
ಪ್ರತಿ ವರ್ಷ ಆಸ್ಕರ್ (Oscar) ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೇವಲ ಕೆಲವೇ ಕೆಲವು ತಾರೆಗಳು ಮಾತ್ರ ಆಸ್ಕರ್ ಗೆಲ್ಲುತ್ತಾರೆ. ಅವರಿಗೆ ಚಿನ್ನ ಲೇಪಿದ ಮೂರ್ತಿಯ ಜೊತೆಗೆ ನಗದು ಬಹುಮಾನವೂ ಸಿಗುತ್ತದೆ. ಆದರೆ ನಾಮಿನೇಷನ್ ಪಡೆದವರಿಗೆ ಏನೂ ಇಲ್ಲ. ಆದರೆ ಈ ಬಾರಿ ಹಾಗಾಗುವುದಿಲ್ಲ. ನಾಮಿನೇಷನ್ ಹಂತದ ವರೆಗೆ ಬಂದವರಿಗೂ ಸಹ ದೊಡ್ಡ ಉಡುಗೊರೆಯನ್ನು ನೀಡಲಾಗುತ್ತಿದೆ. ಅದೂ ಈ ಉಡುಗೊರೆ ಬಾಸ್ಕೆಟ್ನ ಮೌಲ್ಯ ಸುಮಾರು 3 ಕೋಟಿ ರೂಪಾಯಿಗಳಿದೆ. ಈ ಉಡುಗೊರೆ ಬಾಸ್ಕೆಟ್ನಲ್ಲಿ ವಿದೇಶಿ ಪ್ರವಾಸದ ಟಿಕೆಟ್ ಜೊತೆಗೆ ಇನ್ನೂ ಏನೇನೋ ಇದೆ. ಇಲ್ಲಿದೆ ನೋಡಿ ಪೂರ್ಣ ಪಟ್ಟಿ…
ಅತ್ಯುತ್ತಮ ನಟ, ನಟಿ ಮತ್ತು ನಿರ್ದೇಶಕ ವಿಭಾಗದಲ್ಲಿ ನಾಮನಿರ್ದೇಶನಗೊಂಡ ಟಾಪ್ 25 ಕಲಾವಿದರಿಗೆ ‘ಡಿಸ್ಟಿಂಕ್ಟಿವ್ ಅಸೆಟ್ಸ್’ (Distinctive Assets) ಎಂಬ ಮಾರ್ಕೆಟಿಂಗ್ ಕಂಪನಿಯು ಅತ್ಯಂತ ಐಷಾರಾಮಿ ಉಡುಗೊರೆಗಳನ್ನು ನೀಡುತ್ತದೆ. ಇದನ್ನು ‘ಎವರಿಒನ್ ವಿನ್ಸ್‘ ನಾಮಿನಿ ಗಿಫ್ಟ್ ಬ್ಯಾಗ್ ಎಂದು ಕರೆಯಲಾಗುತ್ತಿದೆ. 2026ರ ಈ ಗಿಫ್ಟ್ ಬ್ಯಾಗ್ನಲ್ಲಿ 350000 ಡಾಲರ್ (2.90 ಕೋಟಿಗೂ ಹೆಚ್ಚು) ಮೌಲ್ಯದ ಉಡುಗೊರೆಗಳನ್ನು ತುಂಬಿಸಲಾಗಿದೆ.
ಗಿಫ್ಟ್ ಬ್ಯಾಗ್ನಲ್ಲಿ ಫಿನ್ಲ್ಯಾಂಡ್ನ ಆರ್ಕ್ಟಿಕ್ ವಿಲ್ಲಾದಲ್ಲಿ ನಾರ್ದರ್ನ್ ಲೈಟ್ಸ್ ವೀಕ್ಷಿಸಲು ಉಚಿತ ವಾಸ್ತವ್ಯ. ಇಬಿಜಾ ದಲ್ಲಿ 16 ಅತಿಥಿಗಳಿಗಾಗಿ ಐಷಾರಾಮಿ ವಿಲ್ಲಾ ಪ್ರವಾಸ. ಕೋಸ್ಟರಿಕಾ ಮತ್ತು ಶ್ರೀಲಂಕಾದಲ್ಲಿ ಪ್ರೀಮಿಯಂ ರೆಸಾರ್ಟ್ ವಾಸ್ತವ್ಯದ ವೋಚರ್ಗಳನ್ನು ಈ ಗಿಫ್ಟ್ ಬ್ಯಾಗ್ ಒಳಗೊಂಡಿದೆ. ಜೊತೆಗೆ ಚಾಕಲೇಟ್ಗಳು, ಅತ್ಯುತ್ತಮ ದರ್ಜೆಯ ಸುಗಂಧ ದ್ರವ್ಯ, ಬ್ಯಾಗುಗಳು ಇನ್ನೂ ಹಲವು ವಸ್ತುಗಳಿವೆ. ವಿಶೇಷವೆಂದರೆ ಬೆವರ್ಲಿ ಹಿಲ್ಸ್ನ ಪ್ರಸಿದ್ಧ ವೈದ್ಯರಿಂದ ಹಲ್ಲುಗಳ ಸೌಂದರ್ಯವರ್ಧಕ ಚಿಕಿತ್ಸೆಯ ಕೂಪನ್ಗಳು, ಲೈಪೋಸಕ್ಷನ್ ಅಂತಹ ಹೈ-ಎಂಡ್ ಕಾಸ್ಮೆಟಿಕ್ ಸರ್ಜರಿ ಕೂಪನ್ಗಳು. ಪ್ರತಿಷ್ಠಿತ ಸ್ಪಾಗಳಲ್ಲಿ ಫೇಶಿಯಲ್ ಮತ್ತು ಚರ್ಮದ ಪುನಶ್ಚೇತನ ಚಿಕಿತ್ಸೆಗಳ ಕೂಪನ್ಗಳು ಇರಲಿವೆ.
ಇದನ್ನೂ ಓದಿ:ಇತಿಹಾಸ ಬರೆದ ‘ಬ್ರಮಯುಗಂ’ ಆಸ್ಕರ್ನಿಂದ ವಿಶೇಷ ಗೌರವ
ಇದರ ಜೊತೆಗೆ ಸುಮಾರು 91 ಲಕ್ಷ ಮೌಲ್ಯದ ಮನೆಯ ಒಳಾಂಗಣ ವಿನ್ಯಾಸದ ಪ್ಯಾಕೇಜ್. ಅತ್ಯಾಧುನಿಕ ಕಿಚನ್ ಗ್ಯಾಜೆಟ್ಗಳು ಮತ್ತು ದುಬಾರಿ ಹೋಮ್ ಡೆಕೋರ್ ವಸ್ತುಗಳು. ಇವುಗಳ ಜೊತೆಗೆ ಗಾಂಜಾ ಮಿಶ್ರಿತ ಐಷಾರಾಮಿ ಉತ್ಪನ್ನಗಳು. ಕ್ಯಾವಿಯರ್ (ದುಬಾರಿ ಮೀನಿನ ಮೊಟ್ಟೆ)ಗಳು ಇವೆ. ವಿಶೇಷವೆಂದರೆ ಈ ಗಿಫ್ಟ್ ಬ್ಯಾಗಿನಲ್ಲಿ ವಿಚ್ಛೇದನ ವಕೀಲರಿಂದ ಉಚಿತವಾಗಿ ಸಿದ್ಧಪಡಿಸಿಕೊಡುವ ‘ಪ್ರೀನಪ್ಷಿಯಲ್ ಅಗ್ರಿಮೆಂಟ್’ (ಮದುವೆ ಮುನ್ನ ಮಾಡಿಕೊಳ್ಳುವ ಒಪ್ಪಂದ) ಪ್ಯಾಕೇಜ್ ಸಹ ಇದೆ.
ಮಾರ್ಚ್ 15 ರಂದು ಆಸ್ಕರ್ ಪ್ರಶಸ್ತಿ ವಿತರಣೆ ಸಮಾರಂಭ ನಡೆಯಲಿದೆ. ಸಮಾರಂಭವು ಲಾಸ್ ಏಂಜಲ್ಸ್ನ ಡಾಲ್ಬಿ ಥಿಯೇಟರ್ನಲ್ಲಿ ನಡೆಯಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ