ಮುಖ್ಯಾಂಶಗಳು
- ‘ಪಿನಾಕ’ ಸಿನಿಮಾದ ಟೀಸರ್ ಬಿಡುಗಡೆ ಮಾಡಿ ಮಾತನಾಡಿದ ಗಣೇಶ್.
- ‘ಗೋಲ್ಡನ್ ಸ್ಟಾರ್’ ವೃತ್ತಿಜೀವನದಲ್ಲಿ ಡಿಫರೆಂಟ್ ಆಗಿರಲಿದೆ ಈ ಚಿತ್ರ.
- ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಮೂಲಕ ನಿರ್ಮಾಣ ಆಗಿರುವ ಸಿನಿಮಾ.
‘ಗೋಲ್ಡನ್ ಸ್ಟಾರ್’ ಗಣೇಶ್ ನಟನೆಯ ‘ಪಿನಾಕ’ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಚಿತ್ರದ ಥೀಮ್ಗೆ ಅನುಗುಣವಾಗಿ ಗಣೇಶ್ ಅವರು ಖಡ್ಗ ಎತ್ತಿ ಹಿಡಿಯುವ ಮೂಲಕ ಟೀಸರ್ ಅನಾವರಣ ಮಾಡಿದರು. ಈ ವೇಳೆ ರಂಗಾಯಣ ರಘು, ಸಾಧು ಕೋಕಿಲ, ನಿರ್ದೇಶಕ ಧನಂಜಯ್ ಮುಂತಾದವರು ಹಾಜರಿದ್ದರು.
