Headlines

ಖರ್ಗೆ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್​ ಕೋಲಾರಕ್ಕೆ ದೊಡ್ಡ ಮೋಸ ಮಾಡಿದ್ದಾರೆ: ಶಾಸಕ ನಾರಾಯಣಸ್ವಾಮಿ ಆಕ್ರೋಶ – Kannada News | Kharge, Siddaramaiah and D.K. Shivakumar Have Cheated Kolar: MLA K Narayanaswamy Alleges

ಕೋಲಾರ, ಆಗಸ್ಟ್​​ 03: ‘ಜಿಲ್ಲೆಗೆ ಸಚಿವ ಸ್ಥಾನ ಸಿಗುತ್ತೆಂಬ ನಂಬಿಕೆ ಇತ್ತು. ಆದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಸಿಎಂ ಡಿಕೆ ಶಿವಕುಮಾರ್​ ಅವರು ಕೋಲಾರಕ್ಕೆ ದೊಡ್ಡ ಮೋಸ ಮಾಡಿದ್ದಾರೆ’ ಎಂದು ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಪ್ರತಿ ಬಾರಿ ಎಡಗೈ ಸಮುದಾಯದ ಮುನಿಯಪ್ಪ ಗೆಲ್ಲಬೇಕು, ಮುನಿಯಪ್ಪರ ಮಗಳು KGF ಶಾಸಕಿ ರೂಪಾ ಗೆಲ್ಲಬೇಕು. ಇಲ್ಲಿ ಬಲಗೈ ಸಮುದಾಯದ ಸಹಾಯ ಪಡೆದು ಗೆಲುತ್ತಾರೆ. ಎಡಗೈ-ಬಲಗೈ ಸಮುದಾಯ ಅಂತ ಹುಟ್ಟು ಹಾಕಿದ್ದಾರೆ ಎಂದು ಕೆ.ಹೆಚ್.ಮುನಿಯಪ್ಪ ವಿರುದ್ಧ ಗರಂ ಆದರು. ‘ಇದರ ಪ್ರತಿಫಲವನ್ನು ಅವರೇ ಮುಂದೆ ಅನುಭವಿಸುತ್ತಾರೆ. ಕಾಣದ ಕೈಗಳು ನನಗೆ ಸಚಿವ ಸ್ಥಾನವನ್ನ ತಪ್ಪಿಸಿದ್ದಾರೆ. ನಾಳೆ ನಾವು ಸಭೆ ನಡೆಸಿ ಒಂದು ನಿರ್ಧಾರಕ್ಕೆ ಬರುತ್ತೇವೆ. ಒಮ್ಮತ ಮೂಡಿದರೆ ರಾಜೀನಾಮೆ ನೀಡಲು ನಾವು ಸಿದ್ಧ. ರಾಜೀನಾಮೆ ನೀಡಿ ಹೈಕಮಾಂಡ್​ಗೆ ಸಂದೇಶ ರವಾನಿಸುತ್ತೇವೆ’ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *