Headlines

ಕ್ಯಾಂಪಸ್ ಇಂಟರ್ವ್ಯೂಗೂ ಮುನ್ನವೇ ಒಲಿದ ಅದೃಷ್ಟ; ಭಾರತದ 21 ವರ್ಷದ ವಿದ್ಯಾರ್ಥಿಗೆ ನೆದರ್‌ಲ್ಯಾಂಡ್ಸ್ ಕಂಪನಿಯಿಂದ 2.5 ಕೋಟಿ ರೂ. ಜಾಬ್ ಆಫರ್! – Kannada News | IIT Hyderabad Student Edward Verghese Bags Record 2.5 Cr Package from Optiver Amidst IT Woes

ಪ್ರಸ್ತುತ ಜಾಗತಿಕ ಮಾಹಿತಿ ತಂತ್ರಜ್ಞಾನ (IT) ವಲಯದಲ್ಲಿ ಉದ್ಯೋಗ ಕಡಿತ ಮತ್ತು ಆರ್ಥಿಕ ಕುಸಿತದ ಆತಂಕಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ, ಐಐಟಿ ಹೈದರಾಬಾದ್‌ನ ವಿದ್ಯಾರ್ಥಿಯೊಬ್ಬ ಐತಿಹಾಸಿಕ ಸಾಧನೆ ಮಾಡಿದ್ದಾನೆ. ಕೇವಲ 21 ವರ್ಷದ ಈ ವಿದ್ಯಾರ್ಥಿ ವಾರ್ಷಿಕ 2.5 ಕೋಟಿ ರೂಪಾಯಿ ವೇತನದ ಉದ್ಯೋಗವನ್ನು ಪಡೆಯುವ ಮೂಲಕ ಹೊಸ ದಾಖಲೆ ಬರೆದಿದ್ದಾನೆ. 2008 ರಲ್ಲಿ ಈ ಪ್ರತಿಷ್ಠಿತ ಸಂಸ್ಥೆ ಸ್ಥಾಪನೆಯಾದಾಗಿನಿಂದ ಇಷ್ಟು ದೊಡ್ಡ ಮೊತ್ತದ ಪ್ಯಾಕೇಜ್ ದಾಖಲಾಗಿರುವುದು ಇದೇ ಮೊದಲು.

ಯಾರು ಈ ಪ್ರತಿಭಾವಂತ ವಿದ್ಯಾರ್ಥಿ?

ಐಐಟಿ ಹೈದರಾಬಾದ್‌ನಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್‌ನ ಅಂತಿಮ ವರ್ಷದಲ್ಲಿ ಓದುತ್ತಿರುವ ಎಡ್ವರ್ಡ್ ನಾಥನ್ ವರ್ಗೀಸ್ ಈ ಅಪರೂಪದ ಮೈಲಿಗಲ್ಲು ಸ್ಥಾಪಿಸಿದ ಸಾಧಕ. ಹೈದರಾಬಾದ್‌ನಲ್ಲಿ ಜನಿಸಿದ ಎಡ್ವರ್ಡ್, ನಂತರ ತನ್ನ 7 ರಿಂದ 12 ನೇ ತರಗತಿಯವರೆಗಿನ ಶಿಕ್ಷಣವನ್ನು ಬೆಂಗಳೂರಿನಲ್ಲಿ ಪೂರ್ಣಗೊಳಿಸಿದ್ದ. ಪೋಷಕರಿಬ್ಬರೂ ಎಂಜಿನಿಯರ್‌ಗಳಾಗಿದ್ದರಿಂದ ಚಿಕ್ಕ ವಯಸ್ಸಿನಿಂದಲೇ ತಂತ್ರಜ್ಞಾನದ ಕಡೆಗೆ ಆಕರ್ಷಿತರಾಗಿದ್ದ ಈತ, ಕಠಿಣ ಪರಿಶ್ರಮದಿಂದ ಐಐಟಿ ಹೈದರಾಬಾದ್‌ನಲ್ಲಿ ಸೀಟು ಗಿಟ್ಟಿಸಿಕೊಂಡಿದ್ದ. ತನ್ನ ಶೈಕ್ಷಣಿಕ ಅಧ್ಯಯನದ ಜೊತೆಗೆ, ಜಾಗತಿಕ ಮಟ್ಟದ ಸ್ಪರ್ಧಾತ್ಮಕ ಪ್ರೋಗ್ರಾಮಿಂಗ್ (Competitive Programming) ಸ್ಪರ್ಧೆಗಳಲ್ಲೂ ಈತ ಸದಾ ಮುಂಚೂಣಿಯಲ್ಲಿದ್ದನು.

ಇದನ್ನೂ ಓದಿ: ಲಿಖಿತ ಪರೀಕ್ಷೆಯಿಲ್ಲದೆ ಸಿಗಲಿದೆ ತಿಂಗಳಿಗೆ 2.25 ಲಕ್ಷ ರೂ. ಸಂಬಳದ ಉದ್ಯೋಗ! ಅರ್ಜಿ ಸಲ್ಲಿಸುವುದು ಹೇಗೆ?

ಇಂಟರ್ನ್‌ಶಿಪ್ ಅವಧಿಯಲ್ಲೇ ಒಲಿದ ಕೋಟಿ ಆಫರ್:

ನೆದರ್‌ಲ್ಯಾಂಡ್ಸ್ ಮೂಲದ ಪ್ರಮುಖ ಜಾಗತಿಕ ಪರಿಮಾಣಾತ್ಮಕ ವ್ಯಾಪಾರ (Quantitative Trading) ಸಂಸ್ಥೆಯಾದ ‘ಆಪ್ಟಿವರ್’ (Optiver) ಈ ಬೃಹತ್ ಆಫರ್ ನೀಡಿದೆ. ಎಡ್ವರ್ಡ್ ಈ ಕಂಪನಿಯಲ್ಲಿ ಎರಡು ತಿಂಗಳ ಕಾಲ ಸಮ್ಮರ್ ಇಂಟರ್ನ್‌ಶಿಪ್ ಮಾಡಿದ್ದನು. ಈ ಅವಧಿಯಲ್ಲಿ ಎರಡು ವಾರಗಳ ಕಠಿಣ ತರಬೇತಿ ಹಾಗೂ ಆರು ವಾರಗಳ ಪ್ರಾಜೆಕ್ಟ್ ಕೆಲಸದಲ್ಲಿ ಎಡ್ವರ್ಡ್ ತೋರಿದ ಅಸಾಮಾನ್ಯ ಪ್ರತಿಭೆಗೆ ಪ್ರಭಾವಿತರಾದ ಕಂಪನಿಯ ಆಡಳಿತ ಮಂಡಳಿಯು, ಕ್ಯಾಂಪಸ್ ಸಂದರ್ಶನಗಳು ಆರಂಭವಾಗುವ ಮುನ್ನವೇ ಆತನಿಗೆ ‘ಪೂರ್ವ-ನಿಯೋಜನೆ ಕೊಡುಗೆ’ (Pre-Placement Offer) ರೂಪದಲ್ಲಿ ಈ ಆಫರ್ ನೀಡಿದೆ. ವಿಶೇಷವೆಂದರೆ, ಈ ಉದ್ಯೋಗದ ಋತುವಿನಲ್ಲಿ ಎಡ್ವರ್ಡ್ ಸಂದರ್ಶನ ಎದುರಿಸಿದ ಮೊದಲ ಮತ್ತು ಏಕೈಕ ಕಂಪನಿ ಇದಾಗಿದೆ. ತಮ್ಮ ಪದವಿ ಮುಗಿಯುತ್ತಿದ್ದಂತೆ, ಈ ವರ್ಷದ ಜುಲೈನಿಂದ ಆತ ನೆದರ್‌ಲ್ಯಾಂಡ್ಸ್ ಕಚೇರಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕಾರ್ಯಾರಂಭ ಮಾಡಲಿದ್ದಾನೆ.

ಐಐಟಿ ಹೈದರಾಬಾದ್ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ:

ಐಐಟಿ ಹೈದರಾಬಾದ್‌ನ 17 ವರ್ಷಗಳ ಇತಿಹಾಸದಲ್ಲಿ ಈವರೆಗೆ ಯಾರಿಗೂ ವಾರ್ಷಿಕ 2.5 ಕೋಟಿ ರೂ.ಗಳ ಪ್ಯಾಕೇಜ್ ಸಿಕ್ಕಿರಲಿಲ್ಲ. ಇದಕ್ಕೂ ಮುನ್ನ ಸಂಸ್ಥೆಯ ಗರಿಷ್ಠ ಪ್ಯಾಕೇಜ್ ದಾಖಲೆ 1.1 ಕೋಟಿ ರೂಪಾಯಿಗಳಾಗಿತ್ತು. ಎಡ್ವರ್ಡ್ ಈ ಜಾಗತಿಕ ಯಶಸ್ಸಿನಿಂದಾಗಿ, ಐಐಟಿ ಹೈದರಾಬಾದ್‌ನ ಒಟ್ಟಾರೆ ಕ್ಯಾಂಪಸ್ ಸೆಲೆಕ್ಷನ್‌ನ ಸರಾಸರಿ (Average) ಪ್ಯಾಕೇಜ್ ಕಳೆದ ವರ್ಷದ 20.8 ಲಕ್ಷ ರೂ.ಗಳಿಂದ ಈ ಬಾರಿ ಬರೋಬ್ಬರಿ 36.2 ಲಕ್ಷ ರೂ.ಗಳಿಗೆ ಏರಿಕೆಯಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *