Headlines

ಗಾಯಗೊಂಡ ವಿರಾಟ್ ಕೊಹ್ಲಿ; ಅಫ್ಘಾನಿಸ್ತಾನದ ವಿರುದ್ಧದ ಏಕದಿನ ಸರಣಿಯಿಂದ ಔಟ್ – Kannada News

ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಈಗಾಗಲೇ ಟೆಸ್ಟ್ ಹಾಗೂ ಟಿ20 ಮಾದರಿಯ ಕ್ರಿಕೆಟ್​​ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಐಪಿಎಲ್ ಹೊರತುಪಡಿಸಿ ಅವರ ಆಟ ನೋಡ ಸಿಗೋದು ಏಕದಿನ ಪಂದ್ಯಗಳಲ್ಲಿ ಮಾತ್ರ. ಅವರು ಅಪ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಬೇಕಿತ್ತು. ಆದರೆ, ಸ್ನಾಯು ಸೆಳೆತದ ಕಾರಣದಿಂದ ಈ ಸರಣಿಯಿಂದ ಹೊರ ನಡೆದಿದ್ದು, ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

ಅಪ್ಘಾನಿಸ್ತಾನ ತಂಡ ಭಾರತಕ್ಕೆ ಆಗಮಿಸುತ್ತಿದ್ದು, ಜೂನ್ 6-10ರವರೆಗೆ ಒಂದು ಟೆಸ್ಟ್ ಪಂದ್ಯ ಆಡಲಿದೆ. ಜೂನ್ 13ರಿಂದ ಮೂರು ಏಕದಿನ ಸರಣಿಗಳು ನಡೆಯಲಿವೆ. ಆದರೆ, ಇಂಜೂರಿ ಕಾರಣದಿಂದ ಕೊಹ್ಲಿ ಅವರು ಈ ಸರಣಿಯಿಂದ ಹೊರಗುಳಿಯಬೇಕಾದ ಪರಿಸ್ಥಿತಿ ಇದೆ. ಇನ್ನು, ಹಿರಿಯ ಆಟಗಾರ ರೋಹಿತ್ ಶರ್ಮಾ ಅವರ ಇರುವಿಕೆ ಕೂಡ ಖಾತ್ರಿ ಆಗಿಲ್ಲ. ಐಪಿಎಲ್ ಸಂದರ್ಭದಲ್ಲಿ ಅವರೂ ಗಾಯಕ್ಕೆ ಒಳಗಾಗಿ, ಕೆಲವು ಪಂದ್ಯಗಳಲ್ಲಿ ವಿಶ್ರಾಂತಿ ಪಡೆದಿದ್ದರು. ಇಬ್ಬರು ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಅಪ್ಘಾನಿಸ್ತಾನದ ವಿರುದ್ಧ ಕಣಕ್ಕೆ ಇಳಿಯಬೇಕಿದೆ.

ವಿರಾಟ್ ಕೊಹ್ಲಿ ಅವರು ಗಾಯದ ಕಾರಣ ನೀಡಿ ಪಂದ್ಯಗಳಿಂದ ಹೊರಗೆ ಉಳಿದಿದ್ದು ತುಂಬಾನೇ ಕಡಿಮೆ. ಈ ಬಾರಿಯ ಐಪಿಎಲ್ ಫೈನಲ್ ವೇಳೆ ಅವರ ಬ್ಯಾಟ್​ನಿಂದ 75 ರನ್​​ಗಳು ಬಂದಿದ್ದವು. ಕಾಲಿನಲ್ಲಿ ಉಂಟಾದ ಸಮಸ್ಯೆ ಅವರ ಆಟದ ಮೇಲೆ ನೇರ ಪರಿಣಾಮ ಬೀಳುತ್ತಾ ಇತ್ತು. ಅವರು ಗಾಯದ ಮಧ್ಯೆಯೂ ಆಟ ಮುಂದುವರಿಸಿದ್ದರು. ಈಗ ಗಾಯದಿಂದ ಸಂಪೂರ್ಣವಾಗಿ ಗುಣಮುಖರಾಗದ ಕಾರಣ ಅವರು ಈ ಸರಣಿಯಿಂದ ಹೊರಗುಳಿಯಬೇಕಾದ ಪರಿಸ್ಥಿತಿ ಬಂದಿದೆ.

ಇದನ್ನೂ ಓದಿ: ಆರ್‌ಸಿಬಿಗೆ ಬರ್ತಾರೆ ಪಾಂಡ್ಯ? ದಿನೇಶ್ ಕಾರ್ತಿಕ್ ಜೊತೆಗಿನ ಫೋಟೋದ ಅಸಲಿ ಕಥೆಯೇ ಬೇರೆ

ಆರ್​​ಸಿಬಿ ಸತತ ಎರಡನೇ ಬಾರಿ ಕಪ್ ಗೆದ್ದ ಬಳಿಕ ವಿರಾಟ್ ಕೊಹ್ಲಿ ಅವರು ಪತ್ನಿ ಅನುಷ್ಕಾ ಶರ್ಮಾ ಜೊತೆ ಸೇರಿ ಮಥುರಾ ಮತ್ತು ಬೃಂದಾವನದ ಪ್ರಸಿದ್ಧ ಸಂತ ಪ್ರೇಮಾನಂದ್ ಗುರೂಜಿ ಅವರ ಆಶ್ರಮಕ್ಕೆ ಭೇಟಿ ನೀಡಿದ್ದರು. ದೀರ್ಘ ಹಾಗೂ ಒತ್ತಡದ ಕ್ರಿಕೆಟ್ ಸೀಸನ್ ಮುಗಿದ ನಂತರ, ಮನಸ್ಸಿನ ಶಾಂತಿ ಮತ್ತು ಧನ್ಯತಾ ಭಾವದೊಂದಿಗೆ ಅವರು ಪತ್ನಿ ಅನುಷ್ಕಾ ಶರ್ಮಾ ಜೊತೆಗೂಡಿ ಪ್ರಸಿದ್ಧ ಆಶ್ರಮಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

ಹೆಚ್ಚಿನ ಕ್ರೀಡಾ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *