ಬೆಂಗಳೂರು, ಏಪ್ರಿಲ್ 27: ಚನ್ನಪಟ್ಟಣದಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದ್ದು, ಇದೀಗ ನಗರದ ಹೌಸಿಂಗ್ ಬೋರ್ಡ್ ಬಳಿಯೇ ಒಂಟಿ ಸಲಗವೊಂದು ಪ್ರತ್ಯಕ್ಷವಾಗಿದೆ. ಕಾಡಾನೆ ಓಡಾಟ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಆತಂಕ ಹೆಚ್ಚಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಕಾಪೌಂಡ್ಗಳನ್ನು ಹಾರಿ ಎಲ್ಲೆಂದರಲ್ಲಿ ಓಡಾಡುತ್ತಿರುವ ಕಾಡಾನೆ ಹಲವೆಡೆ ವಾಹನಗಳನ್ನ ಡ್ಯಾಮೇಜ್ ಮಾಡಿದೆ. ನಗರ ಪ್ರದೇಶಕ್ಕೆ ಆನೆ ಎಂಟ್ರಿ ಹಿನ್ನೆಲೆ ಅರಣ್ಯ ಇಲಾಖೆಯಿಂದ ಅಲರ್ಟ್ ಘೋಷಿಸಲಾಗಿದ್ದು, ಯಾರು ಕೂಡ ಮನೆಯಿಂದ ಹೊರಬಾರದಂತೆ ಸೂಚನೆ ನೀಡಲಾಗಿದೆ. ಬಳ್ಳಾರಿ ಮೂಲದ ರಾಮಪ್ಪ ಎಂಬುವವರ ಗುಡಿಸಲನ್ನು ಒಂಟಿ ಸಲಗ ಧ್ವಂಸಗೊಳಿಸಿದ್ದು, ಗುಡಿಸಲಿನಲ್ಲಿದ್ದ ರಾಮಪ್ಪಗೆ ಗಾಯಗಳಾಗಿವೆಯಾದರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾಡಾನೆ ಕಂಡು ಆಘಾತದಿಂದ ಮನೆ ಮುಂದೆ ಗೀತಾ ಎಂಬವರು ಕುಸಿದುಬಿದ್ದಿದ್ದು, ಚನ್ನಪಟ್ಟಣ ತಾಲೂಕು ಆಸ್ಪತ್ರೆಗೆ ದಾಖಲಿಸಿ ಅವರಿಗೆ ಚಿಕಿತ್ಸೆ ನೀಡಲಾಗ್ತಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.