ಕೋರ್ಟ್​ ಉದ್ಯೋಗ ಕೊಡಿಸುವುದಾಗಿ 25 ಲಕ್ಷ ರೂ. ಪಡೆದು ವಂಚಿಸಿದ ಖತರ್ನಾಕ್ ದಂಪತಿ ಅಂದರ್!

ಕೋರ್ಟ್​ ಉದ್ಯೋಗ ಕೊಡಿಸುವುದಾಗಿ 25 ಲಕ್ಷ ರೂ. ಪಡೆದು ವಂಚಿಸಿದ ಖತರ್ನಾಕ್ ದಂಪತಿ ಅಂದರ್!

ಬೆಂಗಳೂರು, ಮಾರ್ಚ್​ 23: ಕೋರ್ಟ್‌ಗಳಲ್ಲಿ ಸರ್ಕಾರಿ ಉದ್ಯೋಗ (Government Job) ಕೊಡಿಸುವುದಾಗಿ ಭರವಸೆ ನೀಡಿ ನೂರಾರು ಜನರನ್ನು ವಂಚಿಸಿದ್ದ ಖತರ್ನಾಕ್ ದಂಪತಿಯನ್ನು  ಸೆಂಟ್ರಲ್ ಕ್ರೈಂ ಬ್ರಾಂಚ್ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಜೇಸನ್ ಡಿಸೋಜಾ ಮತ್ತು ಲವೀನಾ ದಂಪತಿ ಸುಮಾರು 25 ಕೋಟಿ ರೂ.ಗೂ ಹೆಚ್ಚು ಹಣ ವಂಚನೆ ಮಾಡಿದ್ದು, ಸದ್ಯ ಸಿಸಿಬಿ ಪೊಲೀಸರು ಅವರನ್ನು ವಿಚಾರಣೆಗೊಳಪಡಿಸಿದ್ದಾರೆ.

ನಿರುದ್ಯೋಗಿಗಳೇ ಟಾರ್ಗೆಟ್!

ನಿರುದ್ಯೋಗಿಗಳು ಹಾಗೂ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರನ್ನು ಗುರಿಯಾಗಿಸಿಕೊಂಡು ಆರೋಪಿಗಳು ದೊಡ್ಡ ಮಟ್ಟದ ಮೋಸದ ಜಾಲವನ್ನು ನಿರ್ಮಿಸಿದ್ದ ದಂಪತಿ, ಕೋರ್ಟ್‌ಗಳಲ್ಲಿ ಡಿ-ಗ್ರೂಪ್ ಉದ್ಯೋಗ ಕೊಡಿಸುವುದಾಗಿ ಹೇಳಿ ಒಬ್ಬೊಬ್ಬರಿಂದ 10ರಿಂದ 25 ಲಕ್ಷ ರೂಪಾಯಿಯವರೆಗೆ ಹಣ ವಸೂಲಿ ಮಾಡುತ್ತಿದ್ದರು ಎಂದು ಪೊಲೀಸರು ಹೆಳಿದ್ದಾರೆ.

ಏಜೆಂಟ್​ಗಳ ಮೂಲಕ ಕಾರ್ಯ

ನಂಬಿಕೆ ಮೂಡಿಸಲು ನ್ಯಾಯಾಧೀಶರ ಸಹಿಯನ್ನು ನಕಲಿ ಮಾಡಿ ನೇಮಕಾತಿ ಆದೇಶ ಪತ್ರಗಳನ್ನು ನೀಡುತ್ತಿದ್ದರು. ನಂತರ ಉದ್ಯೋಗದ ಬಗ್ಗೆ ವಿಚಾರಿಸಿದಾಗ ನಾಳೆ, ನಾಡಿದ್ದು ಎಂದು ಕಾಲಹರಣ ಮಾಡಿ, ಕೊನೆಗೆ ಕರೆಗಳಿಗೆ ಸ್ಪಂದಿಸದೇ ತಪ್ಪಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ.

ಏಜೆಂಟ್‌ಗಳ ಮೂಲಕ ಜನರನ್ನು ಬಲೆಗೆ ಬೀಳಿಸುತ್ತಿದ್ದ ಆರೋಪಿಗಳು ಕೆಲವರನ್ನು ಖಾಸಗಿ ಹೋಟೆಲ್‌ಗಳಿಗೆ ಕರೆಸಿ ದಾಖಲೆ ಪರಿಶೀಲನೆ ಹೆಸರಿನಲ್ಲಿ ನಕಲಿ ಆಫರ್ ಲೆಟರ್ ತೋರಿಸಿ ಮೋಸ ಮಾಡಿದ್ದಾರೆ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಈ ಕುರಿತು ಸಂತ್ರಸ್ತರು ದೂರು ನೀಡಿದ ಹಿನ್ನೆಲೆ ಪ್ರಕರಣ ಬೆಳಕಿಗೆ ಬಂದಿದೆ.

ಇದನ್ನೂ ಓದಿ ನಗರದಲ್ಲಿ ಹೆಚ್ಚಿದ ಡಿಜಿಟಲ್ ಅರೆಸ್ಟ್ ಸ್ಕ್ಯಾಮ್; ನಿವೃತ್ತ ಸಂಶೋಧಕನಿಗೆ 5 ಕೋಟಿ ರೂ. ವಂಚನೆ!

ಎರಡು ವರ್ಷಗಳ ಹಿಂದೆಯೇ ಜೈಲಿಗೆ ಹೋಗಿದ್ದ ದಂಪತಿ

ಆರೋಪಿಗಳು ಈ ಹಿಂದೆಯೂ 2024ರಲ್ಲಿ ಇದೇ ರೀತಿಯ ಪ್ರಕರಣದಲ್ಲಿ ಬಂಧಿತರಾಗಿ, ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ಮತ್ತೆ ವಂಚನೆ ಮುಂದುವರಿಸಿದ್ದರು. ಸದ್ಯ ಪೊಲೀಸರು ಆರೋಪಿಗಳನ್ನು ವಿಚಾರಣೆಗೊಳಪಡಿಸಿದ್ದು, ಇನ್ನಷ್ಟು ಬಲಿಗಳ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *