ತೆಲುಗು ಸಿನಿಮಾಗಳಲ್ಲಿ (Tollywood) ಡ್ಯಾನ್ಸ್ಗೆ ಬಹಳ ಪ್ರಧಾನ್ಯತೆ, ಇತರೆ ಸಿನಿಮಾ ರಂಗಗಳಿಗೆ ಹೋಲಿಸಿದರೆ ತೆಲುಗು ಸಿನಿಮಾಗಳಲ್ಲಿ ಡ್ಯಾನ್ಸ್ ಹೆಚ್ಚು ಗುಣಮಟ್ಟದಿಂದಲೂ ಕೂಡಿರುತ್ತದೆ. ‘ಆರ್ಆರ್ಆರ್’ ಸಿನಿಮಾದ ಡ್ಯಾನ್ಸು ಆಸ್ಕರ್ ವೇದಿಕೆಯಲ್ಲೂ ಮಿಂಚಿದ್ದು ನೆನಪಿರಬಹುದು. ಆದರೆ ಇದೀಗ ತೆಲುಗು ಚಿತ್ರರಂಗದ ಡ್ಯಾನ್ಸರ್ಗಳು ಸಮಸ್ಯೆಗೆ ಸಿಲುಕಿದ್ದಾರೆ. ಇದಾಗಲೇ ಡ್ಯಾನ್ಸ್ ಅಸೋಷಿಯೇಷನ್ ಒಡೆದು ಎರಡು ಭಾಗವಾಗಿದ್ದು, ಇತ್ತೀಚೆಗಷ್ಟೆ ತೆಲುಗು ಸಿನಿಮಾ ಮತ್ತು ಟಿವಿ ಡ್ಯಾನ್ಸರ್ ಅಸೋಸಿಯೇಷನ್ ಸದಸ್ಯರು ಜಾನಿ ಮಾಸ್ಟರ್ ಮತ್ತು ಅವರ ಪತ್ನಿ ಹಾಗೂ ಅಸೋಷಿಯೇಷನ್ ಅಧ್ಯಕ್ಷೆ ಸುಮಲತಾ ವಿರುದ್ಧ ಪ್ರತಿಭಟನೆ ಸಹ ಮಾಡಿದ್ದಾರೆ.
ಈಗಾಗಲೇ ತೆಲುಗು ಡ್ಯಾನ್ಸರ್ಗಳಲ್ಲಿಯೇ ಎರಡು ಬಣವಾಗಿದ್ದು ಜಾನಿ ಮಾಸ್ಟರ್ ಅವರದ್ದು ಒಂದು ಬಣವಾದರೆ ಶೇಖರ್ ಮಾಸ್ಟರ್ ಅವರದ್ದು ಇನ್ನೊಂದು ಬಣವಾಗಿದೆ. ಇತ್ತೀಚೆಗಷ್ಟೆ ಅಸೋಸಿಯೇಷನ್ ಸದಸ್ಯರು, ಜಾನಿ ಮಾಸ್ಟರ್ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ಅಸೋಸಿಯೇಷನ್ ನಿಯಮಗಳನ್ನು ಗಾಳಿಗೆ ತೂರಿ, ತೆಲುಗು ಡ್ಯಾನ್ಸರ್ಗಳಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಸ್ಥಳೀಯ ಡ್ಯಾನ್ಸರ್ಸ್ಗಳಿಗೆ ಅವಕಾಶ ನೀಡದೆ ಮುಂಬೈನಿಂದ ಡ್ಯಾನ್ಸರ್ಗಳನ್ನು ಕರೆದುಕೊಂಡು ಬರುತ್ತಿರುವ ಬಗ್ಗೆ ಡ್ಯಾನ್ಸರ್ಗಳು ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೆ, ಡ್ಯಾನ್ಸರ್ಗಳಿಗೆ ಸೂಕ್ತವಾಗಿ ಹಣ ನೀಡುತ್ತಿಲ್ಲ. ಡ್ಯಾನ್ಸರ್ಗಳಿಗೆ ತಲುಪಬೇಕಿರುವ ಮೊತ್ತವನ್ನು ದಲ್ಲಾಳಿಗಳು ತೆಗೆದುಕೊಳ್ಳುತ್ತಿರುವ ಬಗ್ಗೆ ಹಾಗೂ ಅಸೋಸಿಯೇಷನ್ನಲ್ಲಿ ನಡೆಯುತ್ತಿರುವ ಕಮಿಷನ್ ದಂಧೆಯ ವಿರುದ್ಧ ಹೀಗೆ ಹಲವು ವಿಷಯಗಳನ್ನು ಇರಿಸಿಕೊಂಡು ಡ್ಯಾನ್ಸರ್ಗಳು ಪ್ರತಿಭಟನೆ ನಡೆಸಿದ್ದರು. ವಿಶೇಷವಾಗಿ ಜಾನಿ ಮಾಸ್ಟರ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ:‘ಡ್ರ್ಯಾಗನ್’ಗೂ ಮುನ್ನ ಪ್ರಶಾಂತ್ ನೀಲ್ ಹೊಸ ಸಾಹಸ; ಹಾರರ್ ಸಿನಿಮಾ ಪ್ರೆಸೆಂಟರ್ ಆದ ನಿರ್ದೇಶಕ
ಆಂಧ್ರ ಫಿಲಂ ಎಂಪ್ಲಾಯೀಸ್ ಅಸೋಸಿಯೇಷನ್ ಮಧ್ಯ ಪ್ರವೇಶಿಸಿ, ಡ್ಯಾನ್ಸ್ ಅಸೋಸಿಯೇಷನ್ ಸದಸ್ಯರೊಡನೆ ಮಾತುಕತೆ ನಡೆಸಿದೆ. ಸಮಸ್ಯೆಗಳನ್ನು ಬಗೆಹರಿಸುವುದಾಗಿಯೂ ಹೇಳಿದೆ. ಮಾತ್ರವಲ್ಲದೆ, ಫಿಲಂ ಎಂಪ್ಲಾಯೀಶ್ ಅಸೋಸಿಯೇಷನ್, ಜಾನಿ ಮಾಸ್ಟರ್ ವಿರುದ್ಧ ಅಸಹಕಾರ ಘೋಷಣೆ ಮಾಡಿದ್ದು, ಪರೋಕ್ಷವಾಗಿ ನಿಷೇಧವನ್ನು ಹೇರಿದೆ.
ಆದರೆ ತಮ್ಮ ಮೇಲೆ ಬಂದಿರುವ ಆರೋಪಗಳನ್ನು ಜಾನಿ ಮಾಸ್ಟರ್ ಅಲ್ಲಗಳೆದದ್ದು, ತಮ್ಮ ವಿರುದ್ಧ ವೈಯಕ್ತಿಕ ದ್ವೇಷದಿಂದಾಗಿ ಅಸಹಕಾರ ಘೋಷಕ್ಷಣೆ ಮಾಡಲಾಗಿದೆ ಎಂದಿದ್ದಾರೆ. ಅಲ್ಲದೆ, ತಾವು ನಿರ್ಮಾಪಕರ ಒತ್ತಡದಿಂದಲೇ ಬೇರೆ ಕಡೆಯಿಂದ ಡ್ಯಾನ್ಸರ್ಗಳನ್ನು ಕರೆದುಕೊಂಡು ಬರುತ್ತಿದ್ದುದಾಗಿ ಹೇಳಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ