ಬೆಂಗಳೂರು, ಜೂನ್ 17: ಗ್ಯಾರಂಟಿ ಯೋಜನೆಗಳ ನಿರ್ವಹಣೆಗೆ ಹಣ ಕ್ರೋಢೀಕರಣದಲ್ಲಿ ರಾಜ್ಯ ಸರ್ಕಾರಕ್ಕೆ ತೊಂದರೆಯಾಗಿದೆ. ಹೀಗಾಗಿಯೇ ಸುಧಾರಣೆ ಹೆಸರಿನಲ್ಲಿ ಬಡವರಿಗೆ ನೀಡಲಾಗುವ ಯೋಜನೆಗಳಿಗೆ ಕತ್ತರಿ ಹಾಕಲಾಗುತ್ತಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ. 1.5 ಲಕ್ಷಕ್ಕೂ ಹೆಚ್ಚು ಮಹಿಳೆಯರು ತೆರಿಗೆ ಪಾವತಿದಾರರು ಇದ್ದಾರೆ. ಅವರಿಗ್ಯಾಕೆ ಗ್ಯಾರಂಟಿ ಎಂದು ಪ್ರಶ್ನಿಸುತ್ತಿದ್ದಾರೆ. ಚುನಾವಣೆ ಸಂದರ್ಭ ಎಲ್ಲರಿಗೂ ಉಚಿತ ಎಂದು ಹೇಳಿದವರಿಗೆ ಈಗ ಇವೆಲ್ಲವೂ ನೆನಪಾಗುತ್ತಿದೆಯಾ? ಕೆಲವೆಡೆ ಅಕ್ರಮ ಆಗಿದೆ ಎಂದಾದರೆ ನಿಮ್ಮ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರುಗಳೇನು ಕತ್ತೆ ಕಾಯುತ್ತಿದ್ದರಾ? ಸರ್ಕಾರದಿಂದ ನೂರಾರು ಕೋಟಿ ಸಂಬಳ ಪಡೆದವರು ಏನು ಮಾಡುತ್ತಿದ್ದರು ಎಂದವರು ಪ್ರಶ್ನಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.