
ಬುಲಂದ್ಶಹರ್, ಮಾರ್ಚ್ 29: ಮಗಳು ಚಾಕೊಲೇಟರ್ ಕದ್ದಿರಬಹುದು ಎನ್ನುವ ಸಂಶಯದಲ್ಲಿ ತಂದೆಯೊಬ್ಬ ಆಕೆಗೆ ದೊಣ್ಣೆಯಿಂದ ಹೊಡೆದು ಕೊಲೆ(Murder) ಮಾಡಿರುವ ಘಟನೆ ಉತ್ತರ ಪ್ರದೇಶದ ಬುಲಂದ್ಶಹರ್ನಲ್ಲಿ ನಡೆದಿದೆ. ನರೋರಾದ ರತನ್‌ಪುರ ಗ್ರಾಮದಲ್ಲಿ ಗುರುವಾರ ಈ ಘಟನೆ ನಡೆದಿದ್ದು, ಪೂಜಾ ತನ್ನ ಹಣ ನೀಡದೆ ಚಾಕೊಲೇಟ್ ಪ್ಯಾಕೆಟ್ ತೆಗೆದುಕೊಂಡಿದ್ದಾಳೆ ಎಂದು ಅಂಗಡಿಯವ ಹೇಳಿದ ನಂತರ ಆಕೆಯ ಮೇಲೆ ತಂದೆ ಪುಷ್ಪೇಂದ್ರಗೆ ಕೋಪ ಬಂದಿತ್ತು.
ಆರೋಪದಿಂದ ಕೋಪಗೊಂಡ ಆರೋಪಿಗೆ ಮದ್ಯದ ಚಟ ಕೂಡ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಸಂಜೆ ಮನೆಗೆ ಹಿಂತಿರುಗಿದ ಬಳಿಕ ತನ್ನ ಮಗಳಿಗೆ ಮರದ ಕೋಲಿನಿಂದ ಹೊಡೆಯಲು ಶುರು ಮಾಡಿದ್ದ. ಹುಡುಗಿಯ ತಾಯಿ ಆರತಿ ನೀಡಿದ ದೂರಿನ ಪ್ರಕಾರ, ತಾನು ಪದೇ ಪದೇ ಮಧ್ಯಪ್ರವೇಶಿಸಲು ಪ್ರಯತ್ನಿಸಿದರೂ ಆಕೆಗೆ ಹೊಡೆಯುವುದನ್ನು ಬಿಡಲೇ ಇಲ್ಲ.
ತಂದೆ ಕ್ರೂರವಾಗಿ ಆಕೆಗೆ ಥಳಿಸಿದಾಗ ಪೂಜಾಳ ತಲೆಗೆ ಗಂಭೀರವಾದ ಗಾಯವಾಗಿದ್ದು, ಪ್ರಜ್ಞಾಹೀನಳಾಗಿ ಬಿದ್ದಿದ್ದಳು. ಸಹಾಯ ಮಾಡುವ ಬದಲು, ತಂದೆ ಆಕೆಯನ್ನು ಗಂಭೀರ ಸ್ಥಿತಿಯಲ್ಲಿ ಮನೆಯೊಳಗೆ ಬಿಟ್ಟು ಅಲ್ಲಿಂದ ಕಾಲ್ಕಿತ್ತಿದ್ದ, ತಾಯಿಯನ್ನು ಮನೆಯೊಳಗೆ ಕೂಡಿ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.
ಕೂಗಾಟದ ನಂತರ ನೆರೆಹೊರೆಯವರು ಸ್ಥಳಕ್ಕೆ ಧಾವಿಸಿ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದರು.
ಮತ್ತಷ್ಟು ಓದಿ: ತನ್ನ ಕಾಮದಾಟಕ್ಕೆ ಅಡ್ಡಿಯಾಗುತ್ತಿದ್ದ ಪತಿಯನ್ನೇ ಸುಪಾರಿ ನೀಡಿ ಕೊಲೆ ಮಾಡಿಸಿದ ಪತ್ನಿ!
ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಆಕೆಯ ದೇಹದ ಮೇಲೆ ತಲೆ ಮುರಿದಿರುವುದು ಸೇರಿದಂತೆ ಸುಮಾರು 10 ರಿಂದ 12 ಗಾಯಗಳ ಗುರುತುಗಳು ಕಂಡುಬಂದಿವೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದು, ಪ್ರಸ್ತುತ ಆತ ಪರಾರಿಯಾಗಿದ್ದಾನೆ. ಕೆಲವು ದಿನಗಳ ಹಿಂದಷ್ಟೇ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಇಂಥದ್ದೇ ಘಟನೆ ನಡೆದಿತ್ತು.
ಕಳ್ಳತನದ ಅನುಮಾನದ ಮೇಲೆ ತಂದೆಯೊಬ್ಬರು ತನ್ನ ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳನ್ನು ಹಿಂಸಿಸಿದ್ದರು , ಘಟನೆಯಲ್ಲಿ ಒಬ್ಬಳು ಮಗಳು ಪ್ರಾಣ ಕಳೆದುಕೊಂಡಿದ್ದಾರೆ.ದಾದು ಹೈಬತ್ ಯಮ್ಗರ್ ಎಂದು ಗುರುತಿಸಲಾದ ಆರೋಪಿ, 10 ವರ್ಷದ ಸಾನಿಕಾ ಮತ್ತು 11 ವರ್ಷದ ಅನುಜಾ ಅವರನ್ನು ಕಟ್ಟಿಹಾಕಿ ಅವರ ಮನೆಯೊಳಗೆ ತಲೆಕೆಳಗಾಗಿ ನೇತುಹಾಕಿದ್ದ ಎಂದು ತಿಳಿದುಬಂದಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ