ಬೆಂಗಳೂರು, ಏಪ್ರಿಲ್ 27: ನಗರದ ಇನ್ಫೆಂಟ್ರಿ ರಸ್ತೆಯಲ್ಲಿ ನಿರ್ಮಿಸಲಾಗಿರುವ KAS ಅಧಿಕಾರಿಗಳ ಸಂಘದ ನವೀಕೃತ ಕಟ್ಟಡವನ್ನು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಒಟ್ಟಿಗೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕೆಎಎಸ್ ಅಧಿಕಾರಿಗಳಿಗೆ ಪ್ರಮೋಷನ್ ಸಂಬಂಧ 2 ಸಭೆಯಾಗಿದೆ. ಆದಷ್ಟು ಬೇಗ ಪ್ರಮೋಷನ್ ಆಗುತ್ತದೆ ಎಂದರು. ಶೇ. 33% ಅಧಿಕಾರಿಗಳನ್ನು ಸಿಇಒಗಳಾಗಿ ಬಡ್ತಿ ನೀಡುವ ಭರವಸೆ ನೀಡಿದ್ದಾರೆ. ಸಮಸ್ಯೆ ಹೇಳಿಕೊಂಡು ಜನ ನಿಮ್ಮ ಬಳಿ ಬರ್ತಾರೆ, ಸಮಾಧಾನದಿಂದ ಕೇಳಿ ಕೆಲಸ ಮಾಡಿದರೆ ರಾಜ್ಯಕ್ಕೂ ಕೀರ್ತಿ ಬರುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.