Headlines

ಗಾಂಧಿ ಹತ್ಯೆ ಹಿಂದೆ ಆರ್​​​ಎಸ್​​ಎಸ್ ಕೈವಾಡ​ ಇತ್ತಾ? ಇದು ‘ಆಖ್ರಿ ಸವಾಲ್’ – Kannada News | Aakhri Sawaal: Sanjay Dutt’s Film Sparks debate with Historical Questions

ಸಂಜಯ್ ದತ್ ನಟಿಸಿ, ನಿರ್ಮಿಸಿರೋ ‘ಆಖ್ರಿ ಸವಾಲ್’ ಮೊದಲಿನಿಂದಲೂ ಸಾಕಷ್ಟು ಕುತೂಹಲ ಮೂಡಿಸುತ್ತಾ ಬರುತ್ತಿದೆ. ಈ ಚಿತ್ರದ ಪೋಸ್ಟರ್​​ಗಳು ಗಮನ ಸೆಳೆದಿವೆ. ಈಗ ಚಿತ್ರ ತಂಡ ಒಂದಷ್ಟು ಹೊಸ ಪೋಸ್ಟರ್​​ಗಳನ್ನು ರಿಲೀಸ್ ಮಾಡಿದೆ. ಇದರಲ್ಲಿ ಒಂದಷ್ಟು ಪ್ರಶ್ನೆಗಳಿವೆ. ಈವರೆಗೆ ಯಾರೂ ಕೇಳದ ಪ್ರಶ್ನೆಗಳು. ಇದಕ್ಕೆಲ್ಲ ಉತ್ತರ ‘ಆಖ್ರಿ ಸವಾಲ್’ ಸಿನಿಮಾದಲ್ಲಿ ಸಿಗಲಿದೆಯೇ ಎಂಬ ಪ್ರಶ್ನೆ ಮೂಡಿದೆ.

ಮೇ 8ರಂದು ‘ಆಖ್ರಿ ಸವಾಲ್’ ಸಿನಿಮಾ ಥಿಯೇಟರ್ನಲ್ಲಿ ರಿಲೀಸ್ ಆಗಲಿದೆ. ಅದಕ್ಕೂ ಮೊದಲು ಸಿನಿಮಾ ಪ್ರಚಾರ ಕೆಲಸ ಮಾಡಲಾಗುತ್ತಿದೆ. ವಿವಿಧ ರೀತಿಯ ಪೋಸ್ಟರ್​​ಗಳ ಮೂಲಕ ಗಮನ ಸೆಳೆಯುವ ಪ್ರಯತ್ನ ನಡೆದಿದೆ.ಈಗ ರಿಲೀಸ್ ಆಗಿರೋ ಪ್ರಶ್ನೆಗಳು ಸಾಕಷ್ಟು ಆಳ ಅರ್ಥವನ್ನು ಹೊಂದಿವೆ.

‘ಮಹಾತ್ಮ ಗಾಂಧಿ ಹತ್ಯೆ ಹಿಂದೆ ಆರ್​​ಎಸ್​​ಎಸ್​ ಕೈವಾಡ ಇತ್ತಾ?’, ‘ಬಾಬ್ರಿ ಮಸೀದಿ ನಾಶದ ಹಿಂದೆ ಆರ್​ಎಸ್​ಎಸ್​ ಇತ್ತಾ?’, ‘ತುರ್ತುಪರಿಸ್ಥಿತಿ ಹಿಂದಿನ ಸತ್ಯವೇನು? ಇದರಲ್ಲಿ ಆರ್​ಎಸ್​​ಎಸ್​ನ ಪಾತ್ರವೇನು? ಎಂಬ ಮೂರು ಪ್ರಶ್ನೆಗಳನ್ನು ಕೇಳಲಾಗಿದೆ.

ಇವು ದೇಶದ ಇತಿಹಾಸಕ್ಕೆ ಸಂಬಂಧಿಸಿದ ಗಂಭೀರವಾದ ಪ್ರಶ್ನೆಗಳಾಗಿವೆ. ‘ಯಾರೂ ಈ ಬಗ್ಗೆ ಪ್ರಶ್ನೆ ಮಾಡುವ ಧೈರ್ಯ ಮಾಡಿಲ್ಲ. ಈ ಎಲ್ಲಾ ಪ್ರಶ್ನೆಗಳಿಗೆ ಮೇ 8ರಂದು ಉತ್ತರ ಕಂಡುಕೊಳ್ಳಿ’ ಎಂದು ಬರೆಯಲಾಗಿದೆ. ಅಂದರೆ ಮೇ 8ರಂದು ಸಿನಿಮಾ ಥಿಯೇಟರ್​​ನಲ್ಲಿ ಬಿಡುಗಡೆ ಆಗಲಿದೆ.

ಇದನ್ನೂ ಓದಿ: ‘ಧುರಂಧರ್’ ಯಶಸ್ಸಿನ ಬೆನ್ನಲ್ಲೇ ಸಂಜಯ್ ದತ್ ಹೊಸ ಸಿನಿಮಾ ‘ಆಖ್ರಿ ಸವಾಲ್’

‘ಆಖ್ರಿ ಸವಾಲ್’ ಚಿತ್ರವನ್ನು ರಾಷ್ಟ್ರ ಪ್ರಶಸ್ತಿ ವಿಜೇತ ಸಿನಿಮಾ ಮಾಡಿದ ಅಭಿಜೀತ್ ಮೋಹನ್ ವಾರಂಗ್ ನಿರ್ದೇಶನ ಮಾಡಿದ್ದಾರೆ. ಮರಾಠಿಯಲ್ಲಿ ನಿರ್ದೇಶನ ಮಾಡಿದ್ದ ‘ಪೊಕಾಸೋ’ (2021) ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು. ಈಗ ಅವರು ಹಿಂದಿಯಲ್ಲಿ ತಮ್ಮ ಎರಡನೇ ಸಿನಿಮಾ ಮಾಡಿದ್ದಾರೆ. ‘ಆಖ್ರಿ ಸವಾಲ್’ ಚಿತ್ರವನ್ನು ನಿಖಿಲ್ ನಂದ್ ಪ್ರೆಸೆಂಟ್ ಮಾಡುತ್ತಿದ್ದಾರೆ. ನಿಖಿಲ್ ಹಾಗೂ ಸಂಜಯ್ ದತ್ ಇದನ್ನು ನಿರ್ಮಾಣ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *