Headlines

ಗಂಡನನ್ನ ತೊರೆದು ಬಂದ ಪ್ರೇಯಿಸಿಗೆ ಚಾಕುವಿನಿಂದ ಇರಿದ ಪ್ರಿಯಕರ: ಮಕ್ಕಳು ಅನಾಥ – Kannada News | Boy Friend Kills lover Who Came after quit Husband at Chikkaballapur

ಚಿಕ್ಕಬಳ್ಳಾಪುರ, (ಫೆಬ್ರವರಿ 27): ಮಹಿಳೆಯೋರ್ವಳು (Woman)  ಗಂಡನನ್ನು ತೊರೆದು ಪ್ರಿಯಕರನ (Lover) ಜೊತೆ ಹೋಗಿ ನೆಲೆಸಿದ್ದ ಮಹಿಳೆ ಹತ್ಯೆಯಾಗಿದ್ದಾಳೆ. ಹೌದು…ಪತಿಯನ್ನ ಬಿಟ್ಟು ಬಂದಿದ್ದ ಮಹಿಳೆಗೆ ಪ್ರಿಯಕರ ಚಾಕುವಿನಿಂದ ಇರಿದಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಸಾವನ್ನಪ್ಪಿದ್ದಾಳೆ. ಈ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದ್ದು, ತೇಜಸ್ವಿನಿ(32) ಕೊಲೆಯಾದ ಮಹಿಳೆ.ತೇಜಸ್ವಿನಿ ಗಂಡನಿಂದ ದೂರವಾಗಿ ತನ್ನ ಎರಡು ಮಕ್ಕಳೊಂದಿಗೆ ಪ್ರತ್ಯೇಕ ವಾಸವಾಗಿದ್ದಳು. ಆದ್ರೆ, ಒಂದು ತಿಂಗಳ ಹಿಂದಷ್ಟೇ ಪ್ರಿಯಕರ ಸಂದೀಪ್ ಜೊತೆ ನೆಲೆಸಿದ್ದಳು. ಆದ್ರೆ, ಇಬ್ಬರ ನಡುವೆ ಅದೇನಾಯ್ತೋ ಏನೋ ಸಂದೀಪ್, 3 ದಿನದ ಹಿಂದೆ ತೇಜಸ್ವಿನಿಗೆ ಚಾಕುವಿನಿಂದ ಇರಿದಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಯಶಸ್ವಿನಿ ಇಂದು (ಫೆಬ್ರವರಿ 27) ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.

ತೇಜಸ್ವಿನಿ ಗಂಡನನ್ನ ಬಿಟ್ಟು ಇಬ್ಬರು ಮಕ್ಕಳೊಂದಿಗೆ ಪ್ರತ್ಯೇಕವಾಸವಾಗಿದ್ದು, ಹೋಟೆಲ್ ವೊಂದರಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಳು. ಆದ್ರೆ, ಒಂದು ತಿಂಗಳ ಹಿಂದೆ ಅಷ್ಟೇ ತೇಜಸ್ವಿನಿ, ಸಂದೀಪ್ ಎಂಬುವವನ ಜೊತೆ ಹೋಗಿದ್ದು, ಅವನೊಂದಿಗೆ ವಾಸವಿದ್ದಳು. ಆದ್ರೆ, ಇಬ್ಬರ ನಡುವೆ ಏನಾಯ್ತೋ ಏನೋ ಕಳೆದ ಮೂರು ದಿನಗಳ ಹಿಂದೆ ಸುದೀಪ್, ಚಾಕುವಿನಿಂದ ತೇಜಸ್ವಿನಿ ಹೊಟ್ಟೆಗೆ ಇರಿದಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ತೇಜಸ್ವಿನಿಯನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.

ಇದನ್ನೂ ಓದಿ: ಸ್ಮಶಾನ ಸೇರಬೇಕಿದ್ದ ಶವ ಆಸ್ಪತ್ರೆಯ ಶವಗಾರಕ್ಕೆ: 17 ವರ್ಷದ ಬಾಲಕಿ ಸಾವಿನ ಸುತ್ತ ಅನುಮಾನದ ಹುತ್ತ

ಕಳೆದ ಮೂರು ದಿನಗಳಿಂದ ಆಸ್ಪತ್ರೆಯಲ್ಲೇ ಜೀವನ್ಮರಣ ಮಧ್ಯೆ ಹೋರಾಟ ನಡೆಸುತ್ತಿದ್ದ ತೇಜಸ್ವಿನಿ ಇಂದು (ಫೆಬ್ರವರಿ 27) ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾಳೆ. ಹೀಗಾಗಿ ಅತ್ತ ತಂದೆ-ಈಗ ತಾಯಿಯನ್ನು ಕಳೆದುಕೊಂಡ ಎರಡು ಮಕ್ಕಳು ಅನಾಥವಾಗಿವೆ,

ಇನ್ನು ಈ ಪ್ರಕರಣ ಸಂಬಂಧ ಚಿಕ್ಕಬಳ್ಳಾಪುರ ನಗರ ಪೊಲೀಸರು, ಪ್ರಿಯಕರ ಸಂದೀಪ್ ಹಾಗೂ ತೇಜಸ್ವಿನಿ ಸ್ನೇಹಿತೆ ಅರುಣಾಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದು, ಪ್ರಿಯಕರ ಸಂದೀಪ್ ಏಕೆ ಚಾಕುವಿನಿಂದ ಇರಿದಿದ್ದ ಎನ್ನುವುದು ತನಿಖೆಯಲ್ಲಿ ಬೆಳಕಿಗೆ ಬರಬೇಕಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *