Headlines

ಕೈ ಕೈ ಮಿಲಾಹಿಸಿಕೊಂಡ ಕಾಂಗ್ರೆಸ್ ಕಾರ್ಯಕರ್ತರು: ರಾಜೀವ್ ಗೌಡ ಬೆಂಬಲಿಗನಿಗೆ ಧರ್ಮದೇಟು – Kannada News | Fighting Between Congress Workers In Chikkaballapur

ಚಿಕ್ಕಬಳ್ಳಾಪುರ, (ಜುಲೈ 25): ಜಿಲ್ಲಾ ಕಾಂಗ್ರೆಸ್ ನಲ್ಲಿ ಭಿನ್ನಮತ ಭುಗಿಲೆದ್ದಿದ್ದು, ಸಂಘಟನ್ ಸೃಜನ್ ಅಭಿಯಾನದ ಸಭೆಯಲ್ಲಿ AICC ವೀಕ್ಷಕರ ಮುಂದೆಯೇ ಮಾಜಿ ಸಚಿವ ಶಾಸಕ ಡಾ. ಎಂ ಸಿ ಸುಧಾಕರ್ ಹಾಗೂ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ ಪರಾಜಿತ ಕಾಂಗ್ರೇಸ್ ಅಭ್ಯರ್ಥಿ ರಾಜೀವ್ ಗೌಡ ಬೆಂಬಲಿಗರು ನಡುವೆ ಗಲಾಟೆಯಾಗಿ ಪರಸ್ಪರ ಕೈ ಕೈ ಮಿಲಾಯಿಸಿಕೊಳ್ಳೊ ಹಂತಕ್ಕೆ ಹೋಗಿದೆ.

ಚಿಕ್ಕಬಳ್ಳಾಪುರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿ ಆಯ್ಕೆ ಸಂಬಂಧ ಎಐಸಿಸಿ ವತಿಯಿಂದ ಸಂಘಟನೆ ಸೃಜನ್ ಅಭಿಯಾನದ ಮೂಲಕ ನೂತನ ಜಿಲ್ಲಾಧ್ಯಕ್ಷರ ನೇಮಕಾತಿಗೆ ಅಭಿಪ್ರಾಯ ಸಂಗ್ರಹ ಸಭೆಯನ್ನ ಚಿಕ್ಕಬಳ್ಳಾಪುರ ನಗರದ ಹರ್ಷೋದಯ ಕಲ್ಯಾಣ ಮಂಟಪದಲ್ಲಿ ಇಂದು ಸಂಜೆ ಯೋಜನೆ ಮಾಡಲಾಗಿದ್ದು, ಸಭೆಯಲ್ಲಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಿಂದ ರಾಜೀವ್ ಗೌಡ ಬದಲು ಕಳೆದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪುಟ್ಟ ಆಂಜಿನಪ್ಪನವರನ್ನು ಕರೆದು ವಿಕ್ಷಕರು ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ.

ಇದರಿಂದ ಕುಪಿತಗೊಂಡ ರಾಜೀವ್ ಗೌಡ ಬೆಂಬಲಿರು, ಮೊದಲು ರಾಜೀವ್ ಗೌಡನನ್ನು ಕರೆಯಬೇಕಿತ್ತು ಎಂದು ವೀಕ್ಷಕರ ವಿರುದ್ದ ಘೋಷಣೆ ಕೂಗಿದ್ದಾರೆ. ಇದೆ ಸಂದರ್ಭದಲ್ಲಿ ರಾಜೀವ್ ಗೌಡ ಜೋರು ಧ್ವನಿಯಲ್ಲಿ ಟೇಬಲ್ ಗುದ್ದಿದ್ದಾನೆ, ಇದ್ರಿಂದ ಹೊರ ಹೋಗಿದ್ದ ಮಾಜಿ ಸಚಿವ ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಎಂ ಸಿ ಸುಧಾಕರ್, ಮತ್ತೆ ವಾಪಾಸ್ ಬಂದು ಗಲಾಟೆ ಮಾಡದಂತೆ ತಾಕೀತು ಮಾಡಿದ್ದಾರೆ.
ಈ ವೇಳೆ ರಾಜೀವ್ ಗೌಡ ಬೆಂಬಲಿಗನೊರ್ವ, ಶಾಸಕ ಹಾಗೂ ಮಾಜಿ ಸಚಿವ ಡಾ.ಎಂ.ಸಿ. ಸುಧಾಕರ್ ವಿರುದ್ದ ಕೈ ಬೆರಳು ತೋರಿಸಿ ಅವಾಚ್ಯ ಪದ ಬಳಿಸಿದ್ದಾನೆ ಎನ್ನಲಾಗಿದೆ. ಇದ್ರಿಂದ ಕೆರಳಿದ ಎಂ.ಸಿ.ಸುಧಾಕರ್ ಬೆಂಬಲಿಗರು, ರಾಜೀವ್ ಗೌಡ ಬೆಂಬಲಿಗನ ಮೇಲೆ ಮುಗಿಬಿದ್ದು,ಧರ್ಮದೇಟು ನೀಡಿದ್ದಾರೆ.

Source link

Leave a Reply

Your email address will not be published. Required fields are marked *