Headlines

ಕೇವಲ 6 ಲಕ್ಷಕ್ಕೆ ಮನೆ; ನಿವೇಶನ ಉಚಿತ, ಸರ್ಕಾರದಿಂದ ಸಬ್ಸಿಡಿ; ಇದು ತೆಲಂಗಾಣ ಸರ್ಕಾರದ ಹೊಸ ಇಂದಿರಮ್ಮ ಹೌಸಿಂಗ್ ಸ್ಕೀಮ್ ಆಫರ್ – Kannada News | Indiramma Housing Scheme, Telangana Govt gives heavily subsidized houses for lower income family

ತೆಲಂಗಾಣ ಸಿಎಂ ರೇವಂತ್ ರೆಡ್ಡಿImage Credit source: TV9 Network

ಹೈದರಾಬಾದ್, ಜುಲೈ 21: ತೆಲಂಗಾಣ ಸರ್ಕಾರವು ಬಡವರಿಗಾಗಿ ಮಹತ್ವಾಕಾಂಕ್ಷೆಯ ‘ಇಂದಿರಮ್ಮ ಹೌಸಿಂಗ್ ಸ್ಕೀಮ್’ (Indiramma Housing Scheme) ಅಡಿಯಲ್ಲಿ ಅರ್ಹರಿಗೆ ಕಡಿಮೆ ವೆಚ್ಚದಲ್ಲಿ ಮನೆಗಳನ್ನು ಒದಗಿಸಲು ಹೊಸ ಯೋಜನೆಗೆ ಚಾಲನೆ ನೀಡಿದೆ. ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳ ಸ್ವಂತ ಮನೆಯ ಕನಸು ನನಸು ಮಾಡಲು ಸರ್ಕಾರ ಇಂದಿರಮ್ಮ ಯೋಜನೆ ಹಮ್ಮಿಕೊಂಡಿದೆ. ನಗರ ಪ್ರದೇಶಗಳ ಬಡವರಿಗಾಗಿ (CURE area- Core Urban Region Economy) ನಿರ್ಮಿಸುತ್ತಿರುವ ಪ್ರತಿಯೊಂದು ಫ್ಲಾಟ್‌ನ ಅಂದಾಜು ವೆಚ್ಚ ₹11 ಲಕ್ಷವಾಗಿದೆ. ಇದರಲ್ಲಿ ಸರ್ಕಾರವು ₹5 ಲಕ್ಷ ಸಬ್ಸಿಡಿ (ಸಹಾಯಧನ) ನೀಡುತ್ತದೆ. ಫಲಾನುಭವಿಗಳು (beneficiaries) ಮಿಕ್ಕ ₹6 ಲಕ್ಷ ಮಾತ್ರವೇ ಭರಿಸಬೇಕಾಗುತ್ತದೆ.

ಫಲಾನುಭವಿಗಳು ತಮ್ಮ ಪಾಲಿನ ₹6 ಲಕ್ಷವನ್ನು ಕಂತುಗಳ ರೂಪದಲ್ಲಿ ಹಂತ ಹಂತವಾಗಿ ಪಾವತಿಸಬಹುದು. ಉದಾಹರಣೆಗೆ, RCC ಪೂರ್ಣಗೊಂಡ ನಂತರ ₹1 ಲಕ್ಷ, ಫಿನಿಶಿಂಗ್ ಹಂತದಲ್ಲಿ ₹2 ಲಕ್ಷ ಹೀಗೆ ಕಂತುಗಳಲ್ಲಿ ಪಾವತಿಸಲು ಅವಕಾಶ ಇರುತ್ತದೆ. ಇಂದಿರಮ್ಮ ಹೌಸಿಂಗ್ ಸ್ಕೀಮ್​ನಲ್ಲಿ ಈ ಪ್ರತಿ ಫ್ಲಾಟ್ ಸುಮಾರು 528 ಚದರ ಅಡಿ ವಿಸ್ತೀರ್ಣವನ್ನು ಹೊಂದಿರಲಿದೆ. ಸುಮಾರು 20×25 ವಿಸ್ತೀರ್ಣದ ಮನೆಯಾಗಿರುತ್ತದೆ.

ಇದನ್ನೂ ಓದಿ: ಟ್ಯಾಪ್ ಟು ಪೇ, ಹೊಸ ಯುಪಿಐ ಫೀಚರ್; ಇಂಟರ್ನೆಟ್ ಇಲ್ಲದ ಫ್ಲೈಟ್, ಅಂಡರ್​ಗ್ರೌಂಡ್ ಮೆಟ್ರೋಗೂ ಹಣ ಪಾವತಿಸಿ

ಇಂದಿರಮ್ಮ ಹೌಸಿಂಗ್ ಸ್ಕೀಮ್ ಪಡೆಯುವವರಿಗೆ ಏನು ಅರ್ಹತೆ?

  • ವಾಸಸ್ಥಳ: ಆಯಾ ವಿಧಾನಸಭಾ ಕ್ಷೇತ್ರದ ಖಾಯಂ ನಿವಾಸಿಗಳಾಗಿರಬೇಕು ಮತ್ತು ಕನಿಷ್ಠ 10 ವರ್ಷಗಳಿಂದ ನಗರದಲ್ಲಿ ವಾಸಿಸುತ್ತಿರಬೇಕು.
  • ಆಸ್ತಿ ಹೊಂದಿರಬಾರದು: ಅರ್ಜಿದಾರರು ಅಥವಾ ಅವರ ಕುಟುಂಬದ ಹೆಸರಿನಲ್ಲಿ ಯಾವುದೇ ಸ್ವಂತ ಮನೆ, ಫ್ಲಾಟ್ ಅಥವಾ ನಿವೇಶನ ಇರಬಾರದು.
  • ಆದಾಯ ಮಿತಿ: ಕುಟುಂಬದ ವಾರ್ಷಿಕ ಆದಾಯವು ₹6 ಲಕ್ಷಕ್ಕಿಂತ ಕಡಿಮೆ ಇರಬೇಕು.

ಷರತ್ತು: ಈ ಯೋಜನೆಯಡಿ ಪಡೆದ ಫ್ಲಾಟ್‌ಗಳನ್ನು ಮುಂದಿನ 10 ವರ್ಷಗಳವರೆಗೆ ಮಾರಾಟ ಮಾಡುವಂತಿಲ್ಲ ಅಥವಾ ಬಾಡಿಗೆಗೆ ನೀಡುವಂತಿಲ್ಲ (ಆದರೆ ಬ್ಯಾಂಕ್‌ಗಳಲ್ಲಿ ಸಾಲ ಪಡೆಯಲು ಅಡಮಾನ ಇಡಬಹುದು).

ಇದನ್ನೂ ಓದಿ: ಆದಾಯ ತೆರಿಗೆ ನೋಟೀಸ್ ಬಂತಾ? ಅದು ವಂಚಕರ ಜಾಲವಾ? ಆನ್​ಲೈನ್​ನಲ್ಲೇ ಪರಿಶೀಲಿಸಿ

ಇಂದಿರಮ್ಮ ವಸತಿ ಯೋಜನೆಯಲ್ಲಿ ಮನೆಗಾಗಿ ಅರ್ಜಿ ಸಲ್ಲಿಸುವುದು ಹೇಗೆ?

₹100 ಹಾಗೂ ಟೋಕನ್ ಅಡ್ವಾನ್ಸ್ (Token Advance) ₹10,000 ಪಾವತಿಸಬೇಕಾಗುತ್ತದೆ. ಅರ್ಹತೆ ಅರ್ಜಿ ತಿರಸ್ಕೃತವಾದರೆ ಈ ಟೋಕನ್ ಅಡ್ವಾನ್ಸ್ ಅನ್ನು ರೀಫಂಡ್ ಮಾಡಲಾಗುತ್ತದೆ.

ಆಸಕ್ತರು ಮೀ ಸೇವಾ ಕೇಂದ್ರಗಳು (MeeSeva centres), ಮೀ ಸೇವಾ ಪೋರ್ಟಲ್ ಅಥವಾ ಮೀ ಸೇವಾ ವಾಟ್ಸಾಪ್ ಸೇವೆ ಮೂಲಕ ಅರ್ಜಿ ಸಲ್ಲಿಸಬಹುದು. ಫಲಾನುಭವಿಗಳನ್ನು ಲಾಟರಿ (Draw of lots) ಅಥವಾ ಪರಿಶೀಲನೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 4:35 pm, Tue, 21 July 26

Source link

Leave a Reply

Your email address will not be published. Required fields are marked *