Headlines

ಕೊಳ್ಳೇಗಾಲದಲ್ಲಿ ಪ್ರಿಂಟಿಂಗ್ ಪ್ರೆಸ್‌ಗೆ ನುಗ್ಗಿದ ಬೃಹತ್ ಗಾತ್ರದ ಉಡ – Kannada News | Monitor Lizard in Kollegal Printing Press: Snake Babu Rescues Wild Reptile

ಕೊಳ್ಳೇಗಾಲ, ಜೂ.24: ಜಿಲ್ಲೆಯ ಕೊಳ್ಳೇಗಾಲ ಪಟ್ಟಣದಲ್ಲಿ ಕಾಡಿನಿಂದ ದಾರಿ ತಪ್ಪಿ ನಾಡಿಗೆ ಬಂದ ಅಪರೂಪದ ಅತಿಥಿಯೊಂದು ಪ್ರಿಂಟಿಂಗ್ ಪ್ರೆಸ್ ಒಳಗೆ ಪ್ರತ್ಯಕ್ಷವಾಗಿ ಕೆಲಕಾಲ ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದ ಘಟನೆ ನಡೆದಿದೆ. ಪಟ್ಟಣದ ಹಳೇ ನಗರಸಭೆ ರಸ್ತೆಯಲ್ಲಿರುವ ಬಾಬು (ರವಿಬಾಬು) ಎಂಬುವರ ಒಡೆತನದ ಪ್ರಿಂಟಿಂಗ್ ಪ್ರೆಸ್ ಅಂಗಡಿಗೆ ಬೃಹತ್ ಉಡವೊಂದು (Monitor Lizard) ನುಗ್ಗಿದ್ದು, ಯಾವುದೇ ತೊಂದರೆಯಾಗದಂತೆ ಅದನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಅಂಗಡಿ ಮಾಲೀಕರು ಮಧ್ಯಾಹ್ನ ಪ್ರಿಂಟಿಂಗ್ ಪ್ರೆಸ್‌ನ ಬಾಗಿಲು ಹಾಕಿಕೊಂಡು ಊಟಕ್ಕಾಗಿ ಮನೆಗೆ ತೆರಳಿದ್ದರು. ಬಳಿಕ ವಾಪಸ್ ಬಂದು ಅಂಗಡಿಯ ಬಾಗಿಲು ತೆರೆದಾಗ ಒಳಗೆ ಬೃಹತ್ ಗಾತ್ರದ ಉಡವೊಂದು ಓಡಾಡುತ್ತಿರುವುದು ಕಂಡುಬಂದಿದೆ. ಇದರಿಂದ ಗಾಬರಿಗೊಂಡ ಮಾಲೀಕರು ತಕ್ಷಣವೇ ಜಾಣ್ಮೆ ಪ್ರದರ್ಶಿಸಿ ಮತ್ತೆ ಅಂಗಡಿಯ ಬಾಗಿಲನ್ನು ಮುಚ್ಚಿ, ಸ್ಥಳೀಯ ಉರಗ ರಕ್ಷಕ ಹಾಗೂ ವನ್ಯಜೀವಿ ಪ್ರೇಮಿ ‘ಸ್ನೇಕ್ ಬಾಬು’ ಅವರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸ್ನೇಕ್ ಬಾಬು, ಅಂಗಡಿಯ ಒಳಗಡೆ ಅಡಗಿಕುಳಿತಿದ್ದ ಉಡವನ್ನು ಹಿಡಿಯಲು ಸತತ ಪ್ರಯತ್ನ ನಡೆಸಿದರು. ಪ್ರಿಂಟಿಂಗ್ ಯಂತ್ರಗಳ ನಡುವೆ ಸಿಲುಕಿದ್ದ ಉಡಕ್ಕೆ ಯಾವುದೇ ರೀತಿಯ ಗಾಯ ಅಥವಾ ತೊಂದರೆಯಾಗದಂತೆ ಅತ್ಯಂತ ಜಾಗರೂಕತೆಯಿಂದ ಹಿಡಿದು ಗೋಣಿಚೀಲದಲ್ಲಿ ಸಂರಕ್ಷಿಸುವಲ್ಲಿ ಯಶಸ್ವಿಯಾದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *