
ಕೊಪ್ಪಳ, ಏಪ್ರಿಲ್ 11: ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಎರಡೆರಡು ಲವ್ ಜಿಹಾದ್ (Love Jihad) ಪ್ರಕರಣಗಳು ದೊಡ್ಡ ಸಂಚಲನ ಮೂಡಿಸಿದ್ದವು. ಇದೀಗ ಕೊಪ್ಪಳದಲ್ಲೂ ಲವ್ ಜಿಹಾದ್ ಪ್ರಕರಣ ಆರೋಪ ಕೇಳಿಬಂದಿದೆ. ಹಿಂದೂ ನರ್ಸಿಂಗ್ ವಿದ್ಯಾರ್ಥಿನಿಯನ್ನು ಅನ್ಯಕೋಮಿನ ಯುವಕ ಮುಸ್ತಫಾ ಪುಸಲಾಯಿಸಿದ್ದ. ವಿದ್ಯಾರ್ಥಿನಿ ಜೊತೆಗಿದ್ದ ವೇಳೆ ಹಿಂದೂ ಯುವಕರ ಕೈಗೆ ಸಿಕ್ಕಿಬಿದ್ದಿದ್ದ. ಇನ್ನು ಆತನ ಮೊಬೈಲ್ ಪರಿಶೀಲಿಸಿದ ವೇಳೆ ಹಿಂದೂ ಯುವತಿಯರ ಜೊತೆಗಿರುವ ಅಶ್ಲೀಲ ವಿಡಿಯೋಗಳು ಪತ್ತೆ ಆಗಿವೆ ಎನ್ನಲಾಗುತ್ತಿದೆ.
ಹಿಂದೂ ಯುವಕರ ಕೈಗೆ ಸಿಕ್ಕಿಬಿದ್ದಿದ್ದ ಮುಸ್ತಫಾ
ಕುಷ್ಟಗಿ ತಾಲೂಕಿನ ಗ್ರಾಮವೊಂದರ ಹಿಂದೂ ವಿದ್ಯಾರ್ಥಿನಿ ಕೊಪ್ಪಳದಲ್ಲಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದಳು. ಈ ವೇಳೆ ಆಕೆಯನ್ನ ಪುಸಲಾಯಿಸಿದ ಹಿನ್ನೆಲೆ ಕೊಪ್ಪಳ ತಾಲೂಕಿನ ಕಂಪ್ಲಿ ಗ್ರಾಮದ ಯುವಕ ಮುಸ್ತಫಾ ವಿರುದ್ಧ ಇದೀಗ ಲವ್ ಜಿಹಾದ್ ಆರೋಪ ಕೇಳಿಬಂದಿದೆ. ಗ್ರಾಮವೊಂದರಲ್ಲಿ ವಿದ್ಯಾರ್ಥಿನಿ ಜೊತೆಗೆ ಇದ್ದ ವೇಳೆ ಹಿಂದೂ ಯುವಕರ ಕೈಗೆ ಮುಸ್ತಫಾ ಸಿಕ್ಕಿಬಿದ್ದಿದ್ದ.
ಅಶ್ಲೀಲ ವಿಡಿಯೋಗಳು ಪತ್ತೆ
ಈ ವೇಳೆ ಮುಸ್ತಫಾ ಮೊಬೈಲ್ ಪರಿಶೀಲನೆ ಮಾಡಿದಾಗ ಹಲವು ಹಿಂದೂ ಯವತಿಯರ ಜೊತೆಗಿರುವ ಫೋಟೋಗಳು ಸೇರಿದಂತೆ 10ಕ್ಕೂ ಹೆಚ್ಚು ಯುವತಿಯರ ಅಶ್ಲೀಲ ವಿಡಿಯೋಗಳು ಪತ್ತೆ ಆಗಿವೆ. ಅಷ್ಟೇ ಅಲ್ಲದೆ ಯುವತಿಯರಿಗೆ ಬಿಯರ್ ಕುಡಿಸಿದ್ದಾನೆ. ಮಟ್ಕಾ ಬರೆಯುತ್ತಿರುವುದೂ ಪತ್ತೆ ಆಗಿದೆ. ಈ ವೇಳೆ ಕೂಡಲೇ ಮೊಬೈಲ್ ಕಸಿದುಕೊಂಡ ಮುಸ್ತಫಾ ರೀಸೆಟ್ ಮಾಡಿದ್ದಾನೆ.
ಇದನ್ನೂ ಓದಿ: ಹುಬ್ಬಳ್ಳಿ ಲವ್ ಜಿಹಾದ್ ಪ್ರಕರಣ: ಮತ್ತೆರಡು ಸ್ಫೋಟಕ ವಿಡಿಯೋ ಬಿಡುಗಡೆ! ಕಾಂಗ್ರೆಸ್ ಮುಖಂಡನ ಕೈವಾಡ ಇದೆ ಎಂದ ಯುವತಿ
ಇನ್ನು ನಾನು ಹಿಂದೂ ಯುವತಿಯನ್ನು ಮದುವೆ ಆಗಿರುವುದಾಗಿ ಮುಸ್ತಫಾ ಹೇಳುತ್ತಿದ್ದಾನೆ. ಆದರೆ ಇತ್ತ ಮುಸ್ತಫಾ ವಿರುದ್ಧ ಕ್ರಮಕೈಗೊಳ್ಳುವಂತೆ ಹಿಂದೂ ಯುವಕರು ಆಗ್ರಹಿಸಿದ್ದಾರೆ. ಕೊಪ್ಪಳ ನಗರ ಠಾಣೆ ಎದುರು ಹಿಂದೂ ಯುವಕರು ಜಮಾವಣೆಗೊಂಡಿದ್ದಾರೆ. ವಿಶ್ವ ಹಿಂದೂ ಪರಿಷತ್ನ ಜಿಲ್ಲಾಧ್ಯಕ್ಷ ಡಾ.ಸಂಗಮೇಶ್ ಹಿರೇಮಠ ಸೇರಿದಂತೆ ಹಿಂದೂ ಕಾರ್ಯಕರ್ತರಿಂದ ಮುಸ್ತಫಾ ವಿರುದ್ಧ ಎಸ್ಪಿಗೆ ದೂರು ಕೂಡ ನೀಡಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.