Headlines

ಗೃಹಲಕ್ಷ್ಮಿ ಯೋಜನೆ ಬಗ್ಗೆ ಡಿಕೆಶಿ ಬಿಗ್ ಅಪ್ಡೇಟ್: 2000 ರೂ.ಬೇಕು ಅಂದ್ರೆ ಈ ನಿಯಮಗಳನ್ನ ಪಾಲಿಸಲೇಬೇಕು – Kannada News | Biometric, Mobile Number And Bank Account mandatory for gruhalakshmi scheme Says DK Shivakumar

ಬೆಂಗಳೂರು, (ಜುಲೈ 19): ಗೃಹಲಕ್ಷ್ಮೀ ಯೋಜನಯನ್ನು (gruhalakshmi scheme) ಪರಿಷ್ಕರಣೆ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಇಂದು (ಜುಲೈ 19) ನಡೆದ ಸಚಿವ ಸಂಪುಟದಲ್ಲಿ ಈ ಬಗ್ಗೆ ಮಹತ್ವದ ಚರ್ಚೆ ಆಗಿದೆ. ಹೌದು…ಗೃಹಲಕ್ಷ್ಮಿ ಫಲಾನುಭವಿಗಳ ಮರುಪರಿಶೀಲನೆ ನಡೆಸಲು ಸರ್ಕಾರ ಸಜ್ಜಾಗಿದ್ದು, ಗೃಹಲಕ್ಷ್ಮೀ ಹಣಕ್ಕೆ ಬಯೋಮೆಟ್ರಿಕ್ ಕಡ್ಡಾಯಗೊಳಿಸಲು ಸಚಿವ ಸಂಪುಟ  ಸಭೆಯಲ್ಲಿ (Cabinet Meeting) ತೀರ್ಮಾನ ಕೈಗೊಳ್ಳಲಾಗಿದೆ. ಪ್ರತಿ ಒಂದು ಕುಟುಂಬದ ಯಜಮಾನಿಗೆ 2000 ರೂ. ಆರ್ಥಿಕ ನೆರವು ನೀಡುವ ಯೋಜನೆಯೇ ಗೃಹಲಕ್ಷ್ಮಿ. ಆದ್ರೆ ಅನರ್ಹರು ಕೂಡ ಯೋಜನೆಯ ಲಾಭ ಪಡೆಯುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಸರ್ಕಾರ ಈ ಪರಿಷ್ಕರಣೆಗೆ ಮುಂದಾಗಿದ್ದು, ಅರ್ಹ ಫಲಾನುಭವಿಗಳ ಮೊಬೈಲ್ ನಂಬರ್ ಹಾಗೂ ಬ್ಯಾಂಕ್ ಖಾತೆ ಇರುವುದು ಕಡ್ಡಾಯಗೊಳಿಸಲಾಗಿದೆ.

ಸಚಿವ ಸಂಪುಟ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ಗೃಹಲಕ್ಷ್ಮೀ ಹಣಕ್ಕೆ ಬಯೋಮೆಟ್ರಿಕ್ ಕಡ್ಡಾಯವಾಗಿದೆ. ಅವರದ್ದೇ ಫೋನ್ ನಂಬರ್ ಇರಬೇಕು. ಯಾರದ್ದೋ ನಂಬರ್ ಕೊಟ್ಟು ಅವರಿಗೆ ಮೆಸೇಜ್ ಹೋಗಬಾರದು. ಗಂಡನ ಖಾತೆ ಮತ್ತು ಮಕ್ಕಳ ಖಾತೆ ಕೂಡ ಇರಬಾರದು. ಮಹಿಳೆಯರ ಅಕೌಂಟ್​ಗೆ ಸರ್ಕಾರದ ಹಣ​​​ ಹೋಗಬೇಕು ಎಂದು ವಿವರಿಸಿದರು.

ನಮ್ಮ ಗ್ಯಾರಂಟಿ ತಂಡ ಹೋಗಿ ಮಾಹಿತಿ ಪಡೆಯಬೇಕು. ಇದಕ್ಕಾಗಿ 20 ಕೋಟಿ ರೂಪಾಯಿ ಇಟ್ಟಿದ್ದೇವೆ.
ಫಾರಂ ಯಾವ ರೀತಿ ಇರಬೇಕು ಅಂತ ಚರ್ಚಿಸಲಾಗಿದ್ದು, ಗಂಡನ ಖಾತೆ ಮತ್ತು ಮಕ್ಕಳ ಖಾತೆ ಕೂಡ ಇರಬಾರದು. ಮಹಿಳೆಯರ ಅಕೌಂಟ್​ಗೆ ಸರ್ಕಾರದ ಹಣ​​​ ಹೋಗಬೇಕು. ಯೋಜನೆಯಿಂದ ಯಾರನ್ನು ತೆಗೆಯುವ ಉದ್ದೇಶವಿಲ್ಲ.ನಾವು ಕೊಡುವ ಹಣ ಅವರಿಗೆ ಸರಿಯಾಗಿ ತಲುಪಬೇಕು ಎಂದು ಸ್ಪಷ್ಟಪಡಿಸಿದರು.

ಆಪರೇಷನ್ ಗೃಹಲಕ್ಷ್ಮಿ

ಸರ್ಕಾರ “ಆಪರೇಷನ್ ಗೃಹಲಕ್ಷ್ಮಿ” ಹೆಸರಿನಲ್ಲಿ ನಿಜವಾದ ಫಲಾನುಭವಿಗಳನ್ನು ಗುರುತು ಮಾಡುವ ಕೆಲಸ ಮಾಡ್ತಿದೆ. ಪ್ರತಿ ಒಂದು ಕುಟುಂಬದ ಯಜಮಾನಿಗೆ 2000 ರೂ. ಆರ್ಥಿಕ ನೆರವು ನೀಡುವ ಯೋಜನೆಯೇ ಗೃಹಲಕ್ಷ್ಮಿ. ಆದ್ರೆ ಅನರ್ಹರು ಕೂಡ ಯೋಜನೆಯ ಲಾಭ ಪಡೆಯುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಸರ್ಕಾರ ಪರಿಷ್ಕರಣೆಗೆ ಮುಂದಾಗಿದೆ. ಒಟ್ಟು 1.20 ಕೋಟಿಗೂ ಅಧಿಕ ಫಲಾನುಭವಿಗಳಿದ್ದು, ಮೃತಪಟ್ಟವರನ್ನು ಕೈಬಿಡಲಾಗಿದೆ. ಸದ್ಯ 4.30 ಲಕ್ಷ ಫಲಾನುಭವಿಗಳ ಹೆಸರನ್ನು ಡಿಲೀಟ್ ಮಾಡಲಾಗಿದ್ದು, ಈ ಮೂಲಕ ನೂರಾರು ಕೋಟಿ ರೂ. ಉಳಿತಾಯ ಆಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *