಗೆ ಸರ್ಕಾರ ಮುಂದಾಗಿದೆ. ಬಜೆಟ್‌ನಲ್ಲಿ ಘೋಷಿಸಲಾದ ಈ ಪ್ರಾಧಿಕಾರಗಳು ದೇವಾಲಯಗಳ ಆಡಳಿತ ಮತ್ತು ಭಕ್ತರ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸಲಿವೆ.

ಪ್ರಾಧಿಕಾರ ರಚನೆಯ ಪ್ರಮುಖ ಉದ್ದೇಶಗಳು:

ಸಮಗ್ರ ಅಭಿವೃದ್ಧಿ: ದೇವಾಲಯದ ಸುತ್ತಮುತ್ತಲಿನ ರಸ್ತೆಗಳು, ಕುಡಿಯುವ ನೀರು ಮತ್ತು ನೈರ್ಮಲ್ಯ ವ್ಯವಸ್ಥೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವುದು.

ಭಕ್ತರ ಸೌಲಭ್ಯ: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಭಕ್ತರ ಸಂಖ್ಯೆಗೆ ಅನುಗುಣವಾಗಿ ವಸತಿ ನಿಲಯಗಳು, ಸರತಿ ಸಾಲಿನ ವ್ಯವಸ್ಥೆ ಮತ್ತು ದಾಸೋಹ ಭವನಗಳ ಆಧುನೀಕರಣ.

ಪರಿಸರ ಸಂರಕ್ಷಣೆ: ಕುಕ್ಕೆ ಸುಬ್ರಹ್ಮಣ್ಯವು ಪಶ್ಚಿಮ ಘಟ್ಟದ ಸೂಕ್ಷ್ಮ ಪ್ರದೇಶದಲ್ಲಿದೆ. ಪ್ರಾಧಿಕಾರ ರಚನೆಯಿಂದ ಇಲ್ಲಿನ ಪರಿಸರ ಸಮತೋಲನ ಕಾಪಾಡುತ್ತಾ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ.

ಆಡಳಿತಾತ್ಮಕ ಪಾರದರ್ಶಕತೆ: ದೇವಾಲಯದ ಆದಾಯವನ್ನು ಸಮರ್ಪಕವಾಗಿ ಆಯಾ ಕ್ಷೇತ್ರಗಳ ಅಭಿವೃದ್ಧಿಗೇ ಬಳಸಲು ಈ ಸ್ವಾಯತ್ತ ಪ್ರಾಧಿಕಾರಗಳು ನೆರವಾಗಲಿವೆ.

ಇದನ್ನೂ ಓದಿ: Karnataka Budget 2026 LIVE: 18 ವರ್ಷದವರೆಗಿನ ಮಧುಮೇಹ ರೋಗಿಗಳಿಗೆ ಉಚಿತ ಇನ್ಸುಲಿನ್ ಪೆನ್: ಸಿದ್ದರಾಮಯ್ಯ

ಈ ಘೋಷಣೆಯು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಧಾರ್ಮಿಕ ಪ್ರವಾಸೋದ್ಯಮಕ್ಕೆ ದೊಡ್ಡ ಬಲ ನೀಡಲಿದೆ. ಹಂಪಿ ಅಥವಾ ಮಲೆ ಮಹದೇಶ್ವರ ಬೆಟ್ಟದ ಪ್ರಾಧಿಕಾರಗಳ ಮಾದರಿಯಲ್ಲಿಯೇ ಇವು ಕಾರ್ಯನಿರ್ವಹಿಸುವ ಸಾಧ್ಯತೆ ಇದೆ.

ಬಜೆಟ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *