Headlines

ಗೆಳೆಯನ ಮೊಬೈಲ್ ಬಚ್ಚಿಟ್ಟು ಮಜಾಕ್: ತಮಾಷೆಯಲ್ಲೇ ಹೋಯ್ತು ಸ್ನೇಹಿತನ ಜೀವ, ಆಗಿದ್ದೇನು? – Kannada News | A Friend Killed In Joke for mobile at Bengaluru, here Is Details What happened

ಬೆಂಗಳೂರು, ಮೇ 15): ಬೆಂಗಳೂರಿನ (Bengaluru) ಮಾರತ್ ಹಳ್ಳಿಯ ಮನೆಯೊಂದರಲ್ಲಿ ಗೆಳೆಯನ ಮೊಬೈಲ್ (Mobile Phone) ಬಚ್ಚಿಟ್ಟು ತಮಾಷೆ (Joke) ಮಾಡಲಾಗಿದ್ದು, ಕೊನೆಗೆ ಈ ಮಜಾಕ್ ಸ್ನೇಹಿತನ ಜೀವ ಬಲಿಪಡೆದುಕೊಂಡಿದೆ. ಹೌದು….ಮೊಬೈಲ್ ಬಚ್ಚಿಟ್ಟ ವಿಚಾರಕ್ಕೆ ಇಬ್ಬರು ಸ್ನೇಹಿತರ ನಡುವೆ ನಡೆದ ತಮಾಷೆ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಮುಚ್ಚಿಟ್ಟ ವಿಚಾರಕ್ಕೆ ಕೊಲೆ ಮಾಡಿದ್ದ ಕೇಸ್ ನಲ್ಲಿ ಆರೋಪಿ ರಾಮು ಎಂಬಾತನನ್ನು ಮಾರತ್ ಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಕೊಲೆ ಮಾಡಿ ತಾನು ಕೊಲೆ ಮಾಡಿದ್ದೇನೆ ಎಂಬೂದು ಸಹ ಗೊತ್ತಿಲ್ಲದೇ ಅಲೆಯುತಿದ್ದ ರಾಮು ಎನ್ನುವಾತನನ್ನು ಪೊಲೀಸರು ಅರೆಸ್ಟ್ ಮಾಡಿ ವಿಚಾರಣೆ ಮಾಡಿದಾಗ ಅಸಲಿ ಸತ್ಯ ಗೊತ್ತಾಗಿದೆ.

ಕೊಲೆ ನಡದ ದಿನ ಆರೋಪಿ ರಾಮು ಮೊಬೈಲ್ ಅನ್ನು ಕೊಲೆಯಾದ ಪರುಶುರಾಮ್ ಮುಚ್ಚಿಟ್ಟು ಆಟವಾಡಿಸಿದ್ದ. ಎಷ್ಟು ಬೇಡಿಕೊಂಡರೂ ಕೊಟ್ಟಿರಲಿಲ್ಲ.ಕೊನೆಗೆ ಈ ತಮಾಷೆ ಹೋಗಿ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ತನ್ನ ಮೊಬೈಲ್ ಕೊಡು ಎಂದು ಪರುಶುರಾಮ್ ಸಿರಿಯಸ್ ಆಗಿ ಗಲಾಟೆ ಮಾಡಿದ್ದ. ಇದರಿಂದ ಕೋಪಗೊಂಡ ರಾಮು, ಅಡುಗೆ ಮನೆಯಲ್ಲಿದ್ದ ಚಾಕು ತಂದು ಪರುಶುರಾಮ್ ಪರಶುರಾಮ್​​​ ಗೆ ಚುಚ್ಚಿ ಏನಾಗಲ್ಲ ಬಿಡು ಎಂದು ಎಸ್ಕೇಪ್ ಆಗಿದ್ದಾನೆ. ಆದರೆ, ತೀವ್ರ ರಕ್ತಸ್ರವಾಗಿ ಪರಶುರಾಮ್ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: ಬಾಲಕಿಯರ ವಿಡಿಯೋ ಚಿತ್ರೀಕರಿಸಿ ಆನ್‌ಲೈನ್‌ಗೆ ಅಪ್ಲೋಡ್‌: ಹುಡುಕಿ ಇಬ್ಬರನ್ನ ಬಂಧಿಸಿದ ರಾಮನಗರ ಪೊಲೀಸ್ರು

ಅಷ್ಟಕ್ಕೂ ಆಗಿದ್ದೇನು?

ಕೊಲೆಯಾದ ಪರುಶುರಾಮ್, ಕೆಲಸ ಮುಗಿಸಿಕೊಂಡು ರಾಮು ಮನೆಗೆ ಹೋಗಿದ್ದ.ಬಳಿಕ ಫೋನ್ ಇಟ್ಟು ಬಾತ್ ರೂಮ್​​ಗೆ ಹೋಗಿದ್ದ. ಆದ್ರೆ, ವಾಶ್​​ ರೂಮಿಗೆ ಹೋಗಿ ಬರುವಷ್ಟರಲ್ಲೇ ಸ್ಥಳದಲ್ಲಿ ಮೊಬೈಲ್ ನಾಪತ್ತೆಯಾಗಿತ್ತು. ಬಳಿಕ ಪರಶುರಾಮ್, ತನ್ನ ಸ್ನೇಹಿತ ರಾಮು ಬಳಿ ಮೊಬೈಲ್ ಕೇಳಿದ್ದಾನೆ. ಆದ್ರೆ, ರಾಮು ತಮಾಷೆ ಮಾಡಲಿಕ್ಕೆ ಎಂದು ಮೊಬೈಲ್ ತೆಗೆದು ಇಟ್ಟುಕೊಂಡಿದ್ದರೂ ಸಹ ತನಗೆ ಗೊತ್ತಿಲ್ಲ ಎಂದು ಕಾಮಿಡಿ ಮಾಡಿದ್ದಾನೆ. ಆದರೂ ಬಿಡದ ಪರಶುರಾಮ್ ಫೋನ್ ಕೊಡು ಎಂದು ಬೆನ್ನುಬಿದ್ದಿದ್ದ. ಬಳಿಕ ತಮಾಷೆಯಾಗಿ ತೆಗೆದುಕೊಳ್ಳದ ಆರೋಪಿ ರಾಮು, ಕೋಪಗೊಂಡು ಗಲಾಟೆ ಮಾಡಿದ್ದಾನೆ. ಈ ವೇಳೆ ಪರುಶುರಾಮ್ ರಾಮುಗೆ ಹೊಡೆದಿದ್ದನಂತೆ .ನನಗೆ ಹೊಡೆಯುತ್ತಿಯಾ ಎಂದು ನೇರವಾಗಿ ಅಡುಗೆ ಮನೆಗೆ ಹೋಗಿ ಚಾಕು ತಂದು ಒಂದೇ ಬಾರಿ ಚುಚ್ಚಿ ಪರಶುರಾಮ್ ಫೋನ್ ಸಮೇತ ಮನೆಯಿಂದ ಹೋಗಿದ್ದ.

ತಮಾಷೆಯಲ್ಲೇ ಹೋಯ್ತು ಗೆಳೆಯನ ಜೀವ

ಮತ್ತೊಂದು ವಿಚಾರ ಅಂದ್ರೆ ಮಾರತ್ ಹಳ್ಳಿ ಪೊಲೀಸರು ಆರೋಪಿ ರಾಮುನ ಅರೆಸ್ಟ್ ಮಾಡಿ ವಿಚಾರಣೆ ನಡೆಸಿದಾಗ ರಾಮು, ಸಾರ್ ಸುಮ್ಮನೇ ಸುಳ್ಳು ಹೇಳಬೇಡಿ. ನಾನು ಸಣ್ಣ ಗಾಯ ಮಾಡಿದ್ದೆ ಅಷ್ಟೇ. ಅದಕ್ಕೆ ಅವನು ಸತ್ತಿಲ್ಲ. ಅವನು ಹುಡುಕಿಕೊಂಡು ಬರಲಿ ಎಂದು ನಾನು ಮೊಬೈಲ್ ತಗೊಂಡು ಹೋಗಿದ್ದೆ. ಆದ್ರೆ, ಜಗಳ ನಡೆದ ಎರಡು ದಿನವಾದರೂ ಅವನು ಬಂದಿಲ್ಲ. ಹೀಗಾಗಿ ರೂಮ್ ಹತ್ರ ಬಂದು ನೋಡಿದೆ ಆದ್ರೆ ಬೀಗ ಹಾಕಿತ್ತು ಎಂದು ಹೇಳಿದ್ದಾನೆ. ಅಂದರೆ ಇದುವರೆಗೂ ಕೊಲೆ ಮಾಡಿದ ರಾಮು ಇದೊಂದು ತಮಾಷೆ ಜಗಳ ಎಂದುಕೊಂಡಿದ್ದನಂತೆ.ಆದ್ರೆ ಹೊಟ್ಟೆಗೆ ಆಗಿದ್ದ ತೀವ್ರ ಸ್ವರೂಪದ ಗಾಯ ಹಾಗೂ ರಕ್ತ ಸ್ರಾವದಿಂದ ಪರುಶುರಾಮ್ ಸಾವನಪ್ಪಿದ್ದ ಎಂದು ವೈದ್ಯರು ತಿಳಿಸಿದ್ದಾರೆ.

ಒಟ್ಟಿನಲ್ಲಿ ಸಣ್ಣ ಪುಟ್ಟ ತಮಾಷೆ ವಿಚಾರ ಆಗಿದ್ರೂ ಪರವಾಗಿಲ್ಲ, ಅದು ಜಸ್ಟ್ ಮಾತಿನಲ್ಲೆ ಇರಲಿ, ಅದರ ಬದಲು ಜಗಳದಲ್ಲಿ ಸಣ್ಣ ಆಯುಧಗಳ ಬಳಕೆ ಆದ್ರೆ ಹೀಗೆ ಆಗೋದು.

Source link

Leave a Reply

Your email address will not be published. Required fields are marked *