Headlines

ಗಟ್ ಹೆಲ್ತ್ ಸುಧಾರಿಸಲು ಆಹಾರದಲ್ಲಿ ಮಾಡಬೇಕಾದ ಬದಲಾವಣೆಗಳು! – Kannada News | Healthy Gut Diet: Essential Foods for a Strong Digestive System

ಕರುಳಿನ ಆರೋಗ್ಯ ಕಾಪಾಡಲು ಸಿಂಪಲ್ ಸಲಹೆಗಳುImage Credit source: Getty Images

ಇತ್ತೀಚಿನ ದಿನಗಳಲ್ಲಿ ಅಜೀರ್ಣ, ಗ್ಯಾಸ್, ಹೊಟ್ಟೆ ಉಬ್ಬರ, ಮಲಬದ್ಧತೆ ಮತ್ತು ಆಸಿಡಿಟಿ ಸಮಸ್ಯೆಗಳು ಹೆಚ್ಚಾಗುತ್ತಿವೆ. ಇವುಗಳನ್ನು ಸಾಮಾನ್ಯವೆಂದು ನಿರ್ಲಕ್ಷಿಸುವ ಬದಲು ಕರುಳಿನ ಆರೋಗ್ಯ (Gut Health) ಅಂದರೆ ಗಟ್ ಹೆಲ್ತ್ ಹದಗೆಟ್ಟಿರುವ ಸೂಚನೆಗಳೆಂದು ಪರಿಗಣಿಸಬೇಕು. ಉತ್ತಮ ಕರುಳಿನ ಆರೋಗ್ಯವು ಜೀರ್ಣಕ್ರಿಯೆಗೆ ಮಾತ್ರವಲ್ಲ, ರೋಗನಿರೋಧಕ ಶಕ್ತಿ ಮತ್ತು ದೇಹದ ಒಟ್ಟಾರೆ ಆರೋಗ್ಯಕ್ಕೂ ಮುಖ್ಯವಾಗಿದೆ. ಹಾಗಾದರೆ ನಮ್ಮ ಕರುಳಿನ ಆರೋಗ್ಯ ಕಾಪಾಡಿಕೊಳ್ಳಲು ಯಾವ ರೀತಿ ಆಹಾರ ಸೇವನೆ ಮಾಡಬೇಕು ಮತ್ತು ಯಾವುದನ್ನು ಮಿತಿಯಲ್ಲಿಟ್ಟುಕೊಳ್ಳಬೇಕು, ಜೊತೆಗೆ ದಿನನಿತ್ಯದ ಅಭ್ಯಾಸದಲ್ಲಿ ಯಾವುದನ್ನು ಬಲಿಸಬೇಕು ಎಂಬುದನ್ನು ತಿಳಿದುಕೊಳ್ಳಿ. ಈ ಬಗ್ಗೆ ಸಂಪೂರ್ಣ ಮಾಹಿತಿ ಸ್ಟೋರಿಯಲ್ಲಿದೆ.

ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ

ಸೇಬು, ಬಾಳೆಹಣ್ಣು, ಕಿತ್ತಳೆ, ಕ್ಯಾರೆಟ್, ಪಾಲಕ್, ಬ್ರೋಕೋಲಿ ಹಾಗೂ ಸಿಹಿಗೆಣಸು ಮುಂತಾದ ಹಣ್ಣು- ತರಕಾರಿಗಳಲ್ಲಿ ಫೈಬರ್ ಮತ್ತು ಅಗತ್ಯ ಪೋಷಕಾಂಶಗಳು ಸಮೃದ್ಧವಾಗಿರುತ್ತವೆ. ಇವು ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಸಹಕಾರಿಯಾಗುತ್ತವೆ.

ಫೈಬರ್‌ಯುಕ್ತ ಆಹಾರಕ್ಕೆ ಆದ್ಯತೆ ನೀಡಿ

ಓಟ್ಸ್, ಕಡಲೆ, ಹುರಳಿ, ಮಸೂರ ಬೇಳೆ, ಅಗಸೆ ಬೀಜ, ಚಿಯಾ ಬೀಜ ಹಾಗೂ ಒಣಹಣ್ಣುಗಳು ಫೈಬರ್‌ನ ಉತ್ತಮ ಮೂಲಗಳಾಗಿವೆ. ಇವು ಮಲಬದ್ಧತೆಯನ್ನು ಕಡಿಮೆ ಮಾಡಿ ಜೀರ್ಣಕ್ರಿಯೆಯನ್ನು ಸುಧಾರಿಸಲು ನೆರವಾಗುತ್ತವೆ.

ಇದನ್ನೂ ಓದಿ: ಪ್ರೋಟೀನ್ ಹೆಚ್ಚು ತಿಂದ್ರೆ ಕಿಡ್ನಿ ಹಾಳಾಗುತ್ತದೆಯೇ? ಈ ಕುರಿತು ವೈದ್ಯರ ಅಭಿಪ್ರಾಯವೇನು?

ಸಂಪೂರ್ಣ ಧಾನ್ಯಗಳನ್ನು ಆಯ್ಕೆಮಾಡಿ

ಮೈದಾ ಮತ್ತು ಸಂಸ್ಕರಿತ ಧಾನ್ಯಗಳ ಬದಲು ಕಂದು ಅಕ್ಕಿ, ಜೋಳ, ಸಜ್ಜೆ, ಬಾರ್ಲಿ ಮತ್ತು ಸಂಪೂರ್ಣ ಗೋಧಿಯನ್ನು ಆಹಾರದಲ್ಲಿ ಸೇರಿಸಿಕೊಳ್ಳಿ. ಇವು ಹೊಟ್ಟೆ ತುಂಬಿದ ಭಾವನೆಯನ್ನು ನೀಡುವುದರ ಜೊತೆಗೆ ಕರುಳಿನ ಆರೋಗ್ಯಕ್ಕೂ ಲಾಭಕರ.

ಪ್ರೊಬಯೋಟಿಕ್ ಮತ್ತು ಪ್ರೀಬಯೋಟಿಕ್ ಆಹಾರ ಸೇವಿಸಿ

ಮೊಸರು, ಇತರ ಹುದುಗಿಸಿದ ಆಹಾರಗಳು ಪ್ರೊಬಯೋಟಿಕ್‌ಗಳ ಉತ್ತಮ ಮೂಲ. ಬೆಳ್ಳುಳ್ಳಿ, ಈರುಳ್ಳಿ, ಬಾಳೆಹಣ್ಣು, ಓಟ್ಸ್ ಮುಂತಾದವು ಪ್ರೀಬಯೋಟಿಕ್ ಆಹಾರಗಳಾಗಿದ್ದು, ಕರುಳಿನ ಉತ್ತಮ ಬ್ಯಾಕ್ಟೀರಿಯಾಗಳನ್ನು ಪೋಷಿಸುತ್ತವೆ.

ಇವುಗಳನ್ನು ಮಿತವಾಗಿ ಸೇವಿಸಿ

ಜಂಕ್ ಫುಡ್, ಕರಿದ ಆಹಾರ, ಹೆಚ್ಚು ಸಕ್ಕರೆ ಇರುವ ಪದಾರ್ಥಗಳು, ಸಿಹಿ ಪಾನೀಯಗಳು ಹಾಗೂ ಅತಿಯಾಗಿ ಪ್ರೊಸೆಸ್ಡ್ ಆಹಾರಗಳು ಕರುಳಿನ ಆರೋಗ್ಯಕ್ಕೆ ಹಾನಿಕಾರಕ. ವೈದ್ಯರ ಸಲಹೆಯಿಲ್ಲದೆ ಆಂಟಿಬಯೋಟಿಕ್ ಔಷಧಿಗಳನ್ನು ಸೇವಿಸುವುದನ್ನು ತಪ್ಪಿಸಿ.

ಕರುಳಿನ ಆರೋಗ್ಯಕ್ಕಾಗಿ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ

ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಿ, ಚೆನ್ನಾಗಿ ಜಗಿದು ತಿನ್ನಿ, ಸಾಕಷ್ಟು ನೀರು ಕುಡಿಯಿರಿ. ನಿಯಮಿತ ವ್ಯಾಯಾಮ, ಉತ್ತಮ ನಿದ್ರೆ ಮತ್ತು ಒತ್ತಡ ನಿಯಂತ್ರಣವೂ ಕರುಳಿನ ಆರೋಗ್ಯವನ್ನು ಕಾಪಾಡಲು ಸಹಕಾರಿ. ಆರೋಗ್ಯಕರ ಆಹಾರ ಪದ್ಧತಿಯನ್ನು ಅನುಸರಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸಿ ದೀರ್ಘಕಾಲ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *